ಬ್ರೇಕಿಂಗ್ ನ್ಯೂಸ್
30-10-21 09:21 pm Mangaluru Correspondent ಕರಾವಳಿ
ಮಂಗಳೂರು, ಅ.30: ಸುರತ್ಕಲ್ ಜಂಕ್ಷನ್ ಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹೆಸರನ್ನಿಡಲು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮತ್ತು ಆ ಭಾಗದ ಬಿಜೆಪಿ ಕಾರ್ಪೊರೇಟರುಗಳು ಮಹಾನಗರ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಸ್ತಾವನೆಯ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರಲು ಮೇಯರ್ ಪ್ರೇಮಾನಂದ ಶೆಟ್ಟಿ ಸ್ಥಾಯಿ ಸಮಿತಿಗೆ ರವಾನಿಸಿದ್ದಾರೆ.
ವೀರ ಸಾವರ್ಕರ್ ಹೆಸರಿನ ಪ್ರಸ್ತಾವಕ್ಕೆ ಕಾಂಗ್ರೆಸ್ ಮತ್ತು ಎಸ್ ಡಿಪಿಐ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಸ್ಥಾಯಿ ಸಮಿತಿ ಸಭೆಯ ಚರ್ಚೆಯಲ್ಲಿ ಭಾಗವಹಿಸಲು ತಮಗೂ ಅವಕಾಶ ನೀಡಬೇಕೆಂದು ಅಹವಾಲು ಸಲ್ಲಿಸಿದ್ದಾರೆ. ಸುರತ್ಕಲ್ ಭಾಗದ ಎಸ್ ಡಿಪಿಐ ಸದಸ್ಯರಾದ ಮುನೀರ್ ಮತ್ತು ಅಬುಬಕ್ಕರ್ ಈ ಬಗ್ಗೆ ಮೇಯರ್ ಅವರಿಗೆ ಅಹವಾಲು ನೀಡಿದ್ದಾರೆ. ಅಲ್ಲದೆ, ಪಾಲಿಕೆಯ ಪ್ರತಿಪಕ್ಷ ನಾಯಕ ವಿನಯರಾಜ್ ಕೂಡ ಬಿಜೆಪಿ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಅವಕಾಶ ಕೇಳಿದ್ದಾರೆ.
ಇತ್ತೀಚೆಗೆ ವೀರ ಸಾವರ್ಕರ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಸ್ವಾತಂತ್ರ್ಯ ರಥದಲ್ಲಿ ಅಳವಡಿಸಿ, ಕಾರ್ಯಕ್ರಮ ಏರ್ಪಡಿಸಿದ್ದಾಗ ಎಸ್ ಡಿಪಿಐ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಗಲಾಟೆ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿತ್ತು. ಸ್ವಾತಂತ್ರ್ಯ ದಿನದಂದೇ ಕಬಕದಲ್ಲಿ ನಡೆದ ಕಾರ್ಯಕ್ರಮಕ್ಕೆ ಧಿಕ್ಕಾರ ಕೂಗಿದ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಐದಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.
ಆನಂತರ, ಮಂಗಳೂರಿನ ಬಿಜೆಪಿ ಶಾಸಕ ಭರತ್ ಶೆಟ್ಟಿ ಸಾವರ್ಕರ್ ಪರವಾಗಿ ಬ್ಯಾಟಿಂಗ್ ಮಾಡಿದ್ದರು. ರಾಜ್ಯದ ಹಲವೆಡೆ ಬಿಜೆಪಿ ಕಾರ್ಯಕರ್ತರು ಸಾವರ್ಕರ್ ಪರವಾಗಿ ಘೋಷಣೆ ಕೂಗುತ್ತಾ ಬೆಂಬಲ ಸಾರಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿಯ ರಾಜ್ಯ ನಾಯಕರು ಸಾವರ್ಕರ್ ವಿಚಾರದಲ್ಲಿ ಪರ- ವಿರೋಧ ಹೇಳಿಕೆ ನೀಡಿ ವಿವಾದಕ್ಕೆ ತುಪ್ಪ ಸುರಿದಿದ್ದರು. ಇದೀಗ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ತಾನು ಪ್ರತಿನಿಧಿಸುವ ಸುರತ್ಕಲ್ ಪೇಟೆಯ ಜಂಕ್ಷನ್ನಿಗೆ ಸಾವರ್ಕರ್ ಜಂಕ್ಷನ್ ಹೆಸರಿಡಲು ಮುಂದಾಗಿದ್ದಾರೆ. ಆಮೂಲಕ ಸಾವರ್ಕರ್ ಪರವಾಗಿ ಹೊಸ ದಾಳವನ್ನು ಉರುಳಿಸಿದ್ದಾರೆ.
ನಿಜಕ್ಕಾದರೆ, ಈ ವಿಚಾರವನ್ನು ಮಹಾನಗರ ಪಾಲಿಕೆಯ ಕೌನ್ಸಿಲ್ ಮೀಟಿಂಗ್ ನಲ್ಲಿ ಮುಂದಿಟ್ಟು ಚರ್ಚೆ ನಡೆಸಬೇಕಾಗಿತ್ತು. ಆದರೆ, ಬಿಜೆಪಿ ನಾಯಕರು ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರಲು ಮುಂದಾಗಿದ್ದಾರೆ. ಕಳೆದ ಬಾರಿ ನಗರದ ಲೇಡಿಹಿಲ್ ಸರ್ಕಲ್ ಗೆ ನಾರಾಯಣ ಗುರು ಸರ್ಕಲ್ ಎಂದು ನಾಮಕರಣ ಮಾಡುವ ವಿಚಾರದಲ್ಲಿ ಪರ- ವಿರೋಧ ಚರ್ಚೆ ನಡೆದಿತ್ತು. ಆನಂತರ, ಪಾಲಿಕೆಯಲ್ಲಿ ಈ ಬಗ್ಗೆ ನಿರ್ಧರಿಸಿ ರಾಜ್ಯ ಸರಕಾರಕ್ಕೆ ರವಾನೆಯಾಗಿತ್ತು. ಅದಿನ್ನೂ ಜಾರಿಗೆ ಬಂದಿಲ್ಲ. ಈ ನಡುವೆ, ಸುರತ್ಕಲ್ ಪೇಟೆಗೆ ಸಾವರ್ಕರ್ ಹೆಸರಿಡುವ ವಿಚಾರ ಮುನ್ನೆಲೆಗೆ ಬಂದಿದ್ದು ಮತ್ತೊಂದು ವಿವಾದದ ಬಿರುಗಾಳಿ ಎಬ್ಬಿಸಲಿದೆ.
Mangalore MLA Bharath Shetty and local corporators have planned to name Surathkal Junction as Savarkar Circle for which a memorandum has been submitted to the Mayor of Mangalore City Corporation.
08-01-25 09:26 pm
Bangalore Correspondent
ಬೆಂಗಳೂರು, ಬೆಳಗಾವಿ, ಚಿಕ್ಕಮಗಳೂರು ಸೇರಿ ರಾಜ್ಯದಾದ್...
08-01-25 03:39 pm
VHMP virus, CM Siddaramaiah: ಎಚ್ಎಂಪಿವಿ ಆತಂಕಾರ...
08-01-25 11:43 am
No emergecy in China, Virus News Kannada; ಚೀನ...
06-01-25 09:41 pm
Chamarajanagar, Heart Attack School Student:...
06-01-25 06:53 pm
08-01-25 11:07 pm
HK News Desk
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
ಹಾರ್ಟ್ ಅಟ್ಯಾಕ್ ಆಗಿ ಸತ್ತಿದ್ದಾನೆಂದು ತಿಳಿದು ಅಂತ್...
05-01-25 09:41 pm
Chhattisgarh Journalist Murder: ಛತ್ತೀಸ್ಗಢದಲ್ಲ...
04-01-25 06:01 pm
08-01-25 09:51 pm
Mangalore Correspondent
Surathkal Beach, Drowning, Mangalore; ಸುರತ್ಕಲ...
08-01-25 06:13 pm
Naxal, Vikram Gowda, Surrender: ಶರಣಾಗುವವರಿಗೆ...
08-01-25 11:53 am
MCC Bank Anil Lobo, Bail Reject, Mangalore; ಎ...
07-01-25 11:13 pm
Mangalore University, Phd Admission: ಮಂಗಳೂರು...
07-01-25 10:22 pm
08-01-25 10:57 pm
Mangalore Correspondent
Ullal Crime, Mangalore: ಉಳ್ಳಾಲದಲ್ಲಿ ವಲಸೆ ಕಾರ್...
08-01-25 05:58 pm
Cyber Fruad, CBI, Udupi, Karkala: ಸಿಬಿಐ ಹೆಸ್ರ...
08-01-25 03:14 pm
Mangalore crime, Court: ಸ್ನಾನ ಮಾಡುತ್ತಿದ್ದ ಅಪ್...
07-01-25 03:50 pm
Digital Arrest, I4C database, Cyber Frau: ಸೈಬ...
06-01-25 05:37 pm