ಬ್ರೇಕಿಂಗ್ ನ್ಯೂಸ್
21-12-21 05:23 pm Mangalore Correspondent ಕರಾವಳಿ
ಮಂಗಳೂರು, ಡಿ.21 : ಸೋಮವಾರ ಸಂಜೆ ಅಂತರಿಕ್ಷ ವಿಸ್ಮಯಕ್ಕೆ ಸಾಕ್ಷಿಯಾಗಿದ್ದ ನೀಲ ಬಾನಿನ ಮಧ್ಯೆ ಮೂಡಿಬಂದಿದ್ದ ನಕ್ಷತ್ರಗಳ ಸರಮಾಲೆಯ ರೀತಿಯ ಸ್ಟಾರ್ ಲಿಂಕ್ ಸ್ಯಾಟಲೈಟ್ ಟ್ರೈನ್ ಇಂದು ಸಂಜೆ ಕೂಡ ಕರಾವಳಿಯಲ್ಲಿ ಪ್ರತ್ಯಕ್ಷವಾಗಲಿದೆ ಎನ್ನುವುದನ್ನು ಖಗೋಳ ಪರಿಣತರು ದೃಢಪಡಿಸಿದ್ದಾರೆ.
ಖಗೋಳ ವೀಕ್ಷಣೆಯ ಬಗ್ಗೆ ಅಧ್ಯಯನ ನಡೆಸುವ ಅಲೋಶಿಯಸ್ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಚಂದ್ರಶೇಖರ್ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಇಂದು ಸಂಜೆ 7.10ರ ಸುಮಾರಿಗೆ ಪಶ್ಚಿಮ ಆಗಸದಲ್ಲಿ ಕಂಡುಬರಲಿದೆ ಎನ್ನುವುದನ್ನು ತಿಳಿಸಿದ್ದಾರೆ. ಈ ಸ್ಟಾರ್ ಲಿಂಕ್ ಸ್ಯಾಟಲೈಟ್ ಸರಣಿಯು ದಕ್ಷಿಣ ಭಾಗದಿಂದ ಉತ್ತರಕ್ಕೆ ಚಲಿಸಲಿದ್ದು, ಬರಿಗಣ್ಣಿಗೆ ದೀಪಗಳ ಸಾಲಿನಂತೆ ಕಂಡುಬರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಖಗೋಳದ ಮ್ಯಾಪ್ ಒಂದನ್ನು ನೀಡಿದ್ದು, ದಕ್ಷಿಣದಿಂದ ಉತ್ತರಕ್ಕೆ ಚಲಿಸುವುದನ್ನು ಮಾರ್ಕ್ ಮಾಡಿದ್ದಾರೆ. (ಚಿತ್ರದಲ್ಲಿ ಗಮನಿಸಿ)
ಸೋಮವಾರ ಸಂಜೆ 7.40ರ ಸುಮಾರಿಗೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಕಾರವಾರ ಸೇರಿದಂತೆ ವಿವಿಧ ಕಡೆಗಳಲ್ಲಿ ದೀಪಗಳ ಸಾಲಿನ ರೀತಿಯ ಅಚ್ಚರಿ ಕಂಡುಬಂದಿತ್ತು. ಹೆಚ್ಚಿನ ಜನರು ಖಗೋಳ ವಿಸ್ಮಯದ ಬಗ್ಗೆ ಗಾಬರಿಗೊಂಡಿದ್ದರು. ಆದರೆ, ಈ ಬಗ್ಗೆ ಅಧ್ಯಯನಾಸಕ್ತರಲ್ಲಿ ಕೇಳಿದಾಗ, ಅಮೆರಿಕದ ಬಿಲಿಯನೇರ್ ಎಲನ್ ಮಸ್ಕ್ ಮಾಡಿರುವ ಕೌತುಕ ಎನ್ನುವ ವಿಚಾರ ತಿಳಿಸಿದ್ದರು. ಇಂಜಿನಿಯರ್, ಖಗೋಳಶಾಸ್ತ್ರಜ್ಞ, ಗ್ಲೋಬಲ್ ಉದ್ಯಮಿ ಎಂದು ಹೆಸರಾಗಿರುವ ಎಲಾನ್ ಮಸ್ಕ್ ತನ್ನದೇ ಸ್ಪೇಸ್ ಎಕ್ಸ್ ಎನ್ನುವ ಯೋಜನೆಯಡಿ ಸಾವಿರಾರು ಸ್ಯಾಟಲೈಟ್ ಗಳನ್ನು ಒಂದೇ ಕಕ್ಷೆಯಲ್ಲಿ ಹರಿಯಬಿಟ್ಟು ಹೊಸ ಪ್ರಯೋಗ ಮಾಡುತ್ತಿದ್ದಾರೆ.
ಅಂತರಿಕ್ಷದಲ್ಲಿ ಕಡಿಮೆ ಎತ್ತರದಲ್ಲಿ ಕಕ್ಷೆಯಲ್ಲಿ ಹಾದು ಹೋಗುವ ಸ್ಟಾರ್ ಲಿಂಕ್ ಸ್ಯಾಟಲೈಟ್ ಸರಣಿಯು ಆಗಸದಲ್ಲಿ ರೈಲು ಹೋದ ರೀತಿ ಕಾಣುತ್ತದೆ. ಇದೇ ಕಾರಣಕ್ಕೆ ಸ್ಟಾರ್ ಲಿಂಕ್ ಸ್ಯಾಟಲೈಟ್ ಟ್ರೈನ್ ಎಂದೇ ಇದಕ್ಕೆ ಹೆಸರಿಸಲಾಗಿದೆ. ಇಡೀ ಜಗತ್ತಿನಲ್ಲಿ ಲಂಡನ್ನಿಂದ ಅಂಟಾರ್ಕ್ಟಿಕಾ ವರೆಗೂ ಸ್ಟಾರ್ ಲಿಂಕ್ ಮೂಲಕ ನೇರವಾಗಿ ಹೈಸ್ಪೀಡ್ ಇಂಟರ್ನೆಟ್ ಒದಗಿಸುವುದು ಸ್ಪೇಸ್ ಎಕ್ಸ್ ಯೋಜನೆಯ ಗುರಿ. ಸ್ಯಾಟಲೈಟ್ ಅಂತರ್ಜಾಲ ಜಾರಿಗೆ ಬಂದಲ್ಲಿ ಜನರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ, ನೇರವಾಗಿ ಇಂಟರ್ನೆಟ್ ಡಾಟಾ ಪಡೆಯಬಹುದು. ಅದಕ್ಕಾಗಿ ಎಲಾನ್ ಮಸ್ಕ್ ಕಂಪನಿಗೆ ಜನರು ನಿಗದಿತ ಶುಲ್ಕ ತೆತ್ತು ಸ್ಯಾಟಲೈಟ್ ಇಂಟರ್ನೆಟ್ ಸೇವೆ ಪಡೆಯಬಹುದು.
ಮಂಗಳನಲ್ಲಿಗೆ ಮಾನವ ಪ್ರಯಾಣ, ಚಂದ್ರನಲ್ಲಿ ಮನೆ ಮಾಡುವುದು, ಉಪಗ್ರಹ ಉಡಾವಣೆಯ ಖರ್ಚು ಕಡಿಮೆ ಮಾಡುವುದು ಸೇರಿದಂತೆ ವಿವಿಧ ಮಹತ್ವಾಕಾಂಕ್ಷಿ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸ್ಪೇಸ್ ಎಕ್ಸ್ ಯೋಜನಾ ಸರಣಿಯನ್ನು 2002ರಲ್ಲಿ ಸ್ಥಾಪನೆ ಮಾಡಲಾಗಿತ್ತು. ಇಂಟರ್ನೆಟ್ ಉದ್ದೇಶದ ಸ್ಟಾರ್ ಲಿಂಕ್ ಸರಣಿಯನ್ನು 2018ರ ಫೆಬ್ರವರಿಯಲ್ಲಿ ಆರಂಭಿಸಿದ್ದು, ಈಗಾಗ್ಲೇ ಈ ಯೋಜನೆಯಡಿ 1800ಕ್ಕೂ ಹೆಚ್ಚು ಸ್ಯಾಟಲೈಟ್ ಗಳನ್ನು ಬಿಡಲಾಗಿದೆ. ನಿರ್ದಿಷ್ಟ ಕಕ್ಷೆಯಲ್ಲಿ ಸರಣಿಯಂತೆ ಇನ್ನೂ ಸಾವಿರಾರು ಸ್ಯಾಟಲೈಟ್ ಗಳನ್ನು ಹಾರಿ ಬಿಡಲಾಗುತ್ತಿದೆ. ಅದು ಭೂಮಿಯ ಸುತ್ತ ತಿರುಗುವ ಬದಲು ಉತ್ತರ- ದಕ್ಷಿಣ- ಪೂರ್ವ- ಪಶ್ಚಿಮಕ್ಕೆ ಆವರ್ತನ ರೂಪದಲ್ಲಿ ಸುತ್ತುವ ರೀತಿ ಕಕ್ಷೆ ಮಾಡಲಾಗಿದೆ. ಎರಡು ದಿನಗಳ ಹಿಂದೆ ಕ್ಯಾಲಿಫೋರ್ನಿಯಾದಿಂದ 52 ಉಪಗ್ರಹಗಳನ್ನು ಹೊಂದಿದ್ದ ಮತ್ತೊಂದು ಗುಚ್ಛವನ್ನು ಹಾರಿಬಿಟ್ಟಿದ್ದು, ಅದೇ ಈಗ ಆಗಸದಲ್ಲಿ ಕಾಣುತ್ತಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
Elon Musks Starlink satellite train to be found in various parts of Mangalore today at 7 pm. Aloysius college science professor talking to Headline Karnataka said that the satellite train will be visible even today after 7:10 PM in various parts of Dakshina Kannada. Several residents of some areas in the twin districts witnessed some mysterious flying objects with shining bright lights on Monday December 20 evening. The long train of lights is nothing but satellites, launched into space by the US company SpaceX, run by South African entrepreneur Elon Musk. Around 40 satellites were seen in the sky late in the evening on Monday in Mangaluru and Udupi.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am