ಕುಕ್ಕೆ ಸುಬ್ರಹ್ಮಣ್ಯಕ್ಕೆ ಸುಪ್ರೀಂ ನ್ಯಾಯಾಧೀಶ ಅಬ್ದುಲ್ ನಜೀರ್ ; ಸುಬ್ರಹ್ಮಣ್ಯನ ಪ್ರೀತ್ಯರ್ಥ ಆಶ್ಲೇಷ ಬಲಿ ಸೇವೆ 

27-12-21 08:51 pm       Mangalore Correspondent   ಕರಾವಳಿ

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುವ ಮೂಲತಃ ಮೂಡುಬಿದ್ರೆ ಮೂಲದ ಅಬ್ದುಲ್ ನಜೀರ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಸೇವೆ ನೆರವೇರಿಸಿದ್ದಾರೆ.‌ 

Photo credits : Headline Karnataka

ಪುತ್ತೂರು, ಡಿ.27 : ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುವ ಮೂಲತಃ ಮೂಡುಬಿದ್ರೆ ಮೂಲದ ಅಬ್ದುಲ್ ನಜೀರ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಸೇವೆ ನೆರವೇರಿಸಿದ್ದಾರೆ.‌ 

ಜಸ್ಟಿಸ್ ಅಬ್ದುಲ್ ನಜೀರ್ ಅವರು ಭಾನುವಾರವೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ, ಉಳಿದುಕೊಂಡಿದ್ದರು. ಸೋಮವಾರ ಬೆಳಗ್ಗೆ ದೇವಸ್ಥಾನದಲ್ಲಿ ಕ್ಷೇತ್ರದ ವಿಶೇಷ ಸೇವೆ ಆಶ್ಲೇಷ ಬಲಿ ನಡೆಸಿದ್ದಾರೆ. 

ಅಬ್ದುಲ್ ನಜೀರ್ ಅವರು ಕುಟುಂಬ ಸಮೇತರಾಗಿ ಕುಕ್ಕೆಗೆ ಬಂದಿದ್ದು ವಿಶೇಷ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ. ಸೇವೆಯ ಸಂದರ್ಭ ಯಾವುದೇ ಸಂಕಲ್ಪ ಹೇಳಿಕೊಂಡಿಲ್ಲ. ನಿಶ್ಚಿತ ಉದ್ದೇಶಕ್ಕಾಗಿ ಪೂಜೆ ಕೈಗೊಂಡಿದ್ದರೆ ಅದರ ಬಗ್ಗೆ ಉಲ್ಲೇಖ ಮಾಡುವ ಪದ್ಧತಿ ಇದೆ. 

ಆದರೆ ನಜೀರ್ ಅವರು ಯಾವುದೇ ಪೂಜಾ ಸಂಕಲ್ಪ ಇರುವ ಬಗ್ಗೆ ಹೇಳಿಲ್ಲ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. ನಜೀರ್ ಅವರನ್ನು ದೇವಸ್ಥಾನದ ಸಿಬಂದಿ ಸ್ವಾಗತಿಸಿದರು. ಆಶ್ಲೇಷ ಬಲಿ ಸೇವೆ ನೆರವೇರಿಸಿ ಕುಕ್ಕೆ ಸುಬ್ರಹ್ಮಣ್ಯದಿಂದ ನಿರ್ಗಮಿಸಿದ್ದಾರೆ ಎನ್ನುವ ಮಾಹಿತಿಯಿದೆ. 

ಅಯೋಧ್ಯೆ ಶ್ರೀರಾಮ ಜನ್ಮಭೂಮಿ ವ್ಯಾಜ್ಯದಲ್ಲಿ ತೀರ್ಪು ನೀಡಿದ ನಾಲ್ವರು ನ್ಯಾಯಾಧೀಶರಲ್ಲಿ ಅಬ್ದುಲ್ ನಜೀರ್ ಕೂಡ ಒಬ್ಬರಾಗಿದ್ದು ಅವರಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿತ್ತು.

Supreme Court judge Abdul Nazeer performed Aslesha Bali puja at Kukke Subramaya temple in Dakshina Kannada along with his family in Mangalore.