ಬ್ರೇಕಿಂಗ್ ನ್ಯೂಸ್
20-12-21 10:24 pm HK Desk news ಕರಾವಳಿ
ಮಂಗಳೂರು, ಡಿ.20: ಬಂಟ್ವಾಳ ತಾಲೂಕಿನ ಕಲ್ಲಡ್ಕ ಆಸುಪಾಸಿನ ಜನರು ರಾತ್ರಿ ಆಗಸವನ್ನು ನೋಡಿ ಹೌಹಾರಿದ್ದಾರೆ. ಕಗ್ಗತ್ತಲ ರಾತ್ರಿಯಲ್ಲಿ ನಕ್ಷತ್ರಗಳು ಒಂದರ ಹಿಂದೊಂದರಂತೆ ಸವಾರಿ ಹೊರಟ ರೀತಿ ಆಗಸದಲ್ಲಿ ವಿದ್ಯಮಾನ ಕಂಡಿದ್ದು ಜನರು ತಮ್ಮ ಕಣ್ಣನ್ನೇ ನಂಬದಾಗಿದ್ದಾರೆ. ಹಲವಾರು ಮಂದಿ ತಮ್ಮ ಮೊಬೈಲಿನಲ್ಲಿ ಅಪೂರ್ವ ವಿದ್ಯಮಾನವನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದ್ದಾರೆ.
ಮಿಂಚು, ಸಿಡಿಲು ಇಲ್ಲದ ನೀಲಿ ಬಾನಿನಲ್ಲಿ ದೀಪಗಳನ್ನು ಉದ್ದಕ್ಕೆ ಉರಿಸಿಟ್ಟ ರೀತಿ ಕಂಡುಬಂದಿದೆ. ಇನ್ನು ಕೆಲವರಿಗೆ ಆಗಸದಲ್ಲಿ ನಕ್ಷತ್ರಗಳೇ ಒಂದರ ನಂತರ ಮತ್ತೊಂದರಂತೆ ಸವಾರಿ ಹೊರಟ ರೀತಿ ಕಂಡುಬಂದಿತ್ತು. ಆದರೆ, ಸರಿಯಾಗಿ ಗಮನಿಸಿದರೆ ಅದು ನಿಧಾನಕ್ಕೆ ಚಲಿಸುತ್ತಿರುವುದನ್ನು ಜನರು ಗಮನಿಸಿದ್ದಾರೆ. ಕಲ್ಲಡ್ಕ ಕೆಳಗಿನಪೇಟೆಯ ಮೈದಾನದಲ್ಲಿ ಹತ್ತು- ಹದಿನೈದು ಮಂದಿ ಯುವಕರು ಆಟ ಮುಗಿಸಿ ಹರಟೆ ಹೊಡೆಯುತ್ತಾ ಕುಳಿತುಕೊಂಡಿದ್ದಾಗ ಈ ರೀತಿಯ ವಿದ್ಯಮಾನ ಕಂಡಿದ್ದಾರೆ. ರಾತ್ರಿ 7.45ರ ಸುಮಾರಿಗೆ 5 ನಿಮಿಷ ಕಾಲ ಈ ವಿದ್ಯಮಾನ ಕಂಡಿತ್ತು. ಏನೋ ಅದ್ಬುತ ಚಮತ್ಕಾರದ ರೀತಿ ಇತ್ತು ಎಂದು ಇದನ್ನು ಕಣ್ಣಾರೆ ಕಂಡ ಅಲ್ಲಿನ ಯುವಕ ಯತಿರಾಜ್ ಹೇಳಿದ್ದಾರೆ. ಆನಂತರ ಕಲ್ಲಡ್ಕ, ಬಂಟ್ವಾಳ, ಬಿ.ಸಿ.ರೋಡ್ ಆಸುಪಾಸಿನ ಜನರು ಕೂಡ ಇದೇ ವಿದ್ಯಮಾನವನ್ನು ಆಗಸದಲ್ಲಿ ಕಂಡಿರುವುದಾಗಿ ಹೇಳುತ್ತಿದ್ದಾರೆ. ಅಲ್ಲಿನ ವಾಟ್ಸಪ್ ಗ್ರೂಪ್ ಗಳಲ್ಲಿ ಇದರ ಫೋಟೋ, ವಿಡಿಯೋ ವೈರಲ್ ಆಗಿದ್ದು, ಜನರು ಅಚ್ಚರಿಗೆ ಒಳಗಾಗಿದ್ದಾರೆ.
ಈ ಬಗ್ಗೆ ಮಂಗಳೂರಿನ ಅಲೋಶಿಯಸ್ ಕಾಲೇಜಿನ ಫಿಸಿಕ್ಸ್ ಪ್ರಾಧ್ಯಾಪಕ ಚಂದ್ರಶೇಖರ್ ಶೆಟ್ಟಿ ಬಳಿ ಮಾಹಿತಿ ಕೇಳಿದಾಗ, ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ, ಇದು ಯಾವುದೋ ಮಾನವ ನಿರ್ಮಿತ ವಸ್ತುವೇ ಆಗಿರುವ ಸಾಧ್ಯತೆಯಿದೆ. ಅಂತರಿಕ್ಷ ವಿದ್ಯಮಾನ ಅಲ್ಲ ಎಂದಿದ್ದಾರೆ. ವಾತಾವರಣದ ಅಧ್ಯಯನಕ್ಕಾಗಿ ವಿಜ್ಞಾನಿಗಳು ನಡೆಸುತ್ತಿರುವ ಪ್ರಯೋಗ ಎನ್ನುವುದನ್ನು ವಿಡಿಯೋ ನೋಡಿಯೇ ಹೇಳಿದ್ದು, ಈ ಬಗ್ಗೆ ಸ್ವಲ್ಪ ಸ್ಟಡಿ ಮಾಡಿ ಹೇಳುವುದಾಗಿ ಹೇಳಿದ್ದಾರೆ.
ಅಲಾನ್ ಮಸ್ಕ್ ಸ್ಯಾಟಲೈಟ್ ಸಿರೀಸ್ ಪ್ರಯೋಗ
ಆನಂತರ, ಮಾಹಿತಿ ಕಲೆಹಾಕಿದ ಚಂದ್ರಶೇಖರ್ ಶೆಟ್ಟಿ ಕೆಲವೇ ನಿಮಿಷಗಳಲ್ಲಿ ಅಚ್ಚರಿಯ ವಿಚಾರ ಹೊರಗೆಡವಿದ್ದಾರೆ. ಅಮೆರಿಕದ ಅಲಾನ್ ಮಸ್ಕ್ ಎಂಬಾತನ ಸ್ಯಾಟಲೈಟ್ ಪ್ರಯೋಗ ಇದು ಎಂದಿದ್ದಾರೆ. ಅಮೆರಿಕದಲ್ಲಿ ಬಿಲಿಯನೇರ್ ಬಿಸಿನೆಸ್ ಮ್ಯಾನ್ ಆಗಿರುವ ಅಲಾನ್ ಮಾಸ್ಕ್ ಅಂತರಿಕ್ಷ ಅಧ್ಯಯನದ ಆಸಕ್ತನಾಗಿದ್ದು, ಖಗೋಳ ಅಧ್ಯಯನ ನಡೆಸಲೆಂದೇ ಖಾಸಗಿ ಏಜನ್ಸಿಯನ್ನು ಇಟ್ಟುಕೊಂಡಿದ್ದಾನೆ. ಭೂಮಿ, ಇತರ ಗ್ರಹಗಳು, ನಕ್ಷತ್ರಗಳ ಬಗ್ಗೆ ಆತ ಅಧ್ಯಯನ ನಡೆಸುತ್ತಿದ್ದು, ವಾತಾವರಣದ ಅಧ್ಯಯನಕ್ಕಾಗಿ ಸ್ಟಾರ್ ಲಿಂಕ್ ಸ್ಯಾಟಲೈಟ್ ಟ್ರೈನ್ ಎಂಬುದನ್ನು ಬಿಟ್ಟಿದ್ದಾನೆ. ಇದರ ವಿಡಿಯೋವನ್ನು ಅಲಾನ್ ಮಾಸ್ಕ್, ಇದೇ 2021ರ ಮೇ 07ರಂದು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದು ವಾತಾವರಣದ ಅಧ್ಯಯನದ ಉದ್ದೇಶದಿಂದ ಹರಿಯಬಿಟ್ಟಿರುವ ಸ್ಯಾಟಲೈಟ್ ಸಿರೀಸ್. ಆರೇಳು ಕಿಮೀ ಎತ್ತರದಿಂದ ತೊಡಗಿ ಈ ಸ್ಯಾಟಲೈಟ್ ಭೂಮಿಯ ಸುತ್ತ ತಿರುಗುತ್ತಿರುವ ಸಾಧ್ಯತೆಯಿದೆ. ಅಂತರಿಕ್ಷದಲ್ಲಿ ವಿವಿಧ ರೀತಿಯ ಸ್ಯಾಟಲೈಟ್ ಇದ್ದು, ಹತ್ತು ಕಿಮೀ ಎತ್ತರದಿಂದ 36 ಸಾವಿರ ಕಿಮೀ ಎತ್ತರದಲ್ಲಿ ಬೇರೆ ಬೇರೆ ಉದ್ದೇಶಕ್ಕೆ ಸ್ಥಿರವಾಗಿ ತಿರುಗುತ್ತಿರುತ್ತದೆ. ಅವುಗಳ ಉದ್ದೇಶ ಮತ್ತು ನಿರ್ವಹಣೆ ಆಧಾರದಲ್ಲಿ ಅದರ ಎತ್ತರ ನಿಯಂತ್ರಿಸಲ್ಪಡುತ್ತದೆ ಎಂದಿದ್ದಾರೆ.
(ಅಮೆರಿಕದ ಬಿಲಿಯನೇರ್ ಎಲಾನ್ ಮಸ್ಕ್ ಟೀಮ್ ಕಳೆದ ಮೇ ತಿಂಗಳಲ್ಲಿ ಸ್ಟಾರ್ ಲಿಂಕ್ ಸ್ಯಾಟಲೈಟ್ ಬಗ್ಗೆ ವಿಡಿಯೋ ಅಪ್ಲೋಡ್ ಮಾಡಿರುವುದು. ಅದರ ಲಿಂಕ್ ಇಲ್ಲಿ ಕೊಡಲಾಗಿದೆ)
Elon Musks Starlink satellite train seen in various parts of Mangaluru including Bantwal and Vamanjoor. If you're a fan of scanning the sky for things that glow in the night — and even if you're not — you might want to look to the heavens for a satellite train that is causing some excitement across the country. They are satellites launched by Elon Musk's SpaceX as part of its Starlink internet service.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm