ಬ್ರೇಕಿಂಗ್ ನ್ಯೂಸ್
20-11-21 10:11 pm Mangaluru Correspondent ಕರಾವಳಿ
ಮಂಗಳೂರು, ನ.20: ವಿಧಾನ ಪರಿಷತ್ತಿಗೆ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಹೇಳಿ ನೂರಾರು ಮಂದಿಯನ್ನು ಸೇರಿಸಿ ಚುನಾವಣಾ ಕಚೇರಿ ಉದ್ಘಾಟಿಸಿದ್ದ ಸಹಕಾರಿ ಧುರೀಣ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಅಚ್ಚರಿಯ ಬೆಳವಣಿಗೆಯಲ್ಲಿ ಚುನಾವಣಾ ಕಣದಿಂದಲೇ ಹಿಂದೆ ಸರಿದಿದ್ದಾರೆ. ರಾಜೇಂದ್ರ ಕುಮಾರ್ ದಿಢೀರ್ ಕಾಲು ಹಿಂದಕ್ಕಿಡಲು ಕಾರಣವಾಗಿದ್ದೇನು ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.
ವಾರದ ಹಿಂದೆ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆಂದು ಹೇಳಿ ರಾಜೇಂದ್ರ ಕುಮಾರ್ ಅಚ್ಚರಿ ಸೃಷ್ಟಿಸಿದ್ದರು. ರಾಜೇಂದ್ರ ಕುಮಾರ್ ಸ್ಪರ್ಧೆ ಮಾಡುವುದು ಬಿಜೆಪಿ ಮತ್ತು ಕಾಂಗ್ರೆಸಿನಲ್ಲಿ ಸಹಜವಾಗೇ ನಡುಕವನ್ನೂ ಉಂಟುಮಾಡಿತ್ತು. ಯಾಕಂದ್ರೆ, ತಮ್ಮ ಮತಗಳನ್ನು ಹಣ ಕೊಟ್ಟು ಖರೀದಿಸುತ್ತಾರೆ ಅನ್ನುವ ಆತಂಕ ಎರಡೂ ಪಕ್ಷಗಳ ನಾಯಕರಲ್ಲಿದ್ದವು. ಇದೇ ವಿಚಾರದ ಬಗ್ಗೆ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್, ತಮ್ಮ ಮತಗಳನ್ನು ಯಾರಾದರೂ ಆಮಿಷವೊಡ್ಡಿ ಸೆಳೆದುಕೊಂಡಲ್ಲಿ ಜೋಕೆ ಎಂದು ರಾಜೇಂದ್ರ ಕುಮಾರ್ ಹೆಸರೆತ್ತದೆ ಪರೋಕ್ಷವಾಗಿ ಕುಟುಕಿದ್ದರು.
ಇವೆಲ್ಲ ಬೆಳವಣಿಗೆ ಮಧ್ಯೆಯೇ ಬಿಜೆಪಿಯಿಂದ ಎರಡು ಅಭ್ಯರ್ಥಿಗಳನ್ನು ಇಳಿಸುವುದಿಲ್ಲ. ಆಮೂಲಕ ಪಕ್ಷೇತರ ಅಭ್ಯರ್ಥಿ ರಾಜೇಂದ್ರ ಕುಮಾರ್ ಪರವಾಗಿ ಬಿಜೆಪಿ ನಾಯಕರು ಬೆಂಬಲವಾಗಿ ನಿಲ್ಲಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಬಿಜೆಪಿಯಲ್ಲಿ 3600 ಮತಗಳಿದ್ದು ಗೆಲ್ಲಲು ಬೇಕಾದ 2200 ಮತ ಹೊರತುಪಡಿಸಿ ಹೆಚ್ಚುವರಿಯಾಗಿ ಉಳಿಯುವ ಮತಗಳು ಪಕ್ಷೇತರ ಅಭ್ಯರ್ಥಿಗೆ ನೆರವಾಗಲಿದೆ ಎನ್ನುವ ಲೆಕ್ಕಾಚಾರವೂ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಮಂಗಳವಾರ ಮಧ್ಯಾಹ್ನ ಅದ್ದೂರಿಯಾಗಿ ಮಂಗಳೂರಿನ ಹೃದಯ ಭಾಗ ಓಶ್ಯನ್ ಪರ್ಲ್ ಹೊಟೇಲ್ ಮುಂಭಾಗದಲ್ಲಿ ರಾಜೇಂದ್ರ ಕುಮಾರ್ ಚುನಾವಣಾ ಕಚೇರಿಯನ್ನೂ ಉದ್ಘಾಟನೆ ಮಾಡಲಾಗಿತ್ತು.
ಆದರೆ, ಮರುದಿನವೇ ರಾಜೇಂದ್ರ ಕುಮಾರ್ ನಡೆ ಬದಲಾಗಿತ್ತು. ಅಲ್ಲೀವರೆಗೂ ಯಾರು ಕಿವಿಯೂದಿದ್ದರೋ ಗೊತ್ತಿಲ್ಲ. ರಾಜೇಂದ್ರ ಕುಮಾರ್ ಅಬ್ಬರ ಕಂಡ ಇನ್ನೊಬ್ಬ ಆಪ್ತರು ವಿಧಾನ ಪರಿಷತ್ ಚುನಾವಣೆಯ ಲೆಕ್ಕಾಚಾರದ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದರು. ಪಕ್ಷೇತರ ಸ್ಪರ್ಧಿಸಿ, ಗೆಲುವು ಅಸಾಧ್ಯ ಎನ್ನುವುದನ್ನು ಮನವರಿಕೆ ಮಾಡಿದ್ದರು. ಮೊದಲ ಪ್ರಾಶಸ್ತ್ಯ ಮತಗಳೇ ನಿರ್ಣಾಯಕ. ಇಲ್ಲಿ ಎರಡು ಸ್ಥಾನ ಮಾತ್ರ ಇರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಕಡೆಯ ಒಬ್ಬೊಬ್ಬರು ನಿರಾಯಾಸ ಗೆಲುವು ಸಾಧಿಸುತ್ತಾರೆ. ನೀವು ಪಕ್ಷದಲ್ಲಿ ಸ್ಪರ್ಧಿಸಿದರೆ ಮಾತ್ರ ಗೆಲ್ಲುವುದು ಸಾಧ್ಯ ಎಂಬುದನ್ನು ಮನದಟ್ಟು ಮಾಡಿದ್ದರು. ಕಳೆದ ಬಾರಿ ಪಕ್ಷೇತರ ಸ್ಪರ್ಧಿಸಿದ್ದ ಜಯಪ್ರಕಾಶ್ ಹೆಗ್ಡೆ 800 ಮತಗಳನ್ನಷ್ಟೇ ಪಡೆದಿದ್ದರು ಅನ್ನೋದನ್ನು ತಿಳಿಸಿದ್ದರು. ಇದರಂತೆ, ಕಾಂಗ್ರೆಸಿನ ಕೆಲವು ನಾಯಕರ ಮೂಲಕ ರಾಜೇಂದ್ರ ಕುಮಾರ್ ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿಗೆ ಮುಂದಾಗಿದ್ದರು.
ಬುಧವಾರ ಬೆಳಗ್ಗೆ ಬೆಂಗಳೂರಿನ ಡಿಕೆಶಿ ಮನೆಯಲ್ಲಿ ಕಾಂಗ್ರೆಸ್ ನಾಯಕರಾದ ವಿನಯಕುಮಾರ್ ಸೊರಕೆ, ಕಣಚೂರು ಮೋನು ನೇತೃತ್ವದಲ್ಲಿ ರಾಜೇಂದ್ರ ಕುಮಾರ್ ಸ್ಪರ್ಧೆಗಾಗಿ ಟಿಕೆಟ್ ಕೇಳಿದ್ದರು. ಈ ಹಿಂದೆ ಕಾಂಗ್ರೆಸಿನಲ್ಲಿಯೇ ಗುರುತಿಸಿಕೊಂಡಿದ್ದ ರಾಜೇಂದ್ರ ಕುಮಾರ್ ಪಕ್ಷದಲ್ಲಿ ಟಿಕೆಟ್ ಕೇಳುವುದು ಏನೂ ವಿಶೇಷ ಆಗಿರಲಿಲ್ಲ. ಆದರೆ, ಹಿಂದಿನ ದಿನವಷ್ಟೇ ಪಕ್ಷೇತರನಾಗಿ ಮಾತ್ರ ಸ್ಪರ್ಧಿಸುತ್ತೇನೆ ಎಂದಿದ್ದವರು ಡಿಕೆಶಿ ಜೊತೆಗೆ ಕಾಣಿಸಿಕೊಂಡಿದ್ದ ಫೋಟೋಗಳು ವೈರಲ್ ಆಗಿದ್ದವು. ರಾಜೇಂದ್ರ ಕುಮಾರ್ ಕಾಂಗ್ರೆಸಿನಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಹರಿದಾಡಿದ್ದವು. ಮಾಜಿ ಸಿಎಂ ವೀರಪ್ಪ ಮೊಯ್ಲಿ ಕೂಡ ರಾಜೇಂದ್ರ ಕುಮಾರ್ ಪರ ಇದ್ದಾರಂತೆ. ಕಾಂಗ್ರೆಸ್ ಹೈಕಮಾಂಡಿನಲ್ಲಿ ಬ್ಯಾಟಿಂಗ್ ಮಾಡಿದ್ದಾರಂತೆ ಅನ್ನೋ ಮಾತೂ ಕೇಳಿಬಂದಿತ್ತು.
ಇತ್ತ ರಾಜೇಂದ್ರ ಕುಮಾರ್ ಮಂಗಳೂರಿನಲ್ಲಿ ಚುನಾವಣಾ ಕಚೇರಿ ಉದ್ಘಾಟಿಸಿ, ಸ್ಪರ್ಧಾ ಕಣಕ್ಕಿಳಿಯುವುದು ಖಾತ್ರಿಯಾಗುತ್ತಲೇ ಅತ್ತ ಉಡುಪಿ ಕಾಂಗ್ರೆಸ್ ನಾಯಕರು ತಮ್ಮದೇ ನೆಲೆಯಲ್ಲಿ ಕಸರತ್ತು ಆರಂಭಿಸಿದ್ದರು. ಇತ್ತ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರು ಕೂಡ ಅಲರ್ಟ್ ಆಗಿದ್ದು, ರಾಜೇಂದ್ರ ಕುಮಾರ್ ಬದಲು ನಿಷ್ಠಾವಂತ ಕಾಂಗ್ರೆಸಿಗರಿಗೆ ಕೊಡಿ ಎಂದು ಲಾಬಿ ನಡೆಸಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಹಿಂದಿನಿಂದಲೂ ಪಕ್ಷಕ್ಕಾಗಿ ದುಡಿದು, ಪ್ರಭಾವಿಯಾಗಿರುವ ಮತ್ತು ಡಿಕೆಶಿ ಆಪ್ತನೂ ಆಗಿರುವ ಉಪ್ಪುಂದ ಭುಜಂಗ ಶೆಟ್ಟಿಯ ಹೆಸರೂ ಕೇಳಿಬಂದಿತ್ತು. ರಾಜೇಂದ್ರ ಕುಮಾರ್ ಪ್ರಭಾವದ ಮುಂದೆ ತಮ್ಮದೂ ಪ್ರಭಾವಿಯೇ ಆಗಬೇಕೆಂಬ ಲೆಕ್ಕಾಚಾರದಲ್ಲಿ ಭುಜಂಗ ಶೆಟ್ಟಿ ಹೆಸರು ತರಲಾಗಿತ್ತು. ಗುರುವಾರದ ಹೊತ್ತಿಗೆ ಭುಜಂಗ ಶೆಟ್ಟಿ ಮತ್ತು ಉಡುಪಿ ಕಾಂಗ್ರೆಸ್ ನಾಯಕರು ಡಿಕೆಶಿ ಮತ್ತು ಸಿದ್ದರಾಮಯ್ಯ ಮಧ್ಯೆ ಕುಳಿತು ಪರಿಷತ್ ಚುನಾವಣೆ ಬಗ್ಗೆ ಚರ್ಚಿಸುವ ಫೋಟೋ ಬಂದಿತ್ತು.
ಇಷ್ಟಾಗುತ್ತಲೇ, ರಾಜೇಂದ್ರ ಕುಮಾರ್ ಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಮರೀಚಿಕೆಯಾಗಿತ್ತು. ಇದೇ ವೇಳೆ, ಶುಕ್ರವಾರ ಬಿಜೆಪಿ ಪರ ಪ್ರಚಾರಕ್ಕಾಗಿ ಉಡುಪಿ ಮತ್ತು ಮಂಗಳೂರಿಗೆ ಬಂದಿದ್ದ ಸಹಕಾರಿ ಸಚಿವ ಸೋಮಶೇಖರ್, ಡಿಸಿಸಿ ಬ್ಯಾಂಕಿನ ಅಕ್ರಮದ ಬಗ್ಗೆ ದಿಢೀರ್ ಎಚ್ಚೆತ್ತವರಂತೆ ಅಬ್ಬರಿಸಿದ್ದರು. ಡಿಸಿಸಿಯನ್ನು ವಿಭಜಿಸಿ, ಉಡುಪಿ ಜಿಲ್ಲಾ ಸಹಕಾರಿ ಬ್ಯಾಂಕನ್ನೂ ಆರಂಭಿಸುವ ಬಗ್ಗೆಯೂ ಹೇಳಿದ್ದಲ್ಲದೆ, ಡಿಸಿಸಿ ಬ್ಯಾಂಕಿನ ಅಧ್ಯಕ್ಷರನ್ನು ಹೇಗೆ ತೆರವು ಮಾಡಬೇಕೆಂದು ಗೊತ್ತಿದೆ. ಅಲ್ಲಿನ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳುವ ಮೂಲಕ ರಾಜೇಂದ್ರ ಕುಮಾರ್ ಗೆ ಶಾಕ್ ನೀಡಿದ್ದರು. ಸಹಕಾರಿ ಸಚಿವರ ಶಾಕ್ ಕೇಳುತ್ತಲೇ ರಾಜೇಂದ್ರ ಕುಮಾರ್ ಬೆವತು ಹೋಗಿದ್ದರು. ಸಾಕಷ್ಟು ಅಕ್ರಮ, ಸ್ವಾಹಾಕಾರದ ಬಗ್ಗೆ ಚರ್ಚೆ ಇದ್ದರೂ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ತಾಳಮೇಳ ನಡೆಸುತ್ತಾ ಏಗುತ್ತಿದ್ದ ರಾಜೇಂದ್ರ ಕುಮಾರ್ ಈ ಚುನಾವಣೆಯೇ ಬೇಡ ಎಂದು ಇಟ್ಟ ನಡೆಯಿಂದಲೇ ಹಿಂದಕ್ಕೆ ಸರಿದು ಕೈಸುಟ್ಟುಕೊಂಡಿದ್ದಾರೆ. ಇತ್ತ ಚುನಾವಣಾ ಕಚೇರಿ ಬೆತ್ತಲಾಗಿ ನಿಂತುಬಿಟ್ಟಿದೆ.
ಕಾಂಗ್ರೆಸ್ ಟಿಕೆಟ್ ಯಾರಿಗೆ ?
ಇತ್ತ ಬಿಜೆಪಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚುನಾವಣಾ ಕಣಕ್ಕಿಳಿದಿದ್ದು ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಆದರೆ, ಕಾಂಗ್ರೆಸ್ ಟಿಕೆಟ್ ಯಾರಿಗೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಸಹ್ಯಾದ್ರಿ ಕಾಲೇಜಿನ ಮಂಜುನಾಥ ಭಂಡಾರಿ ಮತ್ತು ಭುಜಂಗ ಶೆಟ್ಟಿ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಇದಲ್ಲದೆ, ಕೃಪಾ ಅಮರ್ ಆಳ್ವ, ಶಶಿಧರ ಹೆಗ್ಡೆ, ಎಂ.ಕೆ.ಗಫೂರ್, ಪಿ.ವಿ.ಮೋಹನ್, ಐವಾನ್ ಡಿಸೋಜ, ವಿವೇಕ್ ರಾಜ್ ಪೂಜಾರಿ, ಮಂಜುನಾಥ್ ಉದ್ಯಾವರ, ಶ್ಯಾಮಲಾ ಭಂಡಾರಿ ಹೀಗೆ ಹಲವಾರು ಮಂದಿ ಕಾಂಗ್ರೆಸ್ ಟಿಕೆಟಿಗಾಗಿ ಲಾಬಿ ನಡೆಸಿದ್ದಾರೆ. ಮಾಜಿ ಸಚಿವ, ಹಿರಿಯ ಕಾಂಗ್ರೆಸಿಗರಾಗಿರುವ ರಮಾನಾಥ ರೈ, ನಿಷ್ಠಾವಂತರಿಗೇ ಟಿಕೆಟ್ ಸಿಗಲಿದೆ ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ.
What is the reason for SCDCC Cooperative veteran Rajendra Kumar to back out from contesting MLC elections, a detailed political report by Headline Karnataka. Independent candidate Dr Rajendra Kumar (South Canara District Central Cooperative) (SCDCC) Bank chairman backs out of contesting as an independent candidate from the local authorities’ constituency of Dakshina Kannada and Udupi Karnataka Legislative Council elections. He informed that to remain non-political in the cooperative sector, he decided not to contest the elections. The announcement comes a day after cooperation minister S T Somashekar said that the government can dismiss him for alleged misuse of funds.
02-10-25 03:50 pm
Bangalore Correspondent
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
02-10-25 03:45 pm
HK News Desk
ಆರೆಸ್ಸೆಸ್ ಶತಮಾನೋತ್ಸವ ; ಭಾರತ ಮಾತೆಯ ಚಿತ್ರವಿರುವ...
01-10-25 09:44 pm
Cough Syrup Side Effects Suspected, Kidney Fa...
01-10-25 05:32 pm
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
02-10-25 11:05 pm
Mangalore Correspondent
Illegal Slaughterhouse in Mangalore: ಬೆನ್ನು ಬ...
02-10-25 10:43 pm
D.K. Shivakumar, Mangaluru Dasara: ದೇವರೇ ನನ್ನ...
02-10-25 11:43 am
Mangalore, Pilinalike 2025: ಪಿಲಿನಲಿಕೆ ಉತ್ಸವಕ್...
01-10-25 11:00 pm
Jayanth, Chinnayya, Dharmasthala Case: ಚಿನ್ನಯ...
01-10-25 04:45 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm