ಕಾರಿಂಜೇಶ್ವರ ದೇವಸ್ಥಾನ ಪರಿಸರದಲ್ಲಿ ಕಿಡಿಗೇಡಿ ಕೃತ್ಯ ; ವಿಡಿಯೋ ಚಿತ್ರೀಕರಣ ನೆಪದಲ್ಲಿ ಅಪವಿತ್ರ ! ಆರೋಪಿಗಳ ಬಂಧನಕ್ಕೆ ಆಗ್ರಹ 

03-11-21 03:16 pm       Mangaluru Correspondent   ಕರಾವಳಿ

ಪ್ರಾಕೃತಿಕ ಸೌಂದರ್ಯವೇ ಮೈವೆತ್ತಿ ನಿಂತಿರುವ ಕಾರಿಂಜೇಶ್ವರ ದೇವಸ್ಥಾನ ಮತ್ತು ಪರಿಸರದಲ್ಲಿ ಅಲ್ಲಿನ ಪಾವಿತ್ರ್ಯ ಲೆಕ್ಕಿಸದೆ ಕಿಡಿಗೇಡಿ ಯುವಕರು ಚಪ್ಪಲಿ, ಶೂ ಧರಿಸಿಕೊಂಡು ದೇವಸ್ಥಾನದ ಒಳಗಡೆ ನಡೆದಾಡಿರುವ ಬಗ್ಗೆ ವಿಡಿಯೋ ವೈರಲ್ ಆಗಿದ್ದು ಹಿಂದು ಸಂಘಟನೆಗಳು ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿವೆ. 

ಬಂಟ್ವಾಳ, ನ.2: ಪ್ರಾಕೃತಿಕ ಸೌಂದರ್ಯವೇ ಮೈವೆತ್ತಿ ನಿಂತಿರುವ ಕಾರಿಂಜೇಶ್ವರ ದೇವಸ್ಥಾನ ಮತ್ತು ಪರಿಸರದಲ್ಲಿ ಅಲ್ಲಿನ ಪಾವಿತ್ರ್ಯ ಲೆಕ್ಕಿಸದೆ ಕಿಡಿಗೇಡಿ ಯುವಕರು ಚಪ್ಪಲಿ, ಶೂ ಧರಿಸಿಕೊಂಡು ದೇವಸ್ಥಾನದ ಒಳಗಡೆ ನಡೆದಾಡಿರುವ ಬಗ್ಗೆ ವಿಡಿಯೋ ವೈರಲ್ ಆಗಿದ್ದು ಹಿಂದು ಸಂಘಟನೆಗಳು ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿವೆ. 

ಮುಸ್ಲಿಂ ಯುವಕರು ಟಿಕ್ ಟಾಕ್ ರೀತಿ ದೇವಸ್ಥಾನ ಪರಿಸರದ ವಿಹಂಗಮ ಚಿತ್ರಣವನ್ನು ಚಿತ್ರೀಕರಿಸಿದ್ದು ಅದನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ‌. ಯುವಕರು ಅಲ್ಲಿನ ಕೆರೆ, ದೇವಸ್ಥಾನದ ಬೆಟ್ಟ, ಒಳಾಂಗಣದಲ್ಲಿ ಅಡ್ಡಾಡಿರುವ ಚಿತ್ರಣ ಅದರಲ್ಲಿದ್ದು ವಿಡಿಯೋ ವೈರಲ್ ಆಗಿದೆ. 

ದೇವಸ್ಥಾನ ಒಳಗಡೆ ಅಪವಿತ್ರ ಆಗುವ ರೀತಿ ವರ್ತಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಮೂರು ದಿನಗಳಲ್ಲಿ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸಲಿದ್ದು ಮುಂದಿನ ಪರಿಣಾಮಗಳಿಗೆ ನಾವು ಹೊಣೆಯಲ್ಲ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

Youths of Inter religion shoot videos wearing shoes inside the karinjeshwara temple and post them on social media, Hindu organizations demand the arrest of youths within three days after the video goes viral on social media.