ಬ್ರೇಕಿಂಗ್ ನ್ಯೂಸ್
18-12-21 06:24 pm HK Desk news ಕರಾವಳಿ
ಮಂಗಳೂರು, ಡಿ.18 : ಮಂಗಳೂರು ವಿವಿಯಲ್ಲಿ ಈ ಹಿಂದೆ ಉಪ ಕುಲಪತಿಯಾಗಿದ್ದ ಭೈರಪ್ಪರ ಅವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು ಎಲ್ಲರಿಗೂ ಗೊತ್ತು. ಈಗ ಸಭ್ಯ, ಸಜ್ಜನ ವ್ಯಕ್ತಿ ಎನ್ನಲಾಗಿರುವ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಉಪ ಕುಲಪತಿ ಆಗಿದ್ದಾರೆ. ಆದರೆ, ಈ ಬಾರಿಯೂ ಕುಲಪತಿಯ ಕಣ್ಣೋಟದಲ್ಲೇ ಮತ್ತೊಂದು ಅವ್ಯವಹಾರ ನಡೆದಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.
ಯುಜಿಸಿ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಂಗಳೂರು ವಿವಿಯಲ್ಲಿ 330 ಲ್ಯಾಪ್ ಟಾಪ್ ಗಳನ್ನು ವಿತರಿಸಲು ನಿರ್ಣಯಿಸಲಾಗಿದೆ. ಈ ಬಗ್ಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದರೂ, ಅದನ್ನು ಬದಿಗೊತ್ತಿ ಏಕಾಏಕಿ ಕಿಯೋನಿಕ್ಸ್ ಸಂಸ್ಥೆಯಿಂದ ಲ್ಯಾಪ್ಟಾಪ್ ಖರೀದಿಸಲಾಗಿದ್ದು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ. ಮಾಹಿತಿ ಪ್ರಕಾರ, 2021ರ ಸೆ.28ರಂದು ಇ-ಟೆಂಡರ್ ಕರೆಯಲಾಗಿದ್ದು ಲ್ಯಾಪ್ಟಾಪ್ ಖರೀದಿ ಪ್ರಕ್ರಿಯೆ ನಡೆದಿತ್ತು. ಟೆಂಡರ್ ಪ್ರಕ್ರಿಯೆ ಪೂರೈಸಿ ಕಂಪನಿಯೊಂದು ಲ್ಯಾಪ್ಟಾಪ್ ವಿತರಿಸಲು ಸಜ್ಜಾಗುತ್ತಿದ್ದಂತೆ ವಿವಿಯ ಉಪ ಕುಲಪತಿ ಯಡಪಡಿತ್ತಾಯ ಏಕಾಏಕಿ ಟೆಂಡರ್ ರದ್ದುಗೊಳಿಸಿ, ಹೆಚ್ಚುವರಿ ಮೊತ್ತಕ್ಕೆ ಕಿಯೋನಿಕ್ಸ್ ಸಂಸ್ಥೆಯಿಂದ ಲ್ಯಾಪ್ಟಾಪ್ ಖರೀದಿಸಿದ್ದಾರೆ.
ಲ್ಯಾಪ್ ಟಾಪ್ ಖರೀದಿಗೆ ನಡೆದಿತ್ತು ಟೆಂಡರ್
ಕಳೆದ ಸೆಪ್ಟಂಬರ್ ತಿಂಗಳ 28ರಂದು ವಿವಿಯ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯಿಸಿ ಲ್ಯಾಪ್ಟಾಪ್ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು. ಆರ್ಕಿಡ್ ಸಂಸ್ಥೆ (ಒಂದು ಲ್ಯಾಪ್ಟಾಪ್ ಕನಿಷ್ಠ ದರ 62,950 ರೂ.), ಸಹರಾ (ಕನಿಷ್ಠ ದರ 78,300 ರೂ.), ಯು.ಕೆ. ಇಂಟರ್ನ್ಯಾಶನಲ್ (ಕನಿಷ್ಠ ದರ 79,532 ರೂ.) ಸಂಸ್ಥೆ ಇ-ಟೆಂಡರ್ನಲ್ಲಿ ಭಾಗವಹಿಸಿದ್ದವು. ಇದರಲ್ಲಿ ಸಾಯಿರಾಮ್ ಶೆಟ್ಟಿ ಎಂಬವರ ಆರ್ಕಿಡ್ ಸಂಸ್ಥೆಯು 62,950 ರೂ.ಗೆ (11th Generation Intel Core Processor laptop) ಉತ್ತಮ ಮಾದರಿಯ ಲ್ಯಾಪ್ಟಾಪ್ ಪೂರೈಸಲು ಬಿಡ್ ಹಾಕಿದ್ದನ್ನು ಪರಿಗಣಿಸಿ, ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು.
ಏಕಾಏಕಿ ಟೆಂಡರ್ ರದ್ದುಪಡಿಸಿ ವಹಿವಾಟು
ಸೆ.28ರಂದು ಲ್ಯಾಪ್ಟಾಪ್ ಖರೀದಿ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಸ್ವೀಕರಿಸಲಾಗಿತ್ತು. ಆದರೆ, ಈ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ಯುಜಿಸಿ ಅನುದಾನ ಹೆಚ್ಚುವರಿಯಾಗಿ ಬಂದಿದೆ ಎನ್ನಲಾಗುತ್ತಿದ್ದು, 3.5 ಕೋಟಿ ಅನುದಾನ ಇರುವ ಬಗ್ಗೆ ವಿವಿಯ ಆಡಳಿತಕ್ಕೆ ತಿಳಿದುಬಂದಿತ್ತು. ಪರಿಶಿಷ್ಟ ಜಾತಿ ವಿಭಾಗಕ್ಕೇ ಈ ಅನುದಾನ ವ್ಯಯ ಮಾಡಬೇಕಾಗಿದ್ದರಿಂದ ಆಗಷ್ಟೇ ನಿರ್ಣಯಿಸಿದ್ದ ಟೆಂಡರ್ ಪ್ರಕ್ರಿಯೆಯನ್ನು ಬದಿಗಿಟ್ಟು ತರಾತುರಿಯಲ್ಲಿ ಕಿಯೋನಿಕ್ಸ್ ಸಂಸ್ಥೆಯ ಜೊತೆ ಲ್ಯಾಪ್ಟಾಪ್ ಡೀಲ್ ಕುದುರಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಆಗಿದ್ದರೂ, ಅದನ್ನು ಬದಿಗೊತ್ತಿ ಅದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಕಿಯೋನಿಕ್ಸ್ ಸಂಸ್ಥೆಯಿಂದ ವ್ಯವಹಾರ ಮಾಡಲಾಗಿದೆ.
ಒಂದರ ಬೆಲೆ 99,750 ರೂ.ನಂತೆ ಒಟ್ಟು 330 ಲ್ಯಾಪ್ ಟಾಪ್ ಖರೀದಿಸಲು ವಿವಿಯ ಉಪ ಕುಲಪತಿ ಮತ್ತು ಕೆಲವು ಸಿಂಡಿಕೇಟ್ ಸದಸ್ಯರು ನಿರ್ಣಯ ಕೈಗೊಂಡಿದ್ದಾರೆ ಅನ್ನುವ ಆರೋಪಗಳಿವೆ. ಕಳೆದ ಅಕ್ಟೋಬರ್ ಕೊನೆಯಲ್ಲಿ ಈ ಬಗ್ಗೆ ಖರೀದಿ ಪ್ರಕ್ರಿಯೆ ನಡೆದಿದ್ದು ನವೆಂಬರ್ ಆರಂಭದಲ್ಲಿ ನೂರು ಲ್ಯಾಪ್ ಟಾಪ್ ಖರೀದಿಸಿ, ಸ್ನಾತಕೋತ್ತರ ಮಕ್ಕಳಿಗೆ ವಿತರಿಸಲಾಗಿದೆ ಎನ್ನುವ ಮಾಹಿತಿಯಿದೆ. ವಿಶೇಷ ಅಂದ್ರೆ, ಈ ಹಿಂದಿನ ಟೆಂಡರ್ ಯಾಕೆ ರದ್ದಾಯ್ತು ಅನ್ನುವುದಕ್ಕೆ ಲ್ಯಾಪ್ಟಾಪ್ ಕೀಬೋರ್ಡ್ ನಲ್ಲಿ ಲೈಟ್ ಬ್ರೈಟ್ ಇಲ್ಲ ಎಂಬ ಕ್ಷುಲ್ಲಕ ಕಾರಣವನ್ನು ವಿವಿಯ ತಾಂತ್ರಿಕ ಸಮಿತಿ ನೀಡಿದೆ. ಈ ಬಗ್ಗೆ ಆರ್ಕಿಡ್ ಸಂಸ್ಥೆಯು ತಾನು ಬಿಡ್ ಮಾಡಿದ್ದ 62,950 ರೂ. ಕನಿಷ್ಠ ದರದಲ್ಲೇ ಕೀ ಬೋರ್ಡ್ ಬ್ರೈಟ್ ಲೈಟ್ ಅಳವಡಿಸಿ ನೀಡುವುದಾಗಿ ತಿಳಿಸಿದರೂ ವಿವಿ ಅಧಿಕಾರಿಗಳು ನಿರಾಕರಿಸಿದ್ದಾರೆ ಅನ್ನೋದನ್ನು ಸಾಯಿರಾಂ ಶೆಟ್ಟಿ ತಿಳಿಸಿದ್ದಾರೆ.
ಸಿಸಿ ಕ್ಯಾಮರಾ ಹಗರಣ ಮಾದರಿಯಲ್ಲೇ ಕುಕೃತ್ಯ
ಈ ಬಗ್ಗೆ ಮಂಗಳೂರು ವಿವಿಯ ಎಸ್ಸಿ- ಎಸ್ಟಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳ ತಂಡವೊಂದು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಿಗೆ ದೂರು ನೀಡಿದ್ದು ತನಿಖೆಗೆ ಆಗ್ರಹಿಸಿದೆ. ಮಂಗಳೂರು ವಿವಿಯಲ್ಲಿ ಈ ಹಿಂದೆ ಉಪ ಕುಲಪತಿ ಆಗಿದ್ದ ಪ್ರೊ.ಭೈರಪ್ಪ ಅವಧಿಯಲ್ಲಿ ನಡೆದ ಸೋಲಾರ್ ಮತ್ತು ಸಿಸಿ ಕ್ಯಾಮರಾ ಖರೀದಿ ಪ್ರಕರಣದ ಮಾದರಿಯಲ್ಲೇ ಲ್ಯಾಪ್ ಟಾಪ್ ಹಗರಣ ನಡೆದಿದೆ. ಮಂಗಳೂರು ವಿವಿಯ ಅಧಿಕಾರಿಗಳು ಎಸ್ಸಿ- ಎಸ್ಪಿ ವಿದ್ಯಾರ್ಥಿಗಳ ಹೆಸರಲ್ಲಿ 1.21 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಪಡೆದು ಗುಳುಂ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರ್ಕಿಡ್ ಸಂಸ್ಥೆಯಿಂದ 330 ಲ್ಯಾಪ್ ಟಾಪ್ ಖರೀದಿಸುತ್ತಿದ್ದರೆ 2.7 ಕೋಟಿ ಆಗುತ್ತಿದ್ದರೆ, ಕಿಯೋನಿಕ್ಸ್ ಸಂಸ್ಥೆಯಲ್ಲಿ 3.29 ಕೋಟಿ ರೂ. ಆಗುತ್ತದೆ. ಹೆಚ್ಚುವರಿ ಮೊತ್ತ 1.21 ಕೋಟಿಯನ್ನು ಅವ್ಯವಹಾರ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರ ಗಮನಕ್ಕೆ ತರಲಾಗಿದೆ.
ಕಿಯೋನಿಕ್ಸ್ ಸರಕಾರದ ಅಂಗಸಂಸ್ಥೆಯಾಗಿದ್ದು, ಯಾವುದೇ ಇಲೆಕ್ಟ್ರಾನಿಕ್ ಪರಿಕರಗಳನ್ನು ಸಂಸ್ಥೆಯಿಂದ ಸ್ವೀಕರಿಸಲು ವಿವಿಯಿಂದ ಪ್ರತ್ಯೇಕ ಟೆಂಡರ್ ಕರೆಯಬೇಕಾದ ಅವಶ್ಯಕತೆಯಿಲ್ಲ. 4ಜಿ ನಿಯಮದ ಪ್ರಕಾರ ಒಂದು ಕೋಟಿ ರೂ. ವರೆಗಿನ ಉಪಕರಣಗಳನ್ನು ವಿಶ್ವವಿದ್ಯಾನಿಲಯಕ್ಕೆ ನೇರವಾಗಿ ಖರೀದಿಸಲು ಅವಕಾಶ ಇದೆ. ಇದೇ ನೀತಿಯನ್ನು ನೆಪವಾಗಿಟ್ಟು ವಿವಿಯ ಆಡಳಿತ ಲ್ಯಾಪ್ಟಾಪ್ ಖರೀದಿಗೆ ನಿರ್ಣಯ ಕೈಗೊಂಡಿದೆ ಎನ್ನಲಾಗುತ್ತಿದೆ. ಒಟ್ಟು 330 ಲ್ಯಾಪ್ ಟಾಪ್ ಗಳನ್ನು ಮೂರು ಹಂತದಲ್ಲಿ ಪಡೆಯಲು ನಿರ್ಣಯಿಸಲಾಗಿದ್ದು, ಮೊದಲ ಹಂತದಲ್ಲಿ 100 ಲ್ಯಾಪ್ ಟಾಪ್ ಖರೀದಿ ಪ್ರಕ್ರಿಯೆ ಮುಗಿದಿದೆ.
ವಿವಿಯ ಆಡಳಿತದಿಂದ ಅಧಿಕಾರ ದುರ್ಬಳಕೆ
ಮಂಗಳೂರು ವಿವಿಗೆ ಸಂಬಂಧಿಸಿ ಯಾವುದೇ ವಸ್ತು ಖರೀದಿಸುವುದಿದ್ದರೂ, 1 ಲಕ್ಷ ರೂ. ಮೊತ್ತದ ವರೆಗಿನ ಖರೀದಿಗೆ ಉಪ ಕುಲಪತಿಗಳಿಗೆ ಸ್ವಯಂ ನಿರ್ಧರಿಸಲು ಅಧಿಕಾರ ಇರುತ್ತದೆ. 1ರಿಂದ 5 ಲಕ್ಷ ವರೆಗಿನ ಖರೀದಿ ಪ್ರಕ್ರಿಯೆಗೆ ಜಿಲ್ಲಾ ಬುಲೆಟಿನ್ ಟೆಂಡರ್, 5 ಲಕ್ಷ ರೂ.ಗಿಂತ ಅಧಿಕ ಮೊತ್ತದ ಖರೀದಿಗೆ ವಿವಿಯ ಸಿಂಡಿಕೇಟ್ ಸಭೆಯ ನಿರ್ಣಯ ಅಗತ್ಯ. ಆದರೆ ಲ್ಯಾಪ್ಟಾಪ್ ಖರೀದಿಯಲ್ಲಿ ಈ ನಿಯಮವನ್ನೇ ಉಪ ಕುಲಪತಿ ಗಾಳಿಗೆ ತೂರಿದ್ದಾರೆ ಎನ್ನುವ ಆರೋಪಗಳಿವೆ.
ಯಾಕಂದ್ರೆ, ಕೇವಲ 62,950 ರೂ. ಬೆಲೆಯ ಲ್ಯಾಪ್ ಟಾಪ್ ಅನ್ನು ಕಿಯೋನಿಕ್ಸ್ ಸಂಸ್ಥೆಯಿಂದ 99,750 ರೂ. ಕೊಟ್ಟು ಖರೀದಿಸಿರುವುದು ಅಕ್ರಮ. ಒಂದು ಬಾರಿ ಸಿಂಡಿಕೇಟ್ ನಿರ್ಣಯ ಪಡೆದು ಕನಿಷ್ಟ ದರಪಟ್ಟಿ ಅಂಗೀಕರಿಸಿ, ಖರೀದಿ ಸಮಿತಿ ಸಭೆಯಲ್ಲಿ ಮಂಡಿಸಿದ ಬಳಿಕ ಏಕಾಏಕಿ ಸಿಂಡಿಕೇಟ್ ಸಮಿತಿಯ ಗಮನಕ್ಕೇ ಬರದಂತೆ ಟೆಂಡರ್ ರದ್ದುಗೊಳಿಸಿ ಹಿಂಬಾಗಿಲ ವ್ಯವಹಾರ ನಡೆಸಿದ್ದು ಇನ್ನೊಂದು ಅಕ್ರಮ. ಇದೇ ರೀತಿಯ ಅಕ್ರಮಗಳು ಈ ಹಿಂದಿನ ಭ್ರಷ್ಟ ವಿಸಿ ಎನ್ನಲಾದ ಭೈರಪ್ಪರ ಕಾಲದಲ್ಲಿಯೂ ನಡೆದಿತ್ತು. ಈಗ ನಡೆದಿರುವ ಅವ್ಯವಹಾರದಲ್ಲಿ ವಿವಿ ಕುಲಪತಿ ಸೇರಿ ಸಿಂಡಿಕೇಟ್ ಸದಸ್ಯರು ಮತ್ತು ಕಿಯೋನಿಕ್ಸ್ ಅಧ್ಯಕ್ಷರು ಕೂಡ ಪಾಲುದಾರಿಯೇ ಅನ್ನುವ ಅನುಮಾನ ಎದ್ದಿದೆ.
Headline Karnataka exposes Mangalore University Laptop distribution mafia to students. Chancellor Yadapadithaya and Keonics President Harikrishna Bantwal involvement revealed by Sources. Former CM Yediyurappa had launched the free laptop distribution programme on the day of Swami Vivekananda Jayanti at the Sri Kanteerava Indoor Stadium, Bengaluru, by symbolically presenting laptops to a few students. Later, laptops were distributed to all first-year degree students at government first grade colleges.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm