ಬ್ರೇಕಿಂಗ್ ನ್ಯೂಸ್
26-11-21 04:34 pm HK news Desk ಕರಾವಳಿ
ಮಂಗಳೂರು, ನ.26: ದಕ್ಷಿಣ ಕನ್ನಡ ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಡಾ.ರತ್ನಾಕರ್ ತನ್ನ ಕಚೇರಿಯಲ್ಲಿ ಮಹಿಳಾ ಸಿಬಂದಿಗಳ ಜೊತೆ ನಡೆಸುತ್ತಿದ್ದ ಕಾಮಪುರಾಣ ಹೊರಬಿದ್ದಿದೆ. ಕಚೇರಿಯಲ್ಲಿ ಗುತ್ತಿಗೆ ಮೇಲೆ ಕರ್ತವ್ಯದಲ್ಲಿದ್ದ ಯುವತಿಯರ ಜೊತೆಗೆ ಕಚೇರಿ ಅವಧಿಯಲ್ಲೇ ಚಕ್ಕಂದ ಆಡುತ್ತಿರುವ ವಿಡಿಯೋ, ಫೋಟೋಗಳು ವೈರಲ್ ಆಗಿದ್ದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ವೈದ್ಯ ಮಹಾಶಯನ ಕಾಮಪುರಾಣದ ಸುದ್ದಿಗಳು ಹೊರಬೀಳುತ್ತಿದ್ದಂತೆ ಆತನನ್ನು ನ.8ರಂದೇ ಅಮಾನತು ಮಾಡಿರುವುದೂ ಬೆಳಕಿಗೆ ಬಂದಿದೆ.
ಆಂತರಿಕ ಮಾಹಿತಿಗಳನ್ನು ಕೆದಕಿದರೆ, ಕುಷ್ಠರೋಗ ನಿವಾರಣಾಧಿಕಾರಿಯೆಂದು ಪಟ್ಟ ಅಲಂಕರಿಸಿರುವ ಈ ವ್ಯಕ್ತಿ ಈಗ ಹೊಸದಾಗಿ ಈ ರೀತಿಯ ಕಾಮಪುರಾಣದಲ್ಲಿ ತೊಡಗಿದ್ದಲ್ಲ ಅನ್ನೋ ವಿಚಾರವೂ ಬಯಲಾಗುತ್ತಿದೆ. ಹಲವಾರು ತಿಂಗಳಿಂದ ಕಚೇರಿ ಸಿಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಚಾರವೂ ಡಿಎಚ್ಓ ಕಚೇರಿಯಿಂದಲೇ ಕೇಳಿಬರುತ್ತಿದೆ. ಜಿಲ್ಲಾ ಕುಷ್ಠರೋಗ ನಿವಾರಣಾ ಘಟಕ ಅನ್ನುವುದು ಈ ಹಿಂದೆ ವೆನ್ಲಾಕ್ ಜಿಲ್ಲಾಸ್ಪತ್ರೆಯ ಒಳಗೇ ಇದ್ದರೂ, ಅದರ ಸುಪರ್ದಿ ಜಿಲ್ಲಾ ಆರೋಗ್ಯಧಿಕಾರಿಯ ಕೈಕೆಳಗೇ ಇರುತ್ತದೆ.

ಐದಾರು ತಿಂಗಳ ಹಿಂದೆ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಕಾಮಗಾರಿ ನಿಮಿತ್ತ ಕುಷ್ಠರೋಗ ನಿವಾರಣಾ ಘಟಕವನ್ನು ಲೇಡಿಹಿಲ್ ಉಪ ವಿಭಾಗಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಈಗ ವೈರಲ್ ಆಗಿರುವ ಫೋಟೋ, ವಿಡಿಯೋಗಳು ವೆನ್ಲಾಕ್ ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಚಿತ್ರೀಕರಿಸಿದವುಗಳೇ ಆಗಿವೆ. ವೈದ್ಯಾಧಿಕಾರಿಯ ದುರ್ವರ್ತನೆ ಬಗ್ಗೆ ಅಲ್ಲಿನ 13 ಸಿಬಂದಿಗಳ ಪೈಕಿ ನಾಲ್ವರು ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದರು. ರಾಜ್ಯ ಆರೋಗ್ಯ ಇಲಾಖೆಗೂ ದೂರು ಹೋಗಿತ್ತು. ಈ ಬಗ್ಗೆ ಮಹಿಳಾ ಆಂತರಿಕ ದೂರು ಸಮಿತಿಯು ತನಿಖೆಯನ್ನು ನಡೆಸಿದ್ದು, ತನಿಖೆಗೆ ಹಾಜರಾದ ಮಹಿಳಾ ಸಿಬಂದಿ ನೀಡಿದ್ದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದರು. ಜಿಲ್ಲಾಧಿಕಾರಿ ಈ ಬಗ್ಗೆ ಪೂರಕ ದಾಖಲೆಗಳೊಂದಿಗೆ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದ್ದರು.

ಜಿಲ್ಲಾಧಿಕಾರಿಯ ವರದಿ ಆಧರಿಸಿ, ಆರೋಗ್ಯ ಇಲಾಖೆಯ ಆಯುಕ್ತರು ತಕ್ಷಣದಿಂದ ಜಾರಿಗೆ ಬರುವಂತೆ ಡಾ.ರತ್ನಾಕರ್ ಅವರನ್ನು ನ.8ರಂದು ಕರ್ತವ್ಯದಿಂದ ಅಮಾನತುಗೊಳಿಸಿದ್ದರು. ಅಲ್ಲದೆ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶಿಸ್ತುಕ್ರಮ ಬಾಕಿಯಿರಿಸಿ ಯಾದಗಿರಿ ಜಿಲ್ಲೆಯ ಗುರಮಿಠಕಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಡಿಮೋಷನ್ ಆಗಿಸಿ ವೈದ್ಯಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಇಷ್ಟೆಲ್ಲ ಬೆಳವಣಿಗೆ ಆಗಿದ್ದರೂ, ಆರೋಗ್ಯ ಇಲಾಖೆಯ ಒಳಗಿನ ಸುದ್ದಿ ಹೊರಬಂದಿರಲಿಲ್ಲ. ಇತ್ತ ಕರ್ತವ್ಯದಿಂದ ಅಮಾನತು ಆಗಿ, ಯಾದಗಿರಿ ಜಿಲ್ಲೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಆಗಿದ್ದರೂ, ಕಾಮುಕ ವೈದ್ಯ ರತ್ನಾಕರ್ ಮತ್ತೆ ಮಂಗಳೂರಿಗೆ ಬರಲು ಶತ ಪ್ರಯತ್ನ ನಡೆಸಿದ್ದಾನೆ.
ಉನ್ನತ ಮಟ್ಟದ ಅಧಿಕಾರಿಗಳು ಮತ್ತು ರಾಜಕೀಯ ಪ್ರಭಾವ ಬೀರುವ ಮೂಲಕ ಮತ್ತೆ ಮೂಲ ಸ್ಥಾನಕ್ಕೆ ವರ್ಗಾವಣೆ ಮಾಡಿಕೊಂಡಿದ್ದು ಮುಂದಿನ ವಾರದಲ್ಲೇ ಮಂಗಳೂರಿನ ಕುಷ್ಠರೋಗ ನಿವಾರಣಾ ಘಟಕಕ್ಕೆ ಬರಲಿದ್ದಾನೆ ಅನ್ನುವ ಸುದ್ದಿ ಬಂದಿತ್ತು. ಜಿಲ್ಲಾ ಆರೋಗ್ಯಾಧಿಕಾರಿಯ ಅಧೀನದಲ್ಲಿ ಬರುವ ಕುಷ್ಠರೋಗ ನಿವಾರಣಾ ಘಟಕದ ಕಚೇರಿ ಸದ್ಯ ಲೇಡಿಹಿಲ್ ನಲ್ಲಿದ್ದು, ಅಲ್ಲಿಗೆ ಕರ್ತವ್ಯಕ್ಕೆ ನಿಯೋಜನೆ ಆಗಲಿದ್ದಾನೆ ಎಂಬ ಸುದ್ದಿ ಹರಡಿತ್ತು. ಅದೇ ಸಂದರ್ಭದಲ್ಲಿ ಆತ ಈ ಹಿಂದೆ ಮಾಡಿದ್ದ ಕಾಮಪುರಾಣದ ಫೋಟೋ, ವಿಡಿಯೋಗಳು ಲೀಕ್ ಆಗಿದ್ದು ಕಚ್ಚೆಬುರುಕ ವೈದ್ಯ ಮಹಾಶಯನ ನಿಜಬಣ್ಣ ಬಯಲು ಮಾಡಿದೆ.

ಸುಮೊಟೋ ಪ್ರಕರಣ ದಾಖಲು ಯಾಕಿಲ್ಲ ?
ಒಬ್ಬ ಸರಕಾರಿ ಸಿಬಂದಿಯಾಗಿದ್ದು, ಅಧಿಕಾರಿ ಹುದ್ದೆಯಲ್ಲಿರುವ ವ್ಯಕ್ತಿ ಸಹೋದ್ಯೋಗಿ ಮಹಿಳಾ ಸಿಬಂದಿಗಳ ಜೊತೆ ದುರ್ವರ್ತನೆ, ಲೈಂಗಿಕ ಕಿರುಕುಳ ನೀಡಿರುವ ವಿಚಾರದ ಬಗ್ಗೆ ಈಗಾಗಲೇ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಆಂತರಿಕ ತನಿಖೆ ನಡೆದಿದೆ. ಮಹಿಳಾ ಸಿಬಂದಿಗಳು ನೀಡಿರುವ ಹೇಳಿಕೆ ಮತ್ತು ಜಿಲ್ಲಾಧಿಕಾರಿಯ ವರದಿ ಆಧರಿಸಿ, ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಇದೀಗ ಅಧಿಕಾರಿ ಕರ್ತವ್ಯದ ಅವಧಿಯಲ್ಲಿ ಮಹಿಳಾ ಸಿಬಂದಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿರುವುದಕ್ಕೆ ಸಾಕ್ಷ್ಯವಾಗಿ ವಿಡಿಯೋ, ಫೋಟೋಗಳು ಮಾಧ್ಯಮದಲ್ಲಿ ಪ್ರಕಟವಾಗಿದ್ದು, ಅಧಿಕಾರಿಯ ದುರ್ವರ್ತನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ, ಟೀಕೆಗೆ ಕಾರಣವಾಗಿದೆ.

ಇದೇ ಆಧಾರವನ್ನು ಮುಂದಿಟ್ಟು ಪೊಲೀಸ್ ಕಮಿಷನರ್ ಮಹಿಳಾ ಠಾಣೆಯಲ್ಲಿ ಸುಮೊಟೋ ಕೇಸು ದಾಖಲಿಸಲು ಅವಕಾಶ ಇದೆ. ಈ ಬಗ್ಗೆ ಯಾವುದೇ ಸಿಬಂದಿ ದೂರು ನೀಡಬೇಕು ಎಂದು ಕಾಯಬೇಕಾದ ಅಗತ್ಯವಿಲ್ಲ ಎನ್ನುತ್ತಾರೆ, ಹಿರಿಯ ಪತ್ರಕರ್ತ ಮೋಹನ್ ಬೋಳಂಗಡಿ. ಐಪಿಸಿ 354 ಅಡಿ ಕೇಸು ದಾಖಲಿಸಿಕೊಳ್ಳಬಹುದು. ಮಹಿಳಾ ಸಿಬಂದಿಯ ಹೇಳಿಕೆ ಪಡೆದು ಕೇಸು ದಾಖಲು ಮಾಡಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳಿಗೆ ಕಿರುಕುಳ ನೀಡಿರುವುದು ಗಂಭೀರ ಅಪರಾಧವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊಂದಿರುವ ಪೊಲೀಸರು ತಮ್ಮ ಕರ್ತವ್ಯ ನಿಭಾಯಿಸಬೇಕು. ವಕೀಲ ಕೆ.ಎಸ್.ಎನ್. ರಾಜೇಶ್, ಕಚೇರಿಯಲ್ಲಿ ಯುವತಿಗೆ ಕಿರುಕುಳ ನೀಡಿರುವ ಪ್ರಕರಣದಲ್ಲಿ ಯಾವ ರೀತಿಯ ಸೆಕ್ಷನ್ ಅನ್ವಯ ಆಗುತ್ತದೋ, ಅದೇ ಕಾಯ್ದೆಗಳು ಈ ಅಧಿಕಾರಿಗೂ ಅನ್ವಯ ಆಗುತ್ತದೆ ಎನ್ನುತ್ತಾರೆ.
ಈ ಹಿಂದೆ, ಪುತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಹಪಾಠಿ ವಿದ್ಯಾರ್ಥಿಗಳೇ ಸೇರಿ ಗ್ಯಾಂಗ್ ರೇಪ್ ನಡೆಸಿರುವ ಘಟನೆ ನಡೆದಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪುತ್ತೂರು ನಗರ ಠಾಣೆ ಪೊಲೀಸರು ಸುಮೊಟೋ ಕೇಸು ದಾಖಲಿಸಿದ್ದರು. ಅಲ್ಲದೆ, ವಿಡಿಯೋದಲ್ಲಿರುವ ವಿದ್ಯಾರ್ಥಿಗಳನ್ನು ಕಾಲೇಜಿಗೆ ಬಂದೇ ಗುರುತಿಸಿ, ಬಂಧಿಸಿದ್ದಲ್ಲದೆ, ಅವರಿಂದಲೇ ವಿದ್ಯಾರ್ಥಿನಿಯ ಗುರುತು ಕೇಳಿ ಹೇಳಿಕೆ ದಾಖಲು ಮಾಡಿದ್ದರು. ಇತ್ತೀಚೆಗೆ ಬಾಂಗ್ಲಾದಲ್ಲಿ ವೈರಲ್ ಆಗಿದ್ದ ಗ್ಯಾಂಗ್ ರೇಪ್ ಪ್ರಕರಣದಲ್ಲಿಯೂ ಪೊಲೀಸರು ಬೆಂಗಳೂರಿನಲ್ಲಿ ಸುಮೊಟೋ ಕೇಸು ದಾಖಲಿಸಿ, ಆರೋಪಿಗಳನ್ನು ಬಳಿಕ ಪತ್ತೆ ಮಾಡಿದ್ದರು ಅನ್ನುವುದನ್ನು ಇಲ್ಲಿ ನೆನಪಿಸಬಹುದು.
Mangalore govt Doctor pictures of Romancing goes viral yet no SUMOTO case registered by the police. District programme officer Dr Ratnakar, who falls under the authority of district Health and Family Welfare department is the one who is suspended. The Heath department authorities informed that Dr Ratnakar was suspended on November 8 and a departmental enquiry has already been initiated.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm