ಬ್ರೇಕಿಂಗ್ ನ್ಯೂಸ್
16-10-21 01:27 pm Headline Karnataka News Network ಕರಾವಳಿ
ಉಡುಪಿ, ಅ.16: ಜಿಹಾದ್ ಅನ್ನೋದು ಮುಸ್ಲಿಮರ ಧರ್ಮ ಯುದ್ಧ. ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿಸಲು ಜಗತ್ತಿನ ಮುಸ್ಲಿಂ ದೇಶಗಳು ಪಣ ತೊಟ್ಟಿವೆ. ಇದಕ್ಕಾಗಿ ಜಿಹಾದ್ ಹೆಸರಲ್ಲಿ ಭಾರತ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಧರ್ಮ ಯುದ್ಧವನ್ನು ಸಾರಿವೆ ಎಂದು ಹಿಂದು ಜಾಗರಣ ವೇದಿಕೆ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಹೇಳಿದ್ದಾರೆ.
ವಿಜಯದಶಮಿ ಪ್ರಯುಕ್ತ ಉಡುಪಿಯಲ್ಲಿ ಹಮ್ಮಿಕೊಂಡಿದ್ದ ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಜಗದೀಶ ಕಾರಂತ ಭಾಷಣ ಮಾಡಿದರು. ಸಿರಿಯಾದ ಐಸಿಸ್ ಅನ್ನೋದು ತಾಲಿಬಾನಿಗಳ ಸೋದರ ಸಂಘಟನೆ. ಈ ಐಸಿಸ್ ಉಗ್ರವಾದಿ ಸಂಘಟನೆಗಳಿಗೆ ನಮ್ಮ ಏರಿಯಾದಲ್ಲಿಯೂ ಬೆಂಬಲ ಸಿಗುತ್ತಿದೆ. ನಮ್ಮ ನಡುವಿನಿಂದಲೇ ಐಸಿಸ್ ಕಾರ್ಯಕರ್ತರನ್ನಾಗಿ ಸೇರ್ಪಡೆಯೂ ಮಾಡಲಾಗುತ್ತಿದೆ. ಈ ರೀತಿಯ ಚಟುವಟಿಕೆ ಬಗ್ಗೆ ಹಿಂದುಗಳು ನಿಗಾ ಇಡಬೇಕು ಮತ್ತು ಇಂಥವನ್ನು ಹತ್ತಿಕ್ಕುವ ಕೆಲಸ ಮಾಡಬೇಕು. ಮಂಗಳೂರಿನಲ್ಲಿ ಸಿಎಎ ನೆಪದಲ್ಲಿ ನಡೆದ ಹಿಂಸಾಚಾರ ಅತ್ಯಂತ ವ್ಯವಸ್ಥಿತವಾಗಿ ನಡೆದಿತ್ತು. ಸಿಎಎ ಕಾಯ್ದೆಯು ಒಂದು ಕಾಲದಲ್ಲಿ ಭಾರತದ ಭಾಗವೇ ಆಗಿದ್ದ ಪಾಕಿಸ್ಥಾನ, ಅಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಅಲ್ಪಸಂಖ್ಯಾತರಿಗೆ ನಾಗರಿಕ ಹಕ್ಕುಗಳನ್ನು ನೀಡುವ ಕಾಯ್ದೆ. ಅದರಿಂದ ಮಂಗಳೂರಿನ ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆ ಆಗೋದಿಲ್ಲ.
ಆದರೆ, ಮಂಗಳೂರಿನಲ್ಲಿ ನಡೆದ ಸಿಎಎ ಪ್ರತಿಭಟನೆಯ ನೆಪದಲ್ಲಿ ಹಿಂಸಾಚಾರ ನಡೆಸಲಾಯ್ತು. ಆಟೋ, ಟೆಂಪೋ, ಗೂಡ್ಸ್ ವಾಹನಗಳಲ್ಲಿ ಕಲ್ಲುಗಳನ್ನು ತಂದು, ಪೊಲೀಸರ ಮೇಲೆ ಪ್ರಯೋಗ ಮಾಡಲಾಯ್ತು. ಸಾವಿರಾರು ಮುಸ್ಲಿಮರು ಸೇರಿ ಹಿಂಸಾಚಾರ ನಡೆಸಿದರು. ಇದನ್ನು ಅವರು ಪತ್ತರ್ ಫೆಂಕೋ ಚಳವಳಿ ಎಂದು ಕರೆದರು. ಅಂದಿನ ಪೊಲೀಸ್ ಕಮಿಷನರ್ ಪಿ.ಎಸ್. ಹರ್ಷ, ಶೂಟ್ ಅಂಡ್ ಸೈಟ್ ಆದೇಶ ಮಾಡದೇ ಇರುತ್ತಿದ್ದರೆ ಆವತ್ತಿನ ಸ್ಥಿತಿ ಬೇರೆಯದೇ ಆಗಿರುತ್ತಿತ್ತು ಎಂದು ಜಗದೀಶ ಕಾರಂತ ವಿಶ್ಲೇಷಣೆ ಮಾಡಿದ್ದಾರೆ.
ದುರ್ಗಾ ದೌಡ್ ಅನ್ನೋದು ಕರಾವಳಿಯ ದುಷ್ಟ ಶಕ್ತಿಗಳ ವಿರುದ್ಧದ ಒಗ್ಗಟ್ಟಿನ ಮಂತ್ರ ಅಷ್ಟೇ. ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಗಲಭೆ ಆಗಿದ್ದರೆ, ಅದಕ್ಕೆ ನಿಶ್ಚಿತ ಕಾರಣ ಇಲ್ಲದೇ ಆಗಿದ್ದಲ್ಲ. ಸಂಜೆ 4.30ರ ವೇಳೆಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದುಬಂದ ಸಂದೇಶಕ್ಕೆ ಪ್ರತಿಯಾಗಿ ಅದೇ ಸಂಜೆ 7.30ರ ವೇಳೆಗೆ ಸಾವಿರಾರು ಜನರು ಪೊಲೀಸ್ ಠಾಣೆಗಳಲ್ಲಿ ಸೇರಿದ್ದರು. ಆನಂತರ, ರಾತ್ರಿ 10 ಗಂಟೆ ಆಗುವಾಗ ಆ ಠಾಣೆ ವ್ಯಾಪ್ತಿಯ ಹಿಂದುಗಳ ಮನೆಗಳಿಗೆ ನುಗ್ಗಿದ್ದಲ್ಲದೆ, ಬೆಂಕಿ ಇಕ್ಕುವ ಕೆಲಸ ವ್ಯವಸ್ಥಿತವಾಗಿ ನಡೆದಿತ್ತು. ಆಗಸ್ಟ್ 15ರಂದು ಕಬಕದಲ್ಲಿ ಅದೇ ರೀತಿಯ ದುಷ್ಕೃತ್ಯ ನಡೆದಿತ್ತು. ಸರಕಾರಿ ಕಾರ್ಯಕ್ರಮ ನಡೆಸುತ್ತಿದ್ದ ಸ್ವಾತಂತ್ರ್ಯ ರಥವನ್ನು ತಡೆದು, ಧಿಕ್ಕಾರ ಕೂಗಿದರು. ಆನಂತರ, ರಥದಲ್ಲಿದ್ದ ಸಾವರ್ಕರ್ ಫೋಟೋ ತೆಗೆದು ಟಿಪ್ಪು ಸುಲ್ತಾನ್ ಫೋಟೋ ಹಾಕಲು ಒತ್ತಾಯಿಸಿದರು. ಜ.26ರಂದು ದೆಹಲಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗ, ರೈತರ ಹೆಸರಲ್ಲಿ ತಾಲಿಬಾನಿ ಮನಸ್ಥಿತಿಯ ಗೂಂಡಾಗಳು ಹಿಂಸಾಚಾರ ನಡೆಸಿದರು.
ಇವ್ಯಾವುದು ಕೂಡ ಅನಿರೀಕ್ಷಿತ ಘಟನೆಗಳಲ್ಲ. ಇವೆಲ್ಲವೂ ಗ್ಲೋಬಲ್ ಇಸ್ಲಾಮೈಸೇಶನ್ ಅನ್ನುವುದರ ಭಾಗ. ಸಂಘಟಿತ ನೆಲೆಯಲ್ಲಿ ನಡೆಯುತ್ತಿರುವ ಯುದ್ಧ. ಇದರ ಹಿಂದಿನ ಅಜೆಂಡಾ ಒಂದೇ, ಭಾರತವನ್ನು ಇಸ್ಲಾಮಿಕ್ ದೇಶ ಮಾಡೋದು. ಕೇರಳದ ಕರಾವಳಿ ಪೂರ್ತಿ ಇಸ್ಲಾಮೀಕರಣ ಆಗಿ ಹತ್ತು ವರ್ಷ ಕಳೆದಿದೆ. ಈಗ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗೂ ಜಿಹಾದ್ ಕಾಲಿಟ್ಟಿದೆ. ಉಳ್ಳಾಲದಲ್ಲಿ ಲ್ಯಾಂಡ್ ಜಿಹಾದ್ ಶುರುವಾಗಿದೆ. ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಇರುವಲ್ಲಿ ಗೋಹತ್ಯೆ ಮತ್ತು ಲವ್ ಜಿಹಾದ್ ಆಗಕೂಡದು. ಅವರು ನಮ್ಮ ಮೀನುಗಾರ ಮಹಿಳೆಯರಿಂದ ಮೀನು ಖರೀದಿಸಲ್ಲ ಅಂತಾದರೆ, ನಾವು ಕೂಡ ಅವರ ಚಪ್ಪಲಿ ಅಂಗಡಿಗಳಿಂದ ಚಪ್ಪಲಿ ಖರೀದಿಸಲ್ಲ, ಅವರ ಹೊಟೇಲ್, ವ್ಯಾಪಾರ ಕೇಂದ್ರಗಳಲ್ಲಿ ವ್ಯಾಪಾರಕ್ಕೆ ಹೋಗಲ್ಲ ಎಂದು ನಿರ್ಧಾರಕ್ಕೆ ಬರಬೇಕಾಗುತ್ತದೆ. ನಾವು ಯಾರಿಗೂ ಯಾವ ತೊಂದರೆಯನ್ನೂ ಮಾಡೋದಿಲ್ಲ. ಹಾಗೆಂದು ನಮ್ಮ ತಂಟೆಗೆ ಬಂದು ತೊಂದರೆ ಮಾಡಲು ಮುಂದಾದರೆ ಅದನ್ನು ಸಹಿಸಿಕೊಂಡಿರಲಿಕ್ಕೆ ಸಾಧ್ಯವಿಲ್ಲ ಎಂದು ಜಗದೀಶ ಕಾರಂತ ಹೇಳಿದರು.
ಸಮಾವೇಶಕ್ಕೂ ಮುನ್ನ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಿಂದ ಅಂಬಲಪಾಡಿ ಬೈಪಾಸ್ ವರೆಗೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಜಿಲ್ಲೆಯ ನಾನಾ ಕಡೆಗಳಿಂದ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು.
ವಿಶು ಶೆಟ್ಟಿ ಅಂಬಲಪಾಡಿ ಸ್ವಾಗತಿಸಿದರು. ರವಿರಾಜ್ ಶೆಟ್ಟಿ ಕಡಬ, ಅರವಿಂದ ಕೋಟೇಶ್ವರ, ರಾಧಾಕೃಷ್ಣ ಅಡ್ಯಂತಾಯ, ಚಿನ್ಮಯ್ ಈಶ್ವರಮಂಗಲ, ಪ್ರಸಾದ್ ನಾಯಕ್ ಕಾರ್ಕಳ, ಮಹೈಶ್ ಬೈಲೂರು, ಕಿಶೋರ್ ಮಂಗಳೂರು, ಪ್ರಸಾದ್ ಕುಕ್ಕೆಹಳ್ಳಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಚಿವ ಸುನಿಲ್ ಕುಮಾರ್, ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಕೂಡ ಉಪಸ್ಥಿತರಿದ್ದರು.
“Jihad is a religious war which is aiming to convert India into an Islamic nation. All the Muslim nations of the world are involved in this,” said Jagadish Karanth, south zone organizing secretary for Hindu Jagarana Vedike (HJV). He was addressing the large public meet held on the occasion of Vijayadashami by the name ‘Durga Daud’.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm