ಬ್ರೇಕಿಂಗ್ ನ್ಯೂಸ್
30-11-21 08:43 pm HK Desk news ಕರಾವಳಿ
ಮಂಗಳೂರು, ನ.30: ಕುಷ್ಠರೋಗ ನಿವಾರಣಾ ಘಟಕದ ಜಿಲ್ಲಾ ಮಟ್ಟದ ಅಧಿಕಾರಿ ಡಾ.ರತ್ನಾಕರ್ ಸಹೋದ್ಯೋಗಿ ಮಹಿಳಾ ಸಿಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದ ವಿಡಿಯೋ ಲೀಕ್ ಆಗಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಬಳಿಕ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಲ್ಲದೆ, ಆರೋಪಿ ಬಂಧನವೂ ಆಗಿತ್ತು. ಮಾಧ್ಯಮಗಳಿಗೆ ಆಹಾರವಾಗಿದ್ದ ಆರೋಪಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರೂ, ಎರಡೇ ಗಂಟೆಯಲ್ಲಿ ಅದೇ ನ್ಯಾಯಾಲಯ ಜಾಮೀನು ನೀಡಿದ್ದು ಕುತೂಹಲ ಕೆರಳಿಸಿದೆ.
ಈಗಾಗ್ಲೇ ಮಂಗಳೂರಿನ ವಕೀಲನೊಬ್ಬ ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ ಪ್ರಕರಣದಲ್ಲಿ ಪೊಲೀಸ್ ಪ್ರಕರಣ ದಾಖಲಾಗಿದ್ದಲ್ಲದೆ, ಆರೋಪಿ ವಕೀಲ ತಲೆಮರೆಸಿಕೊಂಡು ಕುಳಿತಿದ್ದು ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಮಂಗಳೂರಿನ ಸರಕಾರಿ ಸೇವೆಯಲ್ಲಿರುವ ಅಧಿಕಾರಿಯೊಬ್ಬ ಸಹೋದ್ಯೋಗಿ ಮಹಿಳಾ ಸಿಬಂದಿ ಜೊತೆಗೆ ದುರ್ವರ್ತನೆ ತೋರಿದ್ದ ಬಗ್ಗೆ ವಿಡಿಯೋ ವೈರಲ್ ಆಗಿತ್ತು. ಪ್ರಕರಣದಲ್ಲಿ ಯಾವುದೇ ಸಂತ್ರಸ್ತ ಮಹಿಳೆ ದೂರು ನೀಡಲು ಮುಂದಾಗದೇ ಇದ್ದ ಕಾರಣ ಸಾಮಾಜಿಕ ಕಾರ್ಯಕರ್ತೆಯೊಬ್ಬರು ದೂರು ನೀಡಿದ್ದರು. ಅದರಂತೆ, ಪೊಲೀಸರು ಐಪಿಸಿ 354ರ ಪ್ರಕಾರ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸಿದ್ದರು.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆತ ಸಹೋದ್ಯೋಗಿ ಮಹಿಳೆಯರ ಜೊತೆ ಮಡಿಕೇರಿ, ಮುರ್ಡೇಶ್ವರಕ್ಕೆ ಪ್ರವಾಸ ಹೋಗಿದ್ದನ್ನು ಒಪ್ಪಿಕೊಂಡಿದ್ದ. ಅದರಂತೆ, ಪೊಲೀಸರು ಆರೋಪಿ ರತ್ನಾಕರನನ್ನು ಬಂಧಿಸಿದ್ದಲ್ಲದೆ, ಕೋರ್ಟಿಗೆ ಹಾಜರು ಪಡಿಸಿ ಎರಡು ದಿನ ಕಸ್ಟಡಿಗೆ ಪಡೆದಿದ್ದರು. ಸೋಮವಾರ ಸಂಜೆ ನಾಲ್ಕು ಗಂಟೆಗೆ ಮತ್ತೆ ಕೋರ್ಟಿಗೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಮಾಡಿತ್ತು. ಅದರಂತೆ ಪೊಲೀಸರು ಆರೋಪಿಯನ್ನು ಜೈಲಿಗೆ ಕೊಂಡೊಯ್ದಿದ್ದರು.
ಕೋರ್ಟ್ ಆದೇಶ ಹೊರಬಿದ್ದ ಬೆನ್ನಲ್ಲೇ ಶನಿವಾರ ಸಲ್ಲಿಸಿದ್ದ ಜಾಮೀನು ಅರ್ಜಿ ಸೋಮವಾರ ಸಂಜೆ ವಿಚಾರಣೆಗೆ ಬಂದಿದ್ದು, ಅದೇ ಸೆಷನ್ಸ್ ಕೋರ್ಟಿನಲ್ಲಿ ನಡೆದಿದೆ. ಆರೋಪಿ ಪರ ವಕೀಲ ನರಸಿಂಹ ಹೆಗಡೆ ಪ್ರಬಲ ವಾದ ಮಂಡಿಸಿದ್ದು, ಲೀಗಲ್ ಬೇಸ್ ಮೇಲೆ ವಾದ ಮುಂದಿಟ್ಟಿದ್ದಾರೆ. ಪ್ರಕರಣದಲ್ಲಿ ಯಾವುದೇ ಸಂತ್ರಸ್ತೆ ದೂರು ನೀಡಿಲ್ಲ. ಅಲ್ಲದೆ, ದೂರು ನೀಡಿದವರು ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಆಧರಿಸಿ ದೂರು ನೀಡಿದ್ದಾರೆ ಹೊರತು ಕಣ್ಣಾರೆ ಕಂಡವರಲ್ಲ. ಹೀಗಾಗಿ ದೂರು ನೀಡಿದವರು ಮೂರನೇ ವ್ಯಕ್ತಿಯಾಗಿದ್ದು ಉದ್ದೇಶಪೂರ್ವಕ ದೂರಿತ್ತಿದ್ದಾರೆ. ಆರು ವರ್ಷದ ಒಳಗೆ ಶಿಕ್ಷೆ ನೀಡಬಹುದಾದ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶ ಪ್ರಕಾರ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕಿಲ್ಲ ಎಂದು ವಾದಿಸಿದ್ದು ಅದನ್ನು ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಗೆ ಜಾಮೀನು ನೀಡಿದ್ದಾರೆ.
ಹೀಗಾಗಿ ಅತ್ತ ಜೈಲಿಗೆ ಹೋದ ಎರಡೇ ಗಂಟೆಯಲ್ಲಿ ಆರೋಪಿ ರತ್ನಾಕರ್ ಬಿಡುಗಡೆಯಾಗಿದ್ದು ಆರು ಗಂಟೆ ವೇಳೆಗೆ ಕೋರ್ಟ್ ಆದೇಶವನ್ನು ತೋರಿಸಿ ವಕೀಲರೇ ಆರೋಪಿಯನ್ನು ಹೊರತಂದಿದ್ದಾರೆ. ಪೊಲೀಸರು ಎರಡು ದಿನ ಕಸ್ಟಡಿ ಪಡೆಯದೇ ಇರುತ್ತಿದ್ದರೆ, ಶನಿವಾರವೇ ಜಾಮೀನು ಸಿಗುವ ಸಾಧ್ಯತೆಯೂ ಇತ್ತು. ಹಾಗಾಗಿ ಪೊಲೀಸರು ಎರಡು ದಿನ ಸ್ಟೇಶನಲ್ಲಿ ಕುಳ್ಳಿರಿಸಿದ್ದೇ ಸಾಧನೆ ಎನ್ನುವಂತಾಗಿದೆ. ಕೈಯಲ್ಲಿ ಕಾಸಿದ್ದರೆ, ಪೊಲೀಸರು ಕೇಸು ದಾಖಲಿಸಿದ್ರೂ ಜೈಲಿಗೆ ಹೋಗುವುದರಿಂದಲೂ ಪಾರಾಗಿ ಬರಬಹುದು ಅನ್ನೋದು ಇದಕ್ಕೆ.
ಸರಕಾರಿ ಕರ್ತವ್ಯದಲ್ಲಿರುವ ಯಾವುದೇ ವ್ಯಕ್ತಿ ಪ್ರಕರಣ ದಾಖಲಾಗಿ 48 ಗಂಟೆ ಕಾಲ ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನದಲ್ಲಿದ್ದರೆ ಹುದ್ದೆಯಿಂದ ಅಮಾನತುಗೊಳ್ಳುತ್ತಾನೆ. ಸದ್ರಿ ಪ್ರಕರಣದಲ್ಲಿ ಆರೋಪಿ ರತ್ನಾಕರ ಈಗಾಗ್ಲೇ ಕರ್ತವ್ಯದಿಂದ ಅಮಾನತುಗೊಂಡಿದ್ದು, ಇನ್ನು ಆರೋಪ ಸಾಬೀತಾಗಿ ಶಿಕ್ಷೆ ಪ್ರಕಟವಾದಲ್ಲಿ ಮಾತ್ರ ಸೇವೆಯಿಂದಲೇ ವಜಾಗೊಳ್ಳಬಹುದು ಎನ್ನುತ್ತಾರೆ, ತಜ್ಞರು.
Mangalore Dr Ratnakar who was seeing romancing with staffs gets bail in two hours of arrest. A government doctor, accused of sexual harassment at workplace, was released on bail on Monday, 29 November 2021. Advocate N Narasimha Hegde, representing district leprosy officer Dr Ratnakar, accused in the case, said that the III JMFC court granted the accused bail on the grounds that none of the aggrieved had filed a complaint against him, and the one who has complained had no direct connection with the case. Also, since he is a government doctor, his services are needed, the advocate said.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm