ಬ್ರೇಕಿಂಗ್ ನ್ಯೂಸ್
22-11-21 06:50 pm Mangaluru Correspondent ಕರಾವಳಿ
ಮಂಗಳೂರು, ನ.22: ಭಾರೀ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ ಚುನಾವಣೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಸಹ್ಯಾದ್ರಿ ಇಂಜಿನಿಯನಿರಿಂಗ್ ಕಾಲೇಜಿನ ಮುಖ್ಯಸ್ಥ ಮಂಜುನಾಥ ಭಂಡಾರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಕಾಂಗ್ರೆಸ್ ಹೈಕಮಾಂಡ್ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಸೋಮವಾರ ಸಂಜೆ ಪಟ್ಟಿ ಬಿಡುಗಡೆಗೊಳಿಸಿದೆ.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದಾಗಿ ಟಿವಿ ಮಾಧ್ಯಮಗಳು ಮತ್ತು ಪ್ರತಿಷ್ಠಿತ ಪತ್ರಿಕೆಯೊಂದರ ವೆಬ್ ಸೈಟ್ ನಲ್ಲಿ ಬರೆಯಲಾಗಿತ್ತು. ಇಂದು ಮಧ್ಯಾಹ್ನ ಸಂಭಾವ್ಯರ ಲಿಸ್ಟ್ ಎನ್ನುವ ನೆಲೆಯಲ್ಲಿ ಟಿವಿ ಮಾಧ್ಯಮಗಳ ಬ್ರೇಕಿಂಗ್ ನೋಡಿ ಕರಾವಳಿಯಲ್ಲಿ ಸಂಚಲನ ಮೂಡಿತ್ತು. ಈ ಬಾರಿ ವಿಧಾನ ಪರಿಷತ್ತಿಗೆ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದ ರಾಜೇಂದ್ರ ಕುಮಾರ್, ಎರಡು ದಿನಗಳ ಹಿಂದೆ ಚುನಾವಣೆಗೇ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಮತ್ತೊಂದು ಅಚ್ಚರಿ ಮೂಡಿಸಿದ್ದರು.

ಆದರೆ, ಇಂದು ಮಧ್ಯಾಹ್ನ ಹೊತ್ತಿಗೆ ಟಿವಿ ಬ್ರೇಕಿಂಗ್ ನಲ್ಲಿ ರಾಜೇಂದ್ರ ಕುಮಾರ್ ಅವರಿಗೇ ಕಾಂಗ್ರೆಸ್ ಟಿಕೆಟ್ ಘೋಷಿಸಿದ್ದಾಗಿ ಸುದ್ದಿಗಳು ಬರುತ್ತಿದ್ದಂತೆ ಕಾಂಗ್ರೆಸಿಗರಿಗೇ ಶಾಕ್ ಆಗಿತ್ತು. ಹಲವಾರು ಮಂದಿ ಮಂಗಳೂರಿನ ಮಾಧ್ಯಮ ಪ್ರತಿನಿಧಿಗಳಿಗೆ ಈ ಬಗ್ಗೆ ಮಾಹಿತಿ ಕೇಳಲು ತೊಡಗಿದ್ದರು. ಹೀಗಿದ್ದರೂ, ಕೆಲವು ಕಾಂಗ್ರೆಸ್ ನಾಯಕರು ಮಂಜುನಾಥ ಭಂಡಾರಿಗೇ ಟಿಕೆಟ್ ಎನ್ನುವುದನ್ನು ಹೇಳುತ್ತಿದ್ದರು. ಮತ್ತೆ ಹೇಳೋಕಾಗಲ್ಲ, ಕೆಲವರ ಕರಾಮತ್ತಿನಲ್ಲಿ ರಾಜೇಂದ್ರ ಕುಮಾರ್ ಗೆ ಟಿಕೆಟ್ ಸಿಕ್ಕಿದರೂ ಅಚ್ಚರಿಯಿಲ್ಲ ಎನ್ನುವ ಮಾತುಗಳು ಬಂದಿದ್ದವು. ಸಂಜೆ ವೇಳೆಗೆ 17 ಮಂದಿಯ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಆಗಿದ್ದು ಮಂಜುನಾಥ ಭಂಡಾರಿಗೆ ಟಿಕೆಟ್ ಫೈನಲ್ ಆಗಿತ್ತು.

ಗುಲ್ಬರ್ಗ – ಶಿವಾನಂದ ಪಾಟೀಲ್ ಮರ್ತೂರು, ಬೆಳಗಾವಿ – ಚೆನ್ನರಾಜ ಬಸವರಾಜ್ ಹಟ್ಟಿಹೊಳ್ಳಿ, ಉತ್ತರ ಕನ್ನಡ – ಭೀಮಣ್ಣ ನಾಯ್ಕ್, ಹುಬ್ಬಳ್ಳಿ- ಧಾರವಾಡ – ಗದಗ- ಹಾವೇರಿ ಮತಕ್ಷೇತ್ರ – ಸಲೀಂ ಅಹ್ಮದ್, ರಾಯಚೂರು- ಶರಣು ಗೌಡ ಪಾಟೀಲ್, ಚಿತ್ರದುರ್ಗ – ಬಿ.ಸೋಮಶೇಖರ್, ಶಿವಮೊಗ್ಗ – ಆರ್. ಪ್ರಸನ್ನ ಕುಮಾರ್, ದಕ್ಷಿಣ ಕನ್ನಡ – ಮಂಜುನಾಥ ಭಂಡಾರಿ, ಚಿಕ್ಕಮಗಳೂರು- ಎ.ವಿ.ಗಾಯತ್ರಿ ಶಾಂತೇಗೌಡ, ಹಾಸನ- ಎಂ.ಶಂಕರ್, ತುಮಕೂರು- ಆರ್. ರಾಜೇಂದ್ರ, ಮಂಡ್ಯ- ಎಂ.ಜಿ. ಗೂಳಿಗೌಡ, ಬೆಂಗಳೂರು ಗ್ರಾಮಾಂತರ – ಎಸ್. ರವಿ, ಕೊಡಗು – ಆರ್. ಮಂತರ್ ಗೌಡ, ಬಿಜಾಪುರ- ಬಾಗಲಕೋಟ- ಸುನಿಲ್ ಗೌಡ ಪಾಟೀಲ್, ಮೈಸೂರು- ಚಾಮರಾಜನಗರ- ಡಾ.ಡಿ.ತಮ್ಮಯ್ಯ, ಬೆಳ್ಳಾರಿ- ಕೆ.ಸಿ.ಕೊಂಡಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ.
ನ.23 ಅಂದ್ರೆ, ನಾಳೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಒಂದು ದಿನ ಇರುವಾಗ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಐದಾರು ಕ್ಷೇತ್ರಗಳಲ್ಲಿ ಆಕಾಂಕ್ಷಿ ಅಭ್ಯರ್ಥಿಗಳು ಹೆಚ್ಚಿದ್ದರಿಂದ ಪೈಪೋಟಿ ಉಂಟಾಗಿತ್ತು. ರಾಜ್ಯ ನಾಯಕರು ತಮ್ಮ ಬೆಂಬಲಿಗರಿಗೇ ಟಿಕೆಟ್ ಸಿಗುವಂತೆ ಮಾಡಲು ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದ್ದರು. ಹೀಗಾಗಿ ಇದರ ಲಾಭ ಪಡೆದು, ಕಾಂಗ್ರೆಸಿನ ಅತೃಪ್ತರಿಗೆ ಟಿಕೆಟ್ ನೀಡಲು ಜೆಡಿಎಸ್ ಮುಂದಾಗಿತ್ತು. ಈ ರೀತಿಯ ಗೇಮ್ ಪ್ಲಾನ್ ಅರಿತಿದ್ದ ಕಾಂಗ್ರೆಸ್ ನಾಯಕರು ಕೊನೆಯ ವರೆಗೂ ಕಾಯಿಸಿ, ಟಿಕೆಟ್ ಘೋಷಣೆ ಮಾಡಿದ್ದಾರೆ.
Mangalore Manjunath Bhandary to contest MLC elections from Dakshina Kannada. Just a day ahead of filing nomination papers for Legislative council elections, being held for two seats from local authorities constituencies, as an independent candidate, SCDCC (South Canara District Central Co-Operative) Bank President M N Rajendra Kumar sprang a surprise by dropping out of the race on Saturday.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm