ಬ್ರೇಕಿಂಗ್ ನ್ಯೂಸ್
28-12-21 09:23 pm Mangalore Correspondent ಕರಾವಳಿ
ಮಂಗಳೂರು, ಡಿ.28 : ಸುರತ್ಕಲ್ ನಲ್ಲಿ ತಾತ್ಕಾಲಿಕ ನೆಪದಲ್ಲಿ ಆರು ವರ್ಷಗಳಿಂದ ಟೋಲ್ ಗೇಟ್ ನಡೆಸಲಾಗುತ್ತಿದೆ. ಇದನ್ನು ಸ್ಥಳೀಯ ಶಾಸಕ ಭರತ್ ಶೆಟ್ಟಿ ಮತ್ತು ಸಂಸದ ನಳಿನ್ ಕುಮಾರ್ ಆಶ್ರಿತ ಮಾಫಿಯಾಗಳು ನಡೆಸುತ್ತಿವೆ. ಇವರ ಶಾಮೀಲಾತಿಯಲ್ಲೇ ಟೋಲ್ ಗೇಟ್ ಮಾಫಿಯಾ ಜನರನ್ನು ಸುಲಿಗೆ ಮಾಡುತ್ತಿದೆ. ಸಂಸದರಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿ, ಟೋಲ್ ಗೇಟ್ ನಿಲ್ಲಿಸಲು ಸಾಧ್ಯವಾಗದಿದ್ದರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅವೈಜ್ಞಾನಿಕ ಮತ್ತು ಕಾನೂನು ಉಲ್ಲಂಘಿಸಿ ನಡೆಸಲಾಗುತ್ತಿರುವ ಟೋಲ್ ಗೇಟನ್ನು ಪದೇ ಪದೇ ತಾತ್ಕಾಲಿಕ ನೆಲೆಯಲ್ಲಿ ಉತ್ತರ ಭಾರತದ ಯಾವುದೋ ಕಂಪನಿ ಹೆಸರಲ್ಲಿ ಗುತ್ತಿಗೆ ನೀಡಲಾಗುತ್ತದೆ. ಆದರೆ, ಇದನ್ನು ಸ್ಥಳೀಯ ಬಿಜೆಪಿ ಮುಖಂಡರೇ ಸೇರಿ ನಡೆಸುತ್ತಿದ್ದಾರೆ. ಟೋಲ್ ಗೇಟ್ ನಲ್ಲಿ ರೌಡಿಗಳನ್ನು, ಕಿಡಿಗೇಡಿಗಳನ್ನು ನಿಲ್ಲಿಸಿ ಜನರನ್ನು ಲೂಟಿ ಮಾಡುತ್ತಿದ್ದಾರೆ. ಹಲವು ಬಾರಿ ಪ್ರಶ್ನೆ ಮಾಡಿದ ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ಇವೆಲ್ಲ ಸಂಸದ ನಳಿನ್ ಕುಮಾರ್ ಕೃಪೆಯಿಂದಲೇ ಆಗುತ್ತಾ ಬಂದಿದೆ. ಶಾಸಕ ಭರತ್ ಶೆಟ್ಟಿ ಈ ಹಿಂದೆ, ಮುಂದಿನ ಬಾರಿ ಟೋಲ್ ಗೇಟ್ ಗುತ್ತಿಗೆ ನವೀಕರಣ ಮಾಡುವುದಿಲ್ಲ. ಹಾಗೊಂದ್ವೇಳೆ ಮುಂದುವರಿದರೆ ಟೋಲ್ ಗೇಟನ್ನು ಹಾರೆಯಿಂದ ಅಗೆದು ನಾವೇ ತೆಗೆದು ಹಾಕುತ್ತೇವೆ ಎಂದು ವೀರಾವೇಶದಿಂದ ಮಾತನಾಡಿದ್ದರು. ಆದರೆ ಈಗ ಮೂರು ತಿಂಗಳ ಮಟ್ಟಿಗೆ ಗುತ್ತಿಗೆಯನ್ನು ನವೀಕರಿಸಿದಾಗ ಭರತ್ ಶೆಟ್ಟಿ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.
ಆರು ವರ್ಷಗಳ ಹಿಂದೆ ಸುರತ್ಕಲ್ ನಲ್ಲಿ ಟೋಲ್ ಗೇಟ್ ಶುರುವಾದಾಗ, ಹೆಜಮಾಡಿಯಲ್ಲಿ ಟೋಲ್ ಸಂಗ್ರಹ ಕೇಂದ್ರ ಆರಂಭಿಸಿದ ಬಳಿಕ ನಿಲ್ಲಿಸಲಾಗುವುದು ಎಂದಿದ್ದರು. ಸರಕಾರಕ್ಕೂ ಲಿಖಿತ ಪ್ರಸ್ತಾವನೆ ಮುಂದಿಟ್ಟು ಆರು ತಿಂಗಳ ಅವಧಿಗಷ್ಟೇ ಅನುಮತಿ ಪಡೆಯಲಾಗಿತ್ತು. ಆದರೆ ಆರು ತಿಂಗಳಲ್ಲಿ ಹೆಜಮಾಡಿ ಟೋಲ್ ಗೇಟ್ ಆರಂಭಗೊಂಡರೂ ಸುರತ್ಕಲ್ ಟೋಲ್ ಕೇಂದ್ರವನ್ನು ಮುಚ್ಚದೆ ಜನರಿಗೆ ವಂಚಿಸಲಾಗಿದೆ. ಆನಂತರ ಪ್ರತೀ ಬಾರಿ ತಾತ್ಕಾಲಿಕ ನೆಪದಲ್ಲಿ ಟೋಲ್ ಕೇಂದ್ರ ಗುತ್ತಿಗೆ ನವೀಕರಿಸುತ್ತಾ ಬರಲಾಗಿದೆ. ಇದರಲ್ಲಿ ದಿನವೊಂದಕ್ಕೆ ಹೆದ್ದಾರಿ ಪ್ರಾಧಿಕಾರಕ್ಕೆ 12 ಲಕ್ಷ ರೂ. ಸಂದಾಯ ಆಗುತ್ತದೆ. ಆದರೆ ಅಲ್ಲಿ ಅದಕ್ಕಿಂತ ದುಪ್ಪಟ್ಟು ಕಲೆಕ್ಷನ್ ಆಗುತ್ತದೆ. ಇದರಲ್ಲಿ ಸಂಸದ ನಳಿನ್ ಮತ್ತು ಸ್ಥಳೀಯ ಶಾಸಕರಿಗೆ ಇಂತಿಷ್ಟು ಪಾಲು ಸಂದಾಯ ಆಗುತ್ತದೆ ಅನ್ನುವ ಕಾರಣಕ್ಕೆ ಮುಂದುವರಿಸಲಾಗಿದೆ.
ಸಂಪೂರ್ಣ ಅಕ್ರಮವಾಗಿರುವ ಟೋಲ್ ಗೇಟನ್ನು ಮುಚ್ಚಿಸುವ ಇಚ್ಚಾಶಕ್ತಿ ಸಂಸದರಿಗೆ ಇಲ್ಲ. 2018ರಲ್ಲಿ ರಾಜ್ಯದಲ್ಲಿ ಮೈತ್ರಿ ಸರಕಾರ ಇದ್ದಾಗ ಟೋಲ್ ಗೇಟ್ ವಿರೋಧಿ ಸಮಿತಿ ಹನ್ನೊಂದು ದಿನ ಧರಣಿ ನಡೆಸಿತ್ತು. ಸರಣಿ ಪ್ರತಿಭಟನೆಯ ಬಳಿಕ ಹೆದ್ದಾರಿ ಪ್ರಾಧಿಕಾರದವರು ಸುರತ್ಕಲ್ ಟೋಲ್ ಕೇಂದ್ರವನ್ನು ರದ್ದುಪಡಿಸಿ, ಹೆಜಮಾಡಿ ಕೇಂದ್ರದೊಂದಿಗೆ ವಿಲೀನಗೊಳಿಸಲು ಒಪ್ಪಿದ್ದರು. ಆದರೆ ಸಂಸದ, ಶಾಸಕರು ಸೇರಿದಂತೆ ಬೇರೆ ಬೇರೆ ಹಿತಾಸಕ್ತಿಗಳ ಕಾರಣ ವಿಲೀನ ನಿರ್ಧಾರ ನಾಲ್ಕು ವರ್ಷಗಳಿಂದ ಜಾರಿಗೆ ಬರದೆ ಬಾಕಿ ಉಳಿದಿದೆ. 2019ರಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಆದಬಳಿಕ ಖಾಸಗಿ ಬಸ್ ಗಳು, ಸ್ಥಳೀಯ ವಾಹನಗಳ ಮೇಲೂ ಬರೆ ಹಾಕಲಾಗಿತ್ತು. ಖಾಸಗಿ ಬಸ್ಸಿನವರು ಅದನ್ನು ಪ್ರಯಾಣಿಕರ ಮೇಲೆ ದಾಟಿಸಿ ಜನರ ಮೇಲೆ ಹೊರೆ ಹೊರಿಸಿದ್ದಾರೆ. ಆದರೆ, ಇದನ್ನು ಪ್ರಶ್ನೆ ಮಾಡುವ ತಾಕತ್ತು ಸಂಸದ, ಶಾಸಕರಿಗೆ ಇಲ್ಲ. ಜನರನ್ನು ಈ ರೀತಿ ಸುಲಿಗೆ ಮಾಡುವ ವಂಚನೆಗೆ ಶಾಸಕ ಭರತ್ ಶೆಟ್ಟಿ ಮತ್ತು ಸಂಸದ ನಳಿನ್ ಕುಮಾರ್ ನೇರ ಹೊಣೆ.
ಈ ಬಾರಿ ಮೂರು ತಿಂಗಳ ಗುತ್ತಿಗೆ ಅವಧಿ ಫೆಬ್ರವರಿಗೆ ಮುಗಿಯಲಿದ್ದು, ಅಲ್ಲಿಗೇ ಕೊನೆಗೊಳಿಸಬೇಕು. ಅದಕ್ಕಾಗಿ ಜನವರಿ 10ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಕ್ಕೆ ಬರಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಜೊತೆ ಹೆದ್ದಾರಿ ಅಧಿಕಾರಿಗಳ ಸಭೆಯನ್ನು ಸಂಸದರು ನಡೆಸಿ, ಸುರತ್ಕಲ್ ಟೋಲ್ ಕೇಂದ್ರವನ್ನು ರದ್ದುಪಡಿಸಬೇಕು. ಇಲ್ಲದೇ ಇದ್ದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಮಂಗಳೂರಿನಲ್ಲಿ ಕಪ್ಪು ಬಾವುಟ ಪ್ರತಿಭಟನೆ ಎದುರಿಸಬೇಕು ಎಂದು ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.
2019ರಲ್ಲಿ ನಿತಿನ್ ಗಡ್ಕರಿ ಬಳಿಗೆ ನಿಯೋಗ ಒಯ್ದಿದ್ದ ಸಂಸದ ನಳಿನ್ ಕುಮಾರ್ ಸುರತ್ಕಲ್ ಟೋಲ್ ಕೇಂದ್ರವನ್ನು ರದ್ದುಪಡಿಸುವ ಬಗ್ಗೆ ಮಾತುಕತೆ ನಡೆಸಿದ್ದರು. ಆನಂತರ ಹೆದ್ದಾರಿ ಪ್ರಾಧಿಕಾರದ ಜೊತೆ ಸಭೆ ನಡೆಸಿ, ಈ ಬಗ್ಗೆ ನಿರ್ಧರಿಸುವುದಾಗಿ ನಿತಿನ್ ಗಡ್ಕರಿ ಹೇಳಿದ್ದಾಗಿ ನಳಿನ್ ಮಾಧ್ಯಮ ಹೇಳಿಕೆ ನೀಡಿದ್ದರು. ಆದರೆ ಈ ಭರವಸೆ ಕೊಟ್ಟು ಎರಡು ವರ್ಷ ಕಳೆದರೂ ಗಡ್ಕರಿಯ ಸಭೆಯೂ ನಡೆದಿಲ್ಲ. ಸಂಸದರು ತಮ್ಮ ಮಾತನ್ನೂ ಉಳಿಸಿಕೊಂಡಿಲ್ಲ. ಹೆದ್ದಾರಿ ಹಾಳಾಗಿ ಹೋದರೂ ಇವರ ಸುಂಕ ವಸೂಲಿ ನಿಂತಿಲ್ಲ. ಹೆದ್ದಾರಿ ನಿರ್ವಹಣೆಗೆಂದು ಕಂಪನಿಯೊಂದಕ್ಕೆ ವರ್ಷಕ್ಕೆ 3.5 ಕೋಟಿಯ ಗುತ್ತಿಗೆ ನೀಡಲಾಗಿದೆ. ಆದರೆ ಆ ಕಂಪನಿ ನಿರ್ವಹಣೆ ಕಾಮಗಾರಿ ನಡೆಸಿಯೇ ಇಲ್ಲ. ಇದರಲ್ಲೂ ಸಂಸದ, ಶಾಸಕರಿಗೆ ಪಾಲು ಎಷ್ಟು ಸಿಗುತ್ತದೆ, ಹೆದ್ದಾರಿ ಅಧಿಕಾರಿಗಳು ಎಷ್ಟು ಪಾಲು ಪಡೆಯುತ್ತಿದ್ದಾರೋ ಅನ್ನುವ ಅನುಮಾನಗಳಿವೆ. ಇಂಥ ಗೋಲ್ಮಾಲ್ ಲೂಟಿ ಗ್ಯಾಂಗ್ ಅಲ್ಲಿದೆ ಎಂದು ಮುನೀರ್ ದೂರಿದರು.
ಸುದ್ದಿಗೋಷ್ಠಿಯಲ್ಲಿ ಪುರುಷೋತ್ತಮ ಚಿತ್ರಾಪುರ, ರಾಘವೇಂದ್ರ ರಾವ್, ದಿನೇಶ್ ಹೆಗ್ಡೆ ಉಳೆಪಾಡಿ, ದಯಾನಂದ ಶೆಟ್ಟಿ, ಬಿ.ಕೆ.ಇಮ್ತಿಯಾಜ್, ದಿನೇಶ್ ಕುಂಪಲ, ರಾಜೇಶ್ ಪೂಜಾರಿ ಕುಳಾಯಿ, ರಾಜೇಶ್ ಶೆಟ್ಟಿ ಪಡ್ರೆ, ಜೀಷನ್ ಆಲಿ, ಹರೀಶ್ ಪೇಜಾವರ, ಅಜ್ಮಲ್ ಕಾನ ಉಪಸ್ಥಿತರಿದ್ದರು.
Mangalore Nalin Kumar Kateel and MLA Bharath Shetty both involved in Surathkal toll gate Mafia alleges Muneer Katipalla in a press neet held in today.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm