ಬ್ರೇಕಿಂಗ್ ನ್ಯೂಸ್
21-10-21 05:12 pm Mangaluru Correspondent ಕರಾವಳಿ
ಮಂಗಳೂರು, ಅ.21: ಪುಕ್ಕಟೆ ಸಿಕ್ಕರೆ ತನಗೂ ಇರಲಿ, ತನ್ನಪ್ಪನಿಗೂ ಇರಲಿ ಎನ್ನುವ ಈಗಿನ ಕಾಲಮಾನದಲ್ಲಿ ಏನಾದ್ರೂ ದೊಡ್ಡ ಮೌಲ್ಯದ ಗಂಟು ಸಿಕ್ಕರೆ ಅದನ್ನು ಹಿಂದಿರುಗಿಸುವುದುಂಟೇ..? ಒಂದೆರಡು ಬೆರಳೆಣಿಕೆಯ ಮಂದಿಯಷ್ಟೇ ಅಂಥ ಗಂಟು ಸಿಕ್ಕಿದರೂ, ಅದರ ಮೂಲ ವಾರೀಸುದಾರ ಯಾರೆಂದು ಹುಡುಕುವ ಅಥವಾ ಅವರಿಗೆ ತಲುಪಿಸುವ ಪ್ರಯತ್ನ ಮಾಡುತ್ತಾರೆ. ಅದೇ ರೀತಿಯ ಪ್ರಸಂಗದಲ್ಲಿ ಇಲ್ಲೊಬ್ಬ ಚಿನ್ನಾಭರಣಗಳಿದ್ದ ಗಂಟನ್ನೇ ಕಳಕೊಂಡಿದ್ದ. ಆದರೆ, ಅದೃಷ್ಟ ನೆಟ್ಟಗಿತ್ತು. ಚಿನ್ನದ ಗಂಟು ಮತ್ತೆ ಪಡೆದಿದ್ದಾನೆ.
ಈ ಪ್ರಸಂಗ ನಡೆದಿದ್ದು ಕುಂದಾಪುರ- ಮಂಗಳೂರು ಎಕ್ಸ್ ಪ್ರೆಸ್ ಬಸ್ಸಿನಲ್ಲಿ. ಕುಂದಾಪುರದಲ್ಲಿ ಬಸ್ ಹತ್ತಿದ್ದ ಯುವಕನೊಬ್ಬ ತೆಕ್ಕಟ್ಟೆಯಲ್ಲಿ ಇಳಿದು ಹೋಗಿದ್ದ. ಕಂಡಕ್ಟರ್ ಆತ ಕುಳಿತಿದ್ದ ಸೀಟು ನೋಡಿದರೆ, ಅಲ್ಲೊಂದು ಬ್ಯಾಗ್ ಇತ್ತು. ಬ್ಯಾಗಿನಲ್ಲಿ ಕರಿಮಣಿ ಸರ, ಮೂರು ಬಳೆಗಳು ಮತ್ತು ಒಂದು ಮೊಬೈಲ್ ಇತ್ತು. ಇದನ್ನು ನೋಡಿದ ಕಂಡೆಕ್ಟರ್ ಏನು ಮಾಡುವುದೆಂದು ತೋಚದೆ ತನ್ನ ಗೆಳೆಯ ಪ್ರತಾಪ್ ಗೆ ಫೋನ್ ಮಾಡಿದ್ದಾರೆ.



ದುರ್ಗಾಂಬಾ ಬಸ್ಸಿನಲ್ಲಿ ಚಾಲಕರಾಗಿರುವ ಪ್ರತಾಪ್, ಬಸ್ಸಿನಲ್ಲಿ ಯಾರಾದ್ರೂ ಪೊಲೀಸರು ಇದ್ದರೆ ಅವರ ಕೈಗೆ ಒಪ್ಪಿಸಿ, ಫೋಟೋ ತೆಗೆದು ಕಳಿಸಿ ಎಂದು ಹೇಳಿದ್ದರು. ಬಸ್ ಕಂಡಕ್ಟರ್ ವಿಟ್ಲ ಮೂಲದ ಗೋಪಾಲ್, ಬಸ್ಸಿನಲ್ಲಿ ನೋಡಿದಾಗ ಕೋಟ ಠಾಣೆಯಲ್ಲಿ ಸಿಬಂದಿ ಆಗಿರುವ ಒಬ್ಬರು ಇದ್ದುದನ್ನು ನೋಡಿ ಚಿನ್ನಾಭರಣದ ಬ್ಯಾಗನ್ನು ಅವರ ಕೈಗೆ ನೀಡಿದ್ದಾರೆ. ಇತ್ತ ಬಸ್ ಡ್ರೈವರ್ ಪ್ರತಾಪ್, ಚಿನ್ನಾಭರಣ ಮತ್ತು ಮೊಬೈಲಿನ ಫೋಟೊವನ್ನು ವಾಟ್ಸಪ್ ಜಾಲತಾಣದಲ್ಲಿ ಹಾಕಿದ್ದು, ಅದರ ಜೊತೆಗೆ ಈ ಚಿನ್ನಾಭರಣದ ಬ್ಯಾಗ್ ಕಳಕೊಂಡವರು ತನ್ನ ನಂಬರಿಗೆ ಕರೆ ಮಾಡುವಂತೆ ತಿಳಿಸಿದ್ದರು. ಅವರದೇ ನಂಬರ್ ಹಾಕಿದ್ದ ಮೆಸೇಜ್ ಉಡುಪಿಯಲ್ಲಿ ವೈರಲ್ ಆಗಿದ್ದು, ಚಿನ್ನ ಕಳಕೊಂಡಿದ್ದ ಯುವಕನಿಗೆ ಸಿಕ್ಕಿತ್ತು.

ಆನಂತರ, ಫೋನ್ ಮಾಡಿದ ಯುವಕನಿಗೆ ಕೋಟ ಠಾಣೆಗೆ ತೆರಳಲು ಸೂಚಿಸಿದ್ದು, ಅಲ್ಲಿ ಚಿನ್ನದ ಮಾಹಿತಿ ನೀಡಿ ಅದನ್ನು ಒಯ್ದಿದ್ದಾನೆ. ಈ ಮೂಲಕ ಚಿನ್ನಾಭರಣದ ಬ್ಯಾಗ್ ಕಳಕೊಂಡಿದ್ದಾತನಿಗೇ ಅದು ಮರಳಿ ಸಿಕ್ಕಿದಂತಾಗಿದೆ. ಚಿನ್ನಾಭರಣವನ್ನು ಮರಳಿ ಅದರ ವಾರೀಸುದಾರನಿಗೆ ಒಪ್ಪಿಸಲು ಬಸ್ ಕಂಡಕ್ಟರ್ ಮತ್ತು ಅವರ ಗೆಳೆಯ ಚಾಲಕ ಪ್ರತಾಪ್ ಮಾಡಿದ ಮಾನವೀಯ ಕಾರ್ಯ ಪ್ರಶಂಸೆಗೆ ಕಾರಣವಾಗಿದೆ.
Kundapura Shreyas Bus conductor Goapl returns a Gold jewelry bag to the passenger who had left it and got down at tekkatte. Prathap Driver of Durgamba Bus suggested Gopal return the bag to Kota Police station. Pratap posted a message on WhatsApp which turned Viral on social media upon which the real owner came to Kota police and collected his belongings.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
04-10-26 07:07 pm
HK News Staffer
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
Smith Machar, Mankind Pharma: 180 ಜೀವ ಉಳಿಸಿದ...
03-10-26 01:00 pm
ಹನುಮಾನ್ ಚಾಲೀಸಾ ಜಪಿಸುತ್ತಲೇ ಕಾಕ್ಪಿಟ್ ಬಾಗಿಲು ತೆ...
02-10-26 05:28 pm
ಇಸ್ರೇಲ್ ತೆರಳುತ್ತಿದ್ದ ವಿಮಾನ ಹೈಜಾಕ್ ಯತ್ನ ? ಒಮಾ...
02-10-26 10:23 am
03-10-26 09:56 pm
HK News Staffer
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
KSCA, Mangaluru: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ...
02-10-26 05:20 pm
Sowjanya case, Lokesh Jagalsar: ಸೌಜನ್ಯ ಪ್ರಕರಣ...
02-10-26 10:25 am
Madoor Yusuf Murder Case: ಜೈಲಿನಲ್ಲಿ ಮಾಡೂರು ಯೂ...
01-10-26 10:45 pm
04-10-26 12:51 pm
HK News Staffer
ಪುತ್ತೂರು ; ವಿದ್ಯುತ್ ಸ್ಪರ್ಶಿಸಿ ಪವರ್ಮ್ಯಾನ್ ಸಾ...
03-10-26 08:46 pm
Mangalore Crime, Mangalore Police, Delhi Thie...
03-10-26 06:39 pm
Kasaragod crime: ಕಾಸರಗೋಡು ; ಮನೆ ಮೇಲೆ ಬಿದ್ದ ಬೋ...
03-10-26 05:05 pm
Infra Developers, Vasudevan: ಬೆಂಗಳೂರಿನಲ್ಲಿ ಫ್...
03-10-26 03:41 pm