ನಾಗನಕಲ್ಲು ಧ್ವಂಸದ ಹಿಂದೆ ರಾಜಕೀಯ ಪಿತೂರಿ ; ಭರತ್ ಶೆಟ್ಟಿ

27-11-21 06:47 pm       HK Desk news   ಕರಾವಳಿ

ಹಿಂದುಗಳು ಭಾವನಾತ್ಮಕವಾಗಿ ಪವಿತ್ರವೆಂದು ನಂಬುವ ನಾಗನ ಕಲ್ಲು ಧ್ವಂಸ ಆಗಿದ್ದರೂ, ಸಂಯಮ ವಹಿಸಿದ್ದಾರೆ.

ಮಂಗಳೂರು, ನ.27: ಹಿಂದುಗಳು ಭಾವನಾತ್ಮಕವಾಗಿ ಪವಿತ್ರವೆಂದು ನಂಬುವ ನಾಗನ ಕಲ್ಲು ಧ್ವಂಸ ಆಗಿದ್ದರೂ, ಸಂಯಮ ವಹಿಸಿದ್ದಾರೆ. ಬೇರೆ ಧರ್ಮದವರು ತಮ್ಮ ದೇವರುಗಳ ನಿಂದನೆಯಾದ ಸಂದರ್ಭದಲ್ಲಿ ವಿಪರೀತವಾಗಿ ನಡೆದುಕೊಂಡಿದ್ದನ್ನು ನಾವು ನೋಡಿದ್ದೇವೆ. ಹಾಗೆ ನೋಡಿದರೆ, ಹಿಂದು ಸಂಘಟನೆಗಳ ಕಾರ್ಯಕರ್ತರ ಸಂಯಮ ಮೆಚ್ಚಬೇಕು. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ನಾಗನ ಕಲ್ಲು ಅಪವಿತ್ರಗೊಳಿಸಿದ ಪ್ರಕರಣದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಿದ ಪೊಲೀಸರನ್ನು ಅಭಿನಂದಿಸುವುದಾಗಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.

ಸುದ್ದಿಗೋಷ್ಠಿ ಕರೆದು ಮಾತನಾಡಿದ ಭರತ್ ಶೆಟ್ಟಿ, ಹಾಗೆಂದು ಈ ಘಟನೆಯನ್ನು ಅಷ್ಟಕ್ಕೇ ಬಿಡಬಾರದು. ಪೊಲೀಸರು ಇದರ ಬಗ್ಗೆ ಸಮಗ್ರವಾದ ತನಿಖೆ ಕೈಗೆತ್ತಿಕೊಳ್ಳಬೇಕು. ಇದರ ಹಿಂದೆ ಯಾರಿದ್ದಾರೆ, ಭಾರೀ ಷಡ್ಯಂತ್ರ ಅಡಗಿದ್ದನ್ನು ಪೊಲೀಸರೇ ಹೇಳಿದ್ದಾರೆ. ನಮಗೆ ಬಂದ ಮಾಹಿತಿ ಪ್ರಕಾರ, ಇದರ ಹಿಂದೆ ರಾಜಕೀಯ ಪಿತೂರಿ ಇತ್ತು. ಕೋಮು ಗಲಭೆ ಎಬ್ಬಿಸುವ ಮೂಲಕ ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ಇತ್ತು. ಆರೋಪಿಗಳಲ್ಲಿ ಕೆಲವರು ರಾಜಕೀಯ ನಾಯಕರ ಸಂಬಂಧಿಕರಿದ್ದಾರೆ. ಹೀಗಾಗಿ ಇದರ ಹಿಂದೆ ರಾಜಕೀಯ ಪಕ್ಷಗಳ ಪಿತೂರಿ, ಷಡ್ಯಂತ್ರ ಇರಲಿಕ್ಕಿಲ್ಲ ಎನ್ನಲಾಗುವುದಿಲ್ಲ. ವ್ಯವಸ್ಥಿತ ಸಂಚಿನ ಬಗ್ಗೆ ಪೊಲೀಸರು ಇನ್ನಷ್ಟು ತನಿಖೆ ನಡೆಸಬೇಕೆಂದು ಆಗ್ರಹಿಸುವುದಾಗಿ ಹೇಳಿದರು.

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಲವು ತಿಂಗಳುಗಳಿಂದಲೂ ಇದೇ ರೀತಿಯ ಪ್ರಕರಣಗಳು ನಡೆಯುತ್ತಾ ಬಂದಿದೆ. ಕಾವೂರಿನಲ್ಲಿ ಹಲ್ಲೆ ಪ್ರಕರಣವೂ ವಿನಾಕಾರಣ ನಡೆದಿತ್ತು. ಸಮಾಜದಲ್ಲಿ ಅಶಾಂತಿ ಮೂಡಿಸುವುದು, ಗಲಭೆ ಎಬ್ಬಿಸುವ ಕುತಂತ್ರ ಇದರ ಹಿಂದಿರುವುದು ಇಂಥ ಕೃತ್ಯಗಳಿಂದ ಸ್ಪಷ್ಟವಾಗುತ್ತಿದೆ. ರಾಜಕೀಯ ದುರುದ್ದೇಶವೂ ಇದರ ಹಿಂದಿರುವ ಸಾಧ್ಯತೆ ಕಂಡುಬರುತ್ತಿದೆ. ಪದೇ ಪದೇ ಹಿಂದು ಧಾರ್ಮಿಕ ಕ್ಷೇತ್ರಗಳ ಮೇಲೆ ದಾಳಿಯಾಗುತ್ತಿದ್ದು, ಹಿಂದುಗಳ ತಾಳ್ಮೆಯನ್ನು ದೌರ್ಬಲ್ಯ ಅಂತ ಅನಿಸ್ಕೊಳ್ಳುವುದು ಬೇಕಿಲ್ಲ ಎಂದು ಭರತ್ ಶೆಟ್ಟಿ ಹೇಳಿದರು.

Mangalore City North MLA Dr Bharath Y Shetty congratulated the police department for successfully cracking the Naga Bana desecration case. As elections are approaching in less than 2 years, I suspect political conspiracy behind this by the opposition. We also urge to arrest those who helped in the unholy act through financial support. As per information, one of the arrested accused belongs to a political leader’s family. When we see the entire issue, we suspect it to be a political conspiracy,” he said.