ಬ್ರೇಕಿಂಗ್ ನ್ಯೂಸ್
19-11-21 01:27 pm Mangaluru Correspondent ಕರಾವಳಿ
ಮಂಗಳೂರು, ನ.19: ಕಣಜದ ಹುಳುವಿನ ಕಡಿತಕ್ಕೊಳಗಾದ ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ತನ್ನ ಆರೋಗ್ಯದ ಬಗ್ಗೆ ನಿರ್ಲಕ್ಷಿಸಿ ಸಾವಿಗೀಡಾಗಿದ್ದಾರೆ.
ಕಟೀಲು ಬಳಿಯ ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್ (35) ಮೃತ ವ್ಯಕ್ತಿಯಾಗಿದ್ದು ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದರು.
ಸಂತೋಷ್ ಗುರುವಾರ ಸಂಜೆ ಕಿನ್ನಿಗೋಳಿ ಸಮೀಪದ ಶ್ರೀರಾಮ ಮಂದಿರದ ಬಳಿ ಆಟೋದಲ್ಲಿ ಹೋಗುತ್ತಿದ್ದಾಗ ಕಣಜದ ಹುಳುಗಳ ದಾಳಿಯಿಂದಾಗಿ ಶಾಲೆಯ ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದರು. ಇದನ್ನು ಕಂಡ ಸಂತೋಷ್ ಮಕ್ಕಳನ್ನು ಕಣಜದ ಹುಳುಗಳಿಂದ ರಕ್ಷಿಸಿ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಮಕ್ಕಳ ರಕ್ಷಣೆಯ ಸಂದರ್ಭ ಕಣಜದ ಹುಳು ಸಂತೋಷ್ ಅವರಿಗೂ ಕಡಿದಿದ್ದು, ತಲೆ, ಮುಖಕ್ಕೆ ಕಡಿತ ಆಗಿದ್ದರೂ ಯಾವುದೇ ಚಿಕಿತ್ಸೆ ಪಡೆಯದೆ ಮನೆ ಕಡೆ ತೆರಳಿದ್ದರೆನ್ನಲಾಗಿದೆ. ಮನೆಯಲ್ಲಿ ರಾತ್ರಿ ಸುಮಾರು 9 ಗಂಟೆಗೆ ಕುರ್ಚಿಯಲ್ಲಿ ಕುಳಿತ್ತಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಆರು ಮಕ್ಕಳನ್ನು ಸಾವಿನ ದವಡೆಯಿಂದ ರಕ್ಷಣೆ ಮಾಡಿದ ಸಂತೋಷ್ ಸ್ವತಃ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇದ್ದುದು ಸಾವಿಗೆ ಕಾರಣ ಎನ್ನಲಾಗುತ್ತಿದೆ. ಮೃತರು ತಾಯಿ, ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಣಜದ ಹುಳುಗಳು ಕಚ್ಚಿದರೆ ಆಕೂಡಲೇ ದೊಡ್ಡ ಪರಿಣಾಮ ಆಗದಿದ್ದರೂ ಕಚ್ಚಿದ ಭಾಗ ಊದಿಕೊಳ್ಳುತ್ತದೆ. ನಿಗದಿತ ಚಿಕಿತ್ಸೆ ದೊರಕದೇ ಇದ್ದರೆ ತಲೆಯ ಭಾಗಕ್ಕೆ ಹೆಚ್ಚು ಕಚ್ಚಿದ್ದರೆ ಅದರ ಪರಿಣಾಮ ವ್ಯತಿರಿಕ್ತ ಆಗುತ್ತದೆ.
After a swarm of wasps attacked and stung him, a home guards personnel lost his life on the night of Wednesday November 17. The incident had happened near Ram Mandir, Kinnigoli. Santhosh (35), resident of Kateel Devaragudde, died in the said incident. When he was going in an auto rickshaw, a swarm of wasps had suddenly attacked the children of a nearby school.
05-03-26 09:40 pm
HK News Staffer
Lokayukta Raid: 8 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳ...
05-03-26 08:41 pm
ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ ; ಮಕ್ಕಳೆದುರೇ ಹಾಸ...
04-03-26 06:47 pm
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಕಂಟೇನರ್ ವಾಹನಕ್...
04-03-26 01:33 pm
05-03-26 08:51 pm
HK News Staffer
ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಇರಾನ್...
05-03-26 05:02 pm
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
05-03-26 07:38 pm
HK News Staffer
ಸಾಕ್ಷಿಗಳು ಬರ್ತಾರೆ, ಹೋಗ್ತಾರೆ.. ಧರ್ಮಸ್ಥಳದಲ್ಲಿ ಹ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
ತುಳು ಎರಡನೇ ಅಧಿಕೃತ ಭಾಷೆ; ಆಂಧ್ರಪ್ರದೇಶದಲ್ಲಿ ಕೈಗೊ...
04-03-26 09:31 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm