ಬ್ರೇಕಿಂಗ್ ನ್ಯೂಸ್
13-10-21 10:44 pm Mangaluru Correspondent ಕರಾವಳಿ
ಉಳ್ಳಾಲ, ಅ.13: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಆಚರಣೆ ಸಂಭ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಉಳ್ಳಾಲದ ವೀರರಾಣಿ ಅಬ್ಬಕ್ಕ, ಕಾರ್ನಾಡ್ ಸದಾಶಿವ ರಾವ್ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆ ಉಳ್ಳಾಲದ ಉಪ ಅಂಚೆ ಕಚೇರಿಯಲ್ಲಿ ಲೋಕಾರ್ಪಣೆ ಮಾಡಲಾಗಿದೆ.
ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗದ ವತಿಯಿಂದ ಸ್ವಾತಂತ್ರ್ಸೋವದ ಅಮೃತ ಮಹೋತ್ಸವ ಸಂಭ್ರಮದ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರರಾದ ಉಳ್ಳಾಲದ ವೀರರಾಣಿ ಅಬ್ಬಕ್ಕ ಮತ್ತು ಕಾರ್ನಾಡ್ ಸದಾಶಿವ ರಾವ್ ಅವರ ಸ್ಮರಣಾರ್ಥ ಮುದ್ರಿತ ವಿಶೇಷ ಅಂಚೆ ಲಕೋಟೆಯನ್ನ ಮಾಜಿ ಸಚಿವ ಯು.ಟಿ ಖಾದರ್ ಲೋಕಾರ್ಪಣೆಗೈದರು.
ಈ ವೇಳೆ ಮಾತನಾಡಿದ ಖಾದರ್ ಅವರು ರಾಣಿ ಅಬ್ಬಕ್ಕನ ಹೆಸರಲ್ಲಿ ಅಂಚೆ ಲಕೋಟೆ ಮಾಡಿದ್ದು ಅದು ದೇಶದ ಮಹಿಳೆಯರಿಗೆ ನೀಡಿದ ಗೌರವ ಮತ್ತು ಪ್ರೇರಣೆ. ಈಗಾಗಲೇ ಉಳ್ಳಾಲದ ಅಬ್ಬಕ್ಕ ವೃತ್ತವನ್ನ 15 ಲಕ್ಷ ರೂಪಾಯಿ ಅನುದಾನದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಅಬ್ಬಕ್ಕ ದೋಣಿ ಏರಿ ತೆಂಗಿನ ಗರಿಯ ದೀವಟಿಗೆಯಿಂದ ಪೋರ್ಚುಗೀಸರ ಹಡಗಿನ ಮೇಲೆ ಆಕ್ರಮಣಗೈದು ಹಿಮ್ಮೆಟ್ಟಿಸಿದ್ದ ಪ್ರತೀಕವಾಗಿ ಉಳ್ಳಾಲ ವೃತ್ತದಲ್ಲಿ ಅಬ್ಬಕ್ಕಳು ದೋಣಿಯಲ್ಲಿ ನಿಂತು ದೀವಟಿಗೆ ಹಿಡಿದ ಪ್ರತಿಮೆಯನ್ನ ಸ್ಥಾಪಿಸುವ ಯೋಜನೆ ಇದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡು ಸದಾಶಿವರಂತೆಯೇ ಕುದ್ಮುಲ್ ರಂಗರಾವ್ ಅವರ ಸ್ಮರಣಾರ್ಥ ಅಂಚೆ ಲಕೋಟೆ ಬಿಡುಗಡೆ ಮಾಡಬೇಕೆಂದು ಶಾಸಕ ಖಾದರ್ ಅವರು ಅಂಚೆ ಇಲಾಖೆಗೆ ಮನವಿ ಮಾಡಿದರು.
ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ತುಕಾರಾಮ ಪೂಜಾರಿ ಮಾತನಾಡಿ ಅಂಚೆ ಇಲಾಖೆಯು ರಾಣಿ ಅಬ್ಬಕ್ಕ ಮತ್ತು ಕಾರ್ನಾಡು ಸದಾಶಿವ ರಾಯರ ಕೀರ್ತಿಯನ್ನ ರಾಷ್ಟ್ರ ಅಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ಕಾರ್ಯ ಮಾಡಿದ್ದು ಶ್ಲಾಘನೀಯ. ಸ್ಪೇನನ್ನ ಸೋಲಿಸಿ ಜಗತ್ತಿನಲ್ಲಿ ಸುದ್ದಿಯಾದ ಬ್ರಿಟನಿನ ರಾಣಿ ಎಲಿಝಬೆತ್ ಇತಿಹಾಸವು, ಪೋರ್ಚುಗೀಸರನ್ನ ಹಿಮ್ಮೆಟ್ಟಿಸಿದ ಉಳ್ಳಾಲದ ರಾಣಿ ಅಬ್ಬಕ್ಕಳಿಗೆ ಹೋಲಿಕೆಯಾಗುತ್ತದೆ. ಯುದ್ಧದಲ್ಲೇ ಅಬ್ಬಕ್ಕ ಹೆಸರಾದುದಲ್ಲ, ಕೂಲಿ ಕಾರ್ಮಿಕರೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿಸಿ ಸರಳತೆಗೆ ಮನೆ ಮಾತಾಗಿದ್ದರು. ಅಬ್ಬಕ್ಕಳು ಪೋರ್ಚುಗೀಸರನ್ನ ಸೋಲಿಸದೇ ಇರುತ್ತಿದ್ದರೆ ನಾವಿಂದು ಬ್ರಿಟಿಷರಿಗಿಂತಲೂ ಕ್ರೂರ ಮತಾಂಧರ ಅಡಿಯಾಳಾಗಿರಬೇಕಿತ್ತು ಎಂದು ಹೇಳಿದರು. ಕಾರ್ನಾಡ್ ಸದಾಶಿವರಾಯರು ಹುಟ್ಟು ಆಗರ್ಭ ಶ್ರೀಮಂತರಾದರೂ ಜನಸೇವೆಗಾಗಿ ಸಾಲಗಾರರಾದ ಧೀಮಂತರು. ಮಹಾತ್ಮ ಗಾಂಧೀಜಿ ಅವರ ಹೆಸರು ಪ್ರಚಲಿತಕ್ಕೆ ಬಾರದ 1917 ರ ಸಮಯದಲ್ಲೇ ಸ್ವಾತಂತ್ರ್ಯ ಹೋರಾಟಕ್ಕಾಗಿ ಗಾಂಧೀಜಿಗೆ ಪತ್ರ ಬರೆದು ಮಂಗಳೂರಿಗೆ ಕರೆಸಿದ ದೇಶಪ್ರೇಮಿ ಎಂದರು.
ಚೌಟ ಮನೆತನದ(ಅಬ್ಬಕ್ಕ ವಂಶಸ್ಥರು) ಕುಲದೀಪ್ ಚೌಟ, ಉಳ್ಳಾಲ ನಗರಸಭಾ ಅಧ್ಯಕ್ಷರಾದ ಚಿತ್ರಕಲಾ, ಉಪಾಧ್ಯಕ್ಷರಾದ ಆಯೂಬ್ ಮಂಚಿಲ ಉಪಸ್ಥಿತರಿದ್ದರು. ಮಂಗಳೂರು ವಿಭಾಗ ಹಿರಿಯ ಅಂಚೆ ಅಧೀಕ್ಷಕರಾದ ಡಾ.ಏಂಜಲ್ ರಾಜ್ ಸ್ವಾಗತಿಸಿದರು. ಮಂಗಳೂರು ಅಂಚೆ ಉಪವಿಭಾಗ ಅಧೀಕ್ಷಕರಾದ ಶ್ರೀನಾಥ್ ವಂದಿಸಿದರು. ಪೋಸ್ಟ್ ಮಾಸ್ಟರ್ ಸುರೇಖ ಕುಡ್ವ ನಿರೂಪಿಸಿದರು.
ಅಬ್ಬಕ್ಕ ಉತ್ಸವ ಸಮಿತಿಗಿಲ್ಲ ಆಹ್ವಾನ
ಉಳ್ಳಾಲದಲ್ಲಿ ರಾಣಿ ಅಬ್ಬಕ್ಕಳ ಅಸ್ಥಿತ್ವಕ್ಕಾಗಿ ಕಳೆದ 25 ವರುಷಗಳಿಂದ ಹೋರಾಟ ನಡೆಸುತ್ತಿರುವ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ)ಗೆ ಇಂದಿನ ಅಂಚೆ ಲಕೋಟೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿಲ್ಲ. ಈ ಬಗ್ಗೆ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷರಾದ ದಿನಕರ ಉಳ್ಳಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಣಿ ಅಬ್ಬಕ್ಕಳ ಹೆಸರಲ್ಲಿ ಅಂಚೆ ಲಕೋಟೆ ಬಿಡುಗಡೆ ಮಾಡಿದ್ದು ಸ್ವಾಗತಾರ್ಹ. ಆದರೆ ಅಬ್ಬಕ್ಕ ಉತ್ಸವ ಸಮಿತಿ, ಮಂಗಳೂರು ವಿ.ವಿಯ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸದಸ್ಯರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸದ್ದು ಖಂಡನೀಯ. ಜಿಲ್ಲಾ ಉಸ್ತುವಾರಿ ಸಚಿವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮ ನಡೆಸಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ದಿನಕರ್ ಉಳ್ಳಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Mangalore Abbaka Rani and Karnad Sadashiva Rao stamp released.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm