ಬ್ರೇಕಿಂಗ್ ನ್ಯೂಸ್
15-10-21 01:27 pm Mangaluru correspondent ಕರಾವಳಿ
ಮಂಗಳೂರು, ಅ.15: ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ತಾಯಿ ಹೆರಿಗೆ ವೇಳೆ ಹೆಣ್ಣಾಗಿದ್ದ ಮಗುವನ್ನು ಡಿಸ್ಚಾರ್ಜ್ ಮಾಡಿದಾಗ ಗಂಡಾಗಿದ್ದ ವಿಚಾರ ಬೆಳಕಿಗೆ ಬಂದಿದ್ದು, ಆಸ್ಪತ್ರೆ ಸಿಬಂದಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಬಂದರು ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದಾರೆ.
ಕುಂದಾಪುರ ಮೂಲದ 27 ವರ್ಷದ ಸಮ್ರೀನ್ ಎಂಬ ಮಹಿಳೆಯನ್ನು ಸೆ.27ರಂದು ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂಬತ್ತು ತಿಂಗಳು ಪೂರ್ತಿಯಾಗದಿದ್ದರೂ, ಮಹಿಳೆಗೆ ಬಿಪಿ ಸಮಸ್ಯೆ ಇದ್ದುದರಿಂದ ಅದೇ ದಿನ ರಾತ್ರಿ ಆಪರೇಶನ್ ಮೂಲಕ ಹೆರಿಗೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮಗುವನ್ನು ಹೆಣ್ಣೆಂದು ಆಸ್ಪತ್ರೆ ಸಿಬಂದಿ ತಿಳಿಸಿದ್ದರು. ಪೂರ್ತಿ ಬೆಳೆದಿರದ ಕಾರಣ ಮಗುವನ್ನು ಸಹಜವಾಗೇ ಐಸಿಯು ಘಟಕದಲ್ಲಿ ಇಡಲಾಗಿತ್ತು.

ಆದರೆ, 18 ದಿನ ಕಳೆದರೂ ಮಗುವಿನ ಆರೋಗ್ಯ ಸ್ಥಿತಿ ಸುಧಾರಣೆ ಆಗಿರಲಿಲ್ಲ. ಹೀಗಾಗಿ ಪೋಷಕರು ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿ, ಅ.14ರಂದು ಲೇಡಿಗೋಷನ್ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿದ್ದರು. ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಮಗುವನ್ನು ಆಂಬುಲೆನ್ಸ್ ಮೂಲಕ ಒಯ್ಯಲಾಗಿತ್ತು. ಆದರೆ, ಅಲ್ಲಿ ತೆರಳಿ ನೋಡಿದರೆ, ಸಿಬಂದಿ ಕಳಿಸಿಕೊಟ್ಟಿದ್ದ ಮಗು ಹೆಣ್ಣಾಗಿತ್ತು. ಇದರಿಂದ ಆತಂಕಕ್ಕೀಡಾದ ಪೋಷಕರು ಮಗುವನ್ನು ಮರಳಿ, ಲೇಡಿಗೋಷನ್ ಆಸ್ಪತ್ರೆಗೆ ತಂದು ವೈದ್ಯರನ್ನು ತರಾಟೆಗೆತ್ತಿಕೊಂಡಿದ್ದಾರೆ.
ನೀವು ನೀಡಿದ ದಾಖಲೆಗಳಲ್ಲಿಯೂ ಮಗುವನ್ನು ಹೆಣ್ಣೆಂದು ತೋರಿಸಿದ್ದೀರಿ. 18 ದಿನಗಳಿಂದ ನಮಗೂ ಅದೇ ಮಾತನ್ನು ಹೇಳಿದ್ದು, ನಾವದನ್ನು ನಂಬಿದ್ದೆವು. ಆರೋಗ್ಯ ಪೂರ್ಣವಾಗಿಲ್ಲವೆಂದು ಚಿಕಿತ್ಸೆ ನೀಡಲಾಗಿತ್ತು. ಆದರೆ, ಈಗ ಮಗುವನ್ನು ನೋಡಿದರೆ ಅದಕ್ಕೆ ಜನನದಲ್ಲೇ ಸಮಸ್ಯೆ ಇದೆ. ಮಲದ್ವಾರ ಇಲ್ಲದಿರುವುದು ಕಂಡುಬಂದಿದ್ದು, ಇದಕ್ಕೆ ಯಾರು ಹೊಣೆ. ಮಗುವಿಗೆ ಈ ರೀತಿ ಯಾವುದೇ ಸಮಸ್ಯೆ ಇದ್ದರೂ ಹೇಳಬೇಕಿತ್ತು. ಹೆಣ್ಣು ಮಗುವೆಂದು ಹೇಳಿ, ಈಗ ಗಂಡು ಮಗುವನ್ನು ಕೊಟ್ಟಿದ್ದರ ಹಿಂದೆ ನಿಮ್ಮ ಅಜೆಂಡಾ ಏನಿದೆ ಎಂದು ಮಗುವಿನ ತಂದೆ ಮುಸ್ತಫಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಈ ಬಗ್ಗೆ ಮಾಹಿತಿ ಪಡೆದ ಮೂಲ್ಕಿಯ ಆಪತ್ಬಾಂಧವ ಆಸಿಫ್ ಮತ್ತಿತರ ಸಾಮಾಜಿಕ ಕಾರ್ಯಕರ್ತರು ಲೇಡಿಗೋಷನ್ ಆಸ್ಪತ್ರೆಗೆ ಬಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಗು ಅದಲು ಬದಲು ಮಾಡಿದ್ದರ ಹಿಂದೆ ಏನೋ ಅಜೆಂಡಾ ಇದ್ದಂತಿದೆ. ಸಿಬಂದಿಯೇ ಬದಲಿಸಿ ಕೊಟ್ಟಿದ್ದಾರೆಯೇ ಎನ್ನುವ ಅನುಮಾನ ಇದೆ. ಈ ಬಗ್ಗೆ ತನಿಖೆಯಾಗಬೇಕು. ಅಲ್ಲದೆ, ಮಗುವಿನ ಪೋಷಕರ ದೃಢೀಕರಣಕ್ಕಾಗಿ ಡಿಎನ್ಎ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
A family from Kundapur has alleged bungling by the doctors of Lady Goschen Hospital here. The parents claim that the hospital had issued records during the delivery, confirming that the newborn was female. However, after 18 days, when the child was taken to another hospital for advanced treatment, they came to know that their baby was male. This has given rise to a sense of indignation and suspicion in them.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm