ವಿಟ್ಲ ಪಟ್ಟಣ ಪಂಚಾಯತ್ ; ಅಧಿಕಾರ ಉಳಿಸಿಕೊಂಡ ಬಿಜೆಪಿ, ಕಾಂಗ್ರೆಸ್ ಸ್ಥಾನವನ್ನು ಕಿತ್ತುಕೊಂಡ ಎಸ್ಡಿಪಿಐ ! 

30-12-21 03:02 pm       Mangalore Correspondent   ಕರಾವಳಿ

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಪಡೆದಿದೆ. ಕಳೆದ ಬಾರಿಯಂತೆ ಒಟ್ಟು 18 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದು ಬಹುಮತ ಗಳಿಸಿದೆ. 

ಬಂಟ್ವಾಳ, ಡಿ.30 : ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಪಡೆದಿದೆ. ಕಳೆದ ಬಾರಿಯಂತೆ ಒಟ್ಟು 18 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದು ಬಹುಮತ ಗಳಿಸಿದೆ. 

ಕಳೆದ ಬಾರಿ ಆರು ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಈ ಸಲ ಐದು ಸ್ಥಾನ ಗಳಿಸಿದೆ. ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಒಂದು ಸ್ಥಾನವನ್ನು ಎಸ್ಡಿಪಿಐ ಗೆದ್ದುಕೊಂಡಿದೆ. ವಿಟ್ಲ ಭಾಗದಲ್ಲಿ ಮೊದಲ ಬಾರಿಗೆ ಎಸ್ಡಿಪಿಐ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಗೆಲುವು ದಾಖಲಿಸಿದೆ. 13 ನೇ ವಾರ್ಡ್ ಒಕ್ಕೆತ್ತೂರಿನಲ್ಲಿ ಎಸ್ಡಿಪಿಐ ಅಭ್ಯರ್ಥಿ ಶಾಕೀರಾ ಗೆಲುವು ಪಡೆದಿದ್ದಾರೆ. ಅಭ್ಯರ್ಥಿಗಳು ಪಡೆದ ಮತ ಗಳಿಕೆ ವಿವರ  ಕೆಳಗಿನಂತಿದೆ. 

1ನೇ ವಾರ್ಡ್‌ನಲ್ಲಿ 828 ಮತ ಚಲಾವಣೆಯಾಗಿದ್ದು, ಕಾಂಗ್ರೆಸಿನ ವಿ.ಕೆ. ಮಹಮ್ಮದ್ ಅಶ್ರಫ್ (425) ಜಯ ಗಳಿಸಿದರೆ, ಬಿಜೆಪಿಯ ಕೃಷ್ಣಪ್ಪ ಗೌಡ (388) ಸೋಲು ಕಂಡಿದ್ದಾರೆ. 15 ಮತ ನೋಟಕ್ಕೆ ಬಿದ್ದಿದೆ. 2ನೇ ವಾರ್ಡ್ ನಲ್ಲಿ 608 ಮತ ಚಲಾವಣೆಯಾಗಿದ್ದು, ಬಿಜೆಪಿಯ ಸಂಗೀತ (316) ಜಯ ಗಳಿಸಿದ್ದಾರೆ. ಕಾಂಗ್ರೆಸ್ ಕಮಲಾಕ್ಷಿ 192, ಎಸ್ಡಿಪಿಐ ಆಯಿಷ ಎನ್. 92 ಮತ ಪಡೆದಿದ್ದಾರೆ. ನೋಟಾ 8 ಮತ ಚಲಾವಣೆಯಾಗಿದೆ. 

3ನೇ ವಾರ್ಡ್ ನಲ್ಲಿ 637 ಮತ ಚಲಾವಣೆಯಾಗಿದ್ದು, ಬಿಜೆಪಿ ಸಿ.ಎಚ್. ಜಯಂತ (322) ಜಯ ಗಳಿಸಿದ್ದಾರೆ. ಕಾಂಗ್ರೆಸಿನ ಶ್ರೀನಿವಾಸ ಶೆಟ್ಟಿ (310) ಸೋಲು ಕಂಡಿದ್ದಾರೆ. ನೋಟ 5 ಮತ ಚಲಾವಣೆಯಾಗಿದೆ. 4ನೇ ವಾರ್ಡ್ ನಲ್ಲಿ (578 ಮತಚಲಾವಣೆ), ಬಿಜೆಪಿಯ ರಕ್ಷಿತ 301 ಮತ ಗಳಿಸಿ ಜಯ. ಕಾಂಗ್ರೆಸ್ಲಿನ ಆಯಿಷಾ 269 ಮತ ಪಡೆದು ಸೋಲು ಕಂಡಿದ್ದಾರೆ. ನೋಟಾಗೆ 8 ಮತ ಚಲಾವಣೆಯಾಗಿದೆ. 

5ನೇ ವಾರ್ಡ್ ನಲ್ಲಿ 578 ಮತ ಚಲಾವಣೆಯಾಗಿದ್ದು, ಬಿಜೆಪಿ ವಸಂತ ಕೆ. (314) ಜಯ ಗಳಿಸಿದ್ದಾರೆ. ಕಾಂಗ್ರೆಸ್ ವಸಂತಿ (251) ಸೋಲುಂಡಿದ್ದಾರೆ. ನೋಟಾ 13 ಮತ ಚಲಾವಣೆಯಾಗಿದೆ. 6ನೇ ವಾರ್ಡ್ ನಲ್ಲಿ 507 ಮತ ಚಲಾವಣೆಯಾಗಿದ್ದು, ಬಿಜೆಪಿ ವಿಜಯಲಕ್ಷ್ಮಿ (274) ಜಯ ಗಳಿಸಿದ್ದಾರೆ. ಕಾಂಗ್ರೆಸ್ ಲೀಲಾವತಿ 226 ಮತ ಪಡೆದು ಸೋಲು ಕಂಡಿದ್ದಾರೆ. ನೋಟಾ 7 ಮತ ಚಲಾವಣೆಯಾಗಿದೆ. 

7ನೇ ವಾರ್ಡ್ ನಲ್ಲಿ 659 ಮತ ಚಲಾವಣೆ. ಬಿಜೆಪಿ ರವಿಪ್ರಕಾಶ್ ಎಸ್. (439) ವಿಜಯಶಾಲಿ.  ಕಾಂಗ್ರೆಸಿನ ಶಿವಪ್ರಸಾದ್ ವಿ. (214) ಸೋಲು ಕಂಡಿದ್ದಾರೆ. ನೋಟಾ 6 ಮತ ಗಳಿಸಿದೆ. 8ನೇ ವಾರ್ಡ್ ನಲ್ಲಿ 533 ಮತ ಚಲಾವಣೆ. ಬಿಜೆಪಿಯ ಸುನೀತಾ (190) ಜಯ ಗಳಿಸಿದ್ದಾರೆ. ಕಾಂಗ್ರೆಸಿನ ಸುನೀತಾ ಕೊಟ್ಯಾನ್ 161, ಎಸ್ಡಿಪಿಐ ಅಭ್ಯರ್ಥಿ ರಝೀಯಾ 177 ಮತ ಪಡೆದಿದ್ದಾರೆ. ನೋಟ 5 ಮತ ಪಡೆದಿದ್ದಾರೆ. 

9ನೇ ವಾರ್ಡ್ ನಲ್ಲಿ 666 ಮತ ಚಲಾವಣೆ. ಬಿಜೆಪಿ ಎನ್. ಕೃಷ್ಣ (395) ವಿಜಯಿಯಾಗಿದ್ದರೆ, ಕಾಂಗ್ರೆಸಿನ ಶಿವಪ್ರಸಾದ್ 266 ಮತ ಗಳಿಸಿ ಸೋಲು ಕಂಡಿದ್ದಾರೆ. ನೋಟಾ 5 ಮತ ಚಲಾವಣೆಯಾಗಿದೆ. 10ನೇ ವಾರ್ಡ್ ನಲ್ಲಿ 594 ಮತ ಚಲಾವಣೆಯಾಗಿದ್ದು, ಕಾಂಗ್ರೆಸಿನ ಪದ್ಮಿನಿ 377 ಮತಗಳಿಸಿ ವಿಜಯ. ಬಿಜೆಪಿಯ ಸುಮತಿ (214) ಸೋಲು ಕಂಡಿದ್ದಾರೆ. ನೋಟಾ 3 ಮತ ಚಲಾವಣೆಯಾಗಿದೆ. 

11ನೇ ವಾರ್ಡ್ ನಲ್ಲಿ 526 ಮತ ಚಲಾವಣೆ. ಬಿಜೆಪಿ ಅರುಣ್ ಎಂ (288) ಜಯ ಗಳಿಸಿದರೆ, ಕಾಂಗ್ರೆಸಿನ ರಮಾನಾಥ ವಿ. 213, ಪಕ್ಷೇತರ ಜಾನ್ ಡಿಸೋಜ 15 ಮತ ಪಡೆದು ಸೋಲು ಕಂಡಿದ್ದಾರೆ. ನೋಟಾ 10 ಚಲಾವಣೆಯಾಗಿದೆ. 

12ನೇ ವಾರ್ಡ್ ನಲ್ಲಿ 497 ಮತ ಚಲಾವಣೆ. ಬಿಜೆಪಿಯ ಹರೀಶ್ ಸಿ.ಎಚ್. (332) ವಿಜಯಶಾಲಿ. ಕಾಂಗ್ರೆಸಿನ ಎಂ. ಕೆ. ಮೂಸಾ 161 ಮತ ಗಳಿಸಿ ಸೋಲು. ನೋಟಾ 4 ಮತ ಬಿದ್ದಿದೆ. 

13ನೇ ವಾರ್ಡ್ ನಲ್ಲಿ 608 ಮತಚಲಾವಣೆ. ಎಸ್.ಡಿ.ಪಿ.ಐ. ಶಾಕೀರ 279 ಮತಗಳಿಸಿದ್ದು ಮೊದಲ ಬಾರಿಗೆ ಕಾಂಗ್ರೆಸ್ ಬುಟ್ಟಿಗೆ ಕೈಹಾಕಿದೆ. ಕಾಂಗ್ರೆಸಿನ ಅಸ್ಮ ಯು.ಕೆ. 204, ಬಿಜೆಪಿ ಪುಷ್ಪಾ 119 ಮತಗಳಿಸಿ ಸೋಲು ಕಂಡಿದ್ದಾರೆ. ನೋಟಾಗೆ 6 ಮತ ಬಿದ್ದಿದೆ.14ನೇ ವಾರ್ಡ್ ನಲ್ಲಿ 512 ಮತ ಚಲಾವಣೆ. ಬಿಜೆಪಿ ಅಶೋಕ್ ಕುಮಾರ್ ಶೆಟ್ಟಿ 242 ಮತಗಳಿಸಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಮನೋಹರ ಲ್ಯಾನ್ಸಿ ಡಿ ಸೋಜ 144, ಪಕ್ಷೇತರ ಮೋಹನ್ ಸೇರಾಜೆ 125 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 1ಮತ ಗಳಿಸಿದ್ದಾರೆ. 

15ನೇ ವಾರ್ಡ್ ನಲ್ಲಿ 703 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ ಲತಾವೇಣಿ 381ಮತ ಗಳಿಸಿ ಜಯಗಳಿಸಿದ್ದಾರೆ. ಬಿಜೆಪಿ ಸಂಧ್ಯಾಗಣೇಶ್ 319 ಪಡೆದು ಸೋಲುಕಂಡಿದ್ದಾರೆ. ನೋಟಾ 3 ಮತ ಚಲಾವಣೆಯಾಗಿದೆ. 16ನೇ ವಾರ್ಡ್ ನಲ್ಲಿ 480 ಮತ ಚಲಾವಣೆ. ಕಾಂಗ್ರೆಸಿನ ಡೀಕಯ್ಯ (247) ಜಯ ಗಳಿಸಿದರೆ, ಬಿಜೆಪಿಯ ಕೃಷ್ಣಪ್ಪ (220) ಮತ ಪಡೆದ ಸೋಲು ಕಂಡಿದ್ದಾರೆ. ನೋಟಾ 13 ಮತಚಲಾವಣೆಯಾಗಿದೆ. 

17ನೇ ವಾರ್ಡ್ ನಲ್ಲಿ 749 ಮತಚಲಾವಣೆ. ಬಿಜೆಪಿ ಕರುಣಾಕರ (415) ಜಯಗಳಿಸಿದ್ದಾರೆ. ಕಾಂಗ್ರೆಸಿನ ಶ್ರೀಚರಣ್ (320) ಸೋಲು ಕಂಡಿದ್ದಾರೆ. ನೋಟ 14ಮತ ಚಲಾವಣೆಯಾಗಿದೆ. 18ನೇ ವಾರ್ಡ್ ನಲ್ಲಿ 590 ಮತಚಲಾವಣೆಯಾಗಿದ್ದು ಕಾಂಗ್ರೆಸ್ ಅಬ್ದುಲ್ ರಹಿಮನ್ 352 ಜಯಗಳಿಸಿದ್ದಾರೆ. ಬಿಜೆಪಿ ಕೃಷ್ಣಪ್ಪ ಮೂಲ್ಯ 60,ಎಸ್.ಡಿ.ಪಿ.ಐ. ಸಯ್ಯದ್ ಇಳ್ಯಾಸ್ 173 ಮತಪಡೆದು ಸೋಲು ಕಂಡಿದ್ದಾರೆ. ನೋಟಾ 5 ಮತ ಗಳಿಸಿದೆ.

Urban local body election BJP wins SDPI bags congress seat.