ಸೊಕ್ಕಿದ ಹೋರಿಗಳ ಬೀದಿ ಕಾಳಗ ; ಆಳ ಬಾವಿಗೆ ಬಿದ್ದು ಒದ್ದಾಡಿದ ಹೋರಿ ರಕ್ಷಣೆಗೆ ಎನ್ ಡಿಆರ್ ಎಫ್ ಕಾರ್ಯಾಚರಣೆ 

16-10-21 11:24 am       Mangaluru Correspondent   ಕರಾವಳಿ

ಮೂರು ಬೀಡಾಡಿ ಹೋರಿಗಳು ಪರಸ್ಪರ ಡಿಚ್ಚಿ ಹೊಡೆದು ಬೀದಿ ಕಾಳಗ ಎಸಗಿದ ಪರಿಣಾಮ ಒಂದು ಹೋರಿ ಆಳ ಬಾವಿಗೆ ಬಿದ್ದು NDRF ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಹೋರಿಯನ್ನ ಬಾವಿಯಿಂದ ಮೇಲಕ್ಕೆತ್ತಿದ ಘಟನೆ ಕುಂಪಲ ಆಶ್ರಯ ಕಾಲನಿಯಲ್ಲಿ ನಡೆದಿದೆ. 

ಉಳ್ಳಾಲ, ಅ.16: ಮೂರು ಬೀಡಾಡಿ ಹೋರಿಗಳು ಪರಸ್ಪರ ಡಿಚ್ಚಿ ಹೊಡೆದು ಬೀದಿ ಕಾಳಗ ಎಸಗಿದ ಪರಿಣಾಮ ಒಂದು ಹೋರಿ ಆಳ ಬಾವಿಗೆ ಬಿದ್ದು NDRF ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಹೋರಿಯನ್ನ ಬಾವಿಯಿಂದ ಮೇಲಕ್ಕೆತ್ತಿದ ಘಟನೆ ಕುಂಪಲ ಆಶ್ರಯ ಕಾಲನಿಯಲ್ಲಿ ನಡೆದಿದೆ. 

ಇಂದು ಬೆಳಗ್ಗೆ ಕುಂಪಲ ಆಶ್ರಯ ಕಾಲನಿ ಕೊರಗಜ್ಜನ ಕ್ಷೇತ್ರದ ಬಳಿ ಮೂರು ಬೀಡಾಡಿ ಹೋರಿಗಳು ಪರಸ್ಪರ ಡಿಚ್ಚಿ ಹೊಡೆಯುತ್ತಾ ನಿರಂತರವಾಗಿ ಬೀದಿಜಗಳ ನಡೆಸಿವೆ. ಈ ವೇಳೆ ಪರಸ್ಪರ ನುಗ್ಗಿಕೊಂಡು ಜಾಡಿಸಿಕೊಂಡು ಹೋಗಿ ಒಂದು ಹೋರಿ ಪಕ್ಕದ ಖಾಸಗಿ ಪ್ರದೇಶದ ಆಳ ಬಾವಿಗೆ ಬಿದ್ದಿದೆ. ರಾಜೇಶ್ ಎಂಬವರು ಬಾಡಿಗೆ ವಾಸವಿರುವ ಮನೆಯಂಗಳದ ಬಾವಿಗೆ ಹೋರಿ ಬಿದ್ದಿದ್ದು‌ ಸ್ಥಳೀಯರಿಗೆ ಭಾರೀ ಗಾತ್ರದ ಹೋರಿಯನ್ನ ಮೇಲಕ್ಕೆತ್ತಲು ಸಾಧ್ಯವಾಗದೆ ಅಗ್ನಿಶಾಮಕ ದಳಕ್ಕೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಹೋರಿಯನ್ನ ಹಗ್ಗದ ಮೂಲಕ ಮೇಲಕ್ಕೆತ್ತಿ ರಕ್ಷಿಸಿದ್ದು, ಆಪರೇಷನ್ ಹೋರಿ ಕಾರ್ಯಾಚರಣೆ ಸಕ್ಸಸ್ ಆಗಿದೆ.

Bullfight lands in trouble after Bull falls into a deep well at Kumpala in Mangalore. NDRF team came to the spot and have rescued the Bull.