ಬ್ರೇಕಿಂಗ್ ನ್ಯೂಸ್
01-11-21 10:56 am Mangaluru Correspondent ಕರಾವಳಿ
ಮಂಗಳೂರು, ನ.1: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೊಡ್ಡ ಎಡವಟ್ಟು ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಧ್ವಜಾರೋಹಣ ನೆರವೇರಿಸಿದ ವೇಳೆ, ರಾಷ್ಟ್ರ ಧ್ವಜವನ್ನೇ ಉಲ್ಟಾ ಹಾರಿಸಿ ಅಪಮಾನ ಎಸಗಲಾಗಿದೆ.
ಧ್ವಜ ಸ್ತಂಭದಲ್ಲಿ ಮೊದಲೇ ರೆಡಿ ಮಾಡಿದ್ದ ಧ್ವಜವನ್ನು ಉಸ್ತುವಾರಿ ಸಚಿವರು ಅದರ ಹಗ್ಗ ಎಳೆದು ಹಾರಿಸಿದ್ದಾರೆ. ಸಚಿವ ಅಂಗಾರ ಧ್ವಜಕ್ಕೆ ಸೆಲ್ಯೂಟ್ ಹೊಡೆಯುತ್ತಿದ್ದಂತೆ ಜೊತೆಗಿದ್ದ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಮತ್ತು ಪೊಲೀಸ್ ಕಮಿಷನರ್ ಶಶಿಕುಮಾರ್ ಕೂಡ ಸೆಲ್ಯೂಟ್ ಹೊಡೆದಿದ್ದಾರೆ. ನೆರೆದಿದ್ದವರೆಲ್ಲ ಎದ್ದು ನಿಂತು ಧ್ವಜಕ್ಕೆ ವಂದನೆ ಸಲ್ಲಿಸಿದ್ದಾರೆ. ಆಬಳಿಕ ಸಹಜ ಎಂಬಂತೆ ರಾಷ್ಟ್ರ ಗೀತೆಯನ್ನು ಹಾಡಲಾಗಿದೆ.

ಆದರೆ ತ್ರಿವರ್ಣ ಧ್ವಜ ತಲೆಕೆಳಗಾಗಿ ಹಾರಿದ್ದು ಅಲ್ಲಿದ್ದವರಿಗೆ ಅಲ್ಲಿವರೆಗೂ ಗೊತ್ತಿರಲಿಲ್ಲ. ಆನಂತರ ಅಧಿಕಾರಿಗಳು ಧ್ವಜ ತಲೆಕೆಳಗಾಗಿದ್ದನ್ನು ಗಮನಿಸಿ ಮತ್ತೆ ಕೆಳಗಿಳಿಸಿ ಸರಿ ಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಸ್ತುವಾರಿ ಸಚಿವ ಅಂಗಾರ, ಸಂಸದ ನಳಿನ್ ಕುಮಾರ್, ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ.ಖಾದರ್ ಸೇರಿದಂತೆ ಅಧಿಕಾರಿ ವರ್ಗ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.
ಈ ಹಿಂದೆ ತಾಲೂಕು ಮಟ್ಟದಲ್ಲಿ ಕೆಲವು ಕಡೆ ರಾಷ್ಟ್ರ ಧ್ವಜ ತಲೆಕೆಳಗಾಗಿ ಎಡವಟ್ಟು ಆಗಿದ್ದಿದೆ. ಆದರೆ, ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಮಂಗಳೂರಿನ ಮಟ್ಟಿಗೆ ಇದೇ ಮೊದಲಿಗೆ ಈ ರೀತಿಯ ತಪ್ಪು ನಡೆದಿದೆ. ಅಧಿಕಾರಿ ವರ್ಗದ ಗಂಭೀರ ಪ್ರಮಾದ ಅಲ್ಲಿ ಸೇರಿದ್ದ ಎಲ್ಲರನ್ನೂ ತೀವ್ರ ಮುಜುಗರಕ್ಕೀಡು ಮಾಡಿದೆ.

ಸಾಮಾನ್ಯವಾಗಿ ಸಿಎಆರ್ ಸಿಬಂದಿ ಬೆಳಗ್ಗೆ ಬೇಗ ಬಂದು ಧ್ವಜ ಸ್ತಂಭಕ್ಕೆ ಧ್ವಜ ಏರಿಸುವ ಕೆಲಸ ಮಾಡುತ್ತಾರೆ. ಈ ಸಂದರ್ಭದಲ್ಲಿ ನಿರ್ಲಕ್ಷ್ಯದ ಕಾರಣ ತಪ್ಪು ನಡೆದಿರುವ ಸಾಧ್ಯತೆ ಇದೆ. ಇವರ ಮೇಲೆ ಗಂಭೀರ ಕ್ರಮ ಜರುಗುವ ಸಾಧ್ಯತೆ ಇದೆ. ಕನ್ನಡ ಭುವನೇಶ್ವರಿಗೆ ವಂದಿಸಿ, ಕರ್ನಾಟಕ ಜನ್ಮತಾಳಿದ ವರ್ಷವನ್ನು ನವೆಂಬರ್ ಒಂದರಂದು ಆಚರಿಸಲಾಗುತ್ತದೆ. ಅದರ ಪ್ರಕಾರ ಪ್ರತೀ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆಯುತ್ತದೆ. ಈ ಬಾರಿಯಂತೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಯೋಜಿಸಿತ್ತು.
Karnataka Rajyotsava 2021 Flag hoisted in opposite direction in Mangalore, embarrassment for leaders and guests on stage
11-07-26 01:48 pm
HK News Staffer
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:12 pm
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
11-07-26 06:32 pm
HK News Staffer
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
12-07-26 10:13 pm
HK News Staffer
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಕೊನೆಗೂ ಎನ್ಐ...
12-07-26 02:16 pm
ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ ; ತಾ...
11-07-26 08:40 pm
ಸಣ್ಣ ಗಾಯಕ್ಕೆ ಚಿಕಿತ್ಸೆ, ಆದರೆ ಮರಳಲಿಲ್ಲ ಪ್ರಜ್ಞೆ...
11-07-26 08:37 pm
ಮಂಗಳೂರು- ವಿಟ್ಲ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ...
11-07-26 04:28 pm