ರಾಜಕೀಯ ಒತ್ತಡದಿಂದಾಗಿ ನೂರ್ ಜಹಾನ್ ವಿರುದ್ಧ ಮತಾಂತರ ಕೇಸು ; ವಿಮೆನ್ ಇಂಡಿಯಾ ಆರೋಪ

13-12-21 10:39 pm       HK Desk news   ಕರಾವಳಿ

ಒಂದೇ ಕುಟುಂಬದ ನಾಲ್ವರ ಸಾವಿನ ಪ್ರಕರಣವನ್ನು ರಾಜಕೀಯ ಪ್ರೇರಿತ ಒತ್ತಡದಿಂದಾಗಿ ಪೊಲೀಸರು ಮತಾಂತರ ಕೃತ್ಯ ಎಂದು ಬಿಂಬಿಸಿದ್ದಾರೆ.

Photo credits : Representative image

ಮಂಗಳೂರು, ಡಿ.13 : ಒಂದೇ ಕುಟುಂಬದ ನಾಲ್ವರ ಸಾವಿನ ಪ್ರಕರಣವನ್ನು ರಾಜಕೀಯ ಪ್ರೇರಿತ ಒತ್ತಡದಿಂದಾಗಿ ಪೊಲೀಸರು ಮತಾಂತರ ಕೃತ್ಯ ಎಂದು ಬಿಂಬಿಸಿದ್ದಾರೆ. ಮಾನವೀಯ ನೆಲೆಯಲ್ಲಿ ಸಹಾಯ ಮಾಡಿದ್ದನ್ನೇ ನೆಪವಾಗಿಟ್ಟು ಮತಾಂತರ ಹೆಸರಲ್ಲಿ ಅಮಾಯಕ ಮಹಿಳೆಯನ್ನು ಬಂಧಿಸಿದ್ದಾರೆ ಎಂದು ವುಮೆನ್ ಇಂಡಿಯಾ ಮೂಮೆಂಟ್ (ಡಬ್ಲ್ಯುಐಎಂ) ಸಂಘಟನೆಯ ಅಧ್ಯಕ್ಷೆ ಶಹೀದಾ ತಸ್ನಿಂ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ತಸ್ನಿಂ, ನೂರ್ ಜಹಾನ್ ಎನ್ನುವ ಮಹಿಳೆ ವಿಜಯಲಕ್ಷ್ಮಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಿದ್ದರು. ಆದರೆ ಪೊಲೀಸರು ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಮತಾಂತರ ಕೃತ್ಯ ಎಂದು ನೂರ್ ಜಹಾನ್ ಅವರನ್ನು ಬಂಧಿಸಿದ್ದಾರೆ. ರಾಜಕಾರಣಿಗಳು ಮತ್ತು ಸಂಘ ಪರಿವಾರದ ಒತ್ತಡದಿಂದಾಗಿ ನೂರ್ ಜಹಾನ್ ವಿರುದ್ಧ ಕೇಸು ದಾಖಲಿಸಿದ್ದಾರೆ ಎಂದು ಹೇಳಿದರು.

ನಾಗೇಶ್ ಮತ್ತು ವಿಜಯಲಕ್ಷ್ಮಿ ನಡುವೆ ಸಂಬಂಧ ಸರಿಯಿರಲಿಲ್ಲ. ನಾಗೇಶ್, ಪತ್ನಿ ಮಕ್ಕಳನ್ನು ಅಮಾನುಷವಾಗಿ ಕೊಂದು ಹಾಕಿದ್ದರೂ ಆತನನ್ನು ಅಮಾಯಕನೆಂದು ಬಿಂಬಿಸಲಾಗಿದೆ. ನೂರ್ ಜಹಾನ್ ಮತಾಂತರ ಮಾಡಿದ್ದಾಳೆ ಎಂಬ ಬಗ್ಗೆ ಸೂಕ್ತ ಸಾಕ್ಷ್ಯ ಇಲ್ಲದೇ ಇದ್ದರೂ ಬಂಧಿಸಲಾಗಿದೆ. ವಿನಾಕಾರಣ ಆರೋಪ ಹೊರಿಸಿ ಕೇಸು ದಾಖಲಿಸಿ ಹಿಂಸೆ ನೀಡಿದ್ದಾರೆ. ಆಕೆ ಈ ಹಿಂದೆಯೂ ಇಸ್ಲಾಂ ನಂಬಿಕೆ ಹೆಸರಲ್ಲಿ ಯಾರನ್ನೂ ಮತಾಂತರ ಮಾಡಿರುವ ಹಿನ್ನೆಲೆ ಹೊಂದಿಲ್ಲ. ಕೆಲವು ಸ್ಥಾಪಿತ ಹಿತಾಸಕ್ತಿಗಳು ಮುಸ್ಲಿಂ ಮತ್ತು ಕ್ರಿಸ್ತಿಯನ್ನರ ವಿರುದ್ಧ ಮತಾಂತರದ ಆರೋಪ ಹೊರಿಸುವ ಹುನ್ನಾರ ಹೊಂದಿದ್ದಾರೆ.

ಈ ಬಗ್ಗೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯ ಮಾಡುತ್ತೇವೆ. ಅಲ್ಲದೆ, ನೂರ್ ಜಹಾನ್ ಗೆ ಹಿಂಸೆ ನೀಡುವುದನ್ನು ಕೂಡಲೇ ನಿಲ್ಲಿಸಬೇಕು. ಅವರನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಶಹೀದಾ ತಸ್ನಿಂ ಒತ್ತಾಯಿಸಿದರು.

With regards to the death of four members of the same family which occurred few days ago and subsequent arrest of Noor Jahan on the accusation of trying to convert the deceased woman to Islam, Shaheeda Tasnim, president of Women India Movement (WIM) said that the accusation and arrest is politically motivated.