ಬ್ರೇಕಿಂಗ್ ನ್ಯೂಸ್
01-01-22 04:03 pm HK Desk news ಕರಾವಳಿ
ಉಡುಪಿ, ಜ.1 : ಕೊರಗ ಸಮುದಾಯದ ಮೆಹಂದಿ ಪಾರ್ಟಿ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿ, ದೈಹಿಕ ದೌರ್ಜನ್ಯ ನಡೆಸಿರುವ ಘಟನೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗ ಉಡುಪಿ ಜಿಲ್ಲಾಡಳಿತದಿಂದ ವರದಿ ಕೇಳಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರಿಂದ ಘಟನೆ ಬಗ್ಗೆ ಮಾಹಿತಿ ಕೇಳಿ ಆಯೋಗ ಸೂಚನೆ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ಪೊಲೀಸರು ಅಮಾಯಕ ಕೊರಗ ಸಮುದಾಯದ ಮೇಲೆ ಹಲ್ಲೆ ನಡೆಸಿರುವುದರಿಂದ ಜಿಲ್ಲೆಯ ಜನತೆಗೆ ಪೊಲೀಸರ ಮೇಲೆ ನಂಬಿಕೆ ಕುಸಿಯುವಂತಾಗಿದೆ. ಜನರನ್ನು ರಕ್ಷಣೆ ಮಾಡಬೇಕಾದವರು ಈ ರೀತಿ ವರ್ತಿಸಿದ್ದು ಸಮಾಜಕ್ಕೆ ತದ್ವಿರುದ್ಧ ಸಂದೇಶ ಹೋಗುವಂತಾಗಿದೆ. ಈ ಬಗ್ಗೆ ಎಸ್ಪಿ ಬಳಿ ವರದಿ ಕೇಳಿದ್ದೇವೆ. ಘಟನೆ ಬಗ್ಗೆ ಪರಾಮರ್ಶೆ ನಡೆಸಿ, ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಡಿ.27ರಂದು ರಾತ್ರಿ ಕೋಟತ್ತಟ್ಟು ಗ್ರಾಮದ ಕೊರಗ ಸಮುದಾಯದ ಮನೆಯೊಂದರಲ್ಲಿ ಮೆಹಂದಿ ಕಾರ್ಯಕ್ರಮಕ್ಕೆ ಡಿಜೆ ಹಾಕಿದ್ದಾರೆಂದು ನೀಡಿದ್ದ ಸಾರ್ವಜನಿಕ ದೂರು ಆಧರಿಸಿ ತೆರಳಿದ್ದ ಕೋಟ ಠಾಣೆ ಪೊಲೀಸರು ಮದುಮಗ ಸೇರಿದಂತೆ ಕೊರಗ ಕಾಲನಿಯ ನಿವಾಸಿಗಳ ಮೇಲೆ ಲಾಠಿಚಾರ್ಜ್ ನಡೆಸಿದ್ದರು. ಈ ವೇಳೆ, ಮಹಿಳೆಯರು, ವೃದ್ಧರ ಮೇಲೂ ಲಾಠಿ ಏಟು ಬಿದ್ದಿತ್ತು ಎಂದು ಆರೋಪಿಸಲಾಗಿತ್ತು.
ಘಟನೆ ಭಾರೀ ವಿವಾದ ಪಡೆಯುತ್ತಲೇ ಎಸ್ಪಿ ವಿಷ್ಣುವರ್ಧನ್ ಸ್ಥಳಕ್ಕೆ ತೆರಳಿ, ತನಿಖೆ ನಡೆಸಿದ್ದರು. ಎಸ್ಪಿ ನೀಡಿದ ವರದಿ ಆಧರಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಕೋಟ ಠಾಣೆ ಎಸ್ಐ ಸಂತೋಷ್ ಅವರನ್ನು ಅಮಾನತು ಮಾಡಿದ್ದರು. ಘಟನೆ ರಾಜ್ಯದ ಗಮನ ಸೆಳೆದಿದ್ದು, ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಊರಲ್ಲೇ ಈ ರೀತಿ ನಡೆದಿದ್ದನ್ನು ಟೀಕಿಸಿದ್ದರು.
ನಂದಿಗುಡ್ಡೆ ಕೊರಗಜ್ಜನ ಕ್ಷೇತ್ರ ಅಪವಿತ್ರ ಯತ್ನ ; ಭಾರೀ ಆಕ್ರೋಶ
ಕೊಂಡಾಣ ದೈವಸ್ಥಾನದ ಕಾಣಿಕೆ ಹುಂಡಿಯಲ್ಲೂ ಅಪಮಾನ ಕೃತ್ಯ ! ಕಾಂಡೋಮ್ ಪತ್ತೆ
ಕೊರಗಜ್ಜನ ಕಾಣಿಕೆ ಹುಂಡಿಗೆ ಕಾಂಡೋಮ್, ಸಿಎಂ ಬಿಎಸ್ವೈ ಭಾವಚಿತ್ರಕ್ಕೆ ಶಿಲುಬೆ ಹಾರ !! ಉಳ್ಳಾಲದಲ್ಲಿ ಕಿಡಿಗೇಡಿ ಕೃತ್ಯ
The lathi-charge and subsequent physical harassment in police station, done by Kota police on the Koraga community of Kotathattu gram panchayat limits, has drawn the attention of National Commission for Women (NCW). The commission has sought explanation from SP Vishnuvardhan of the district on the issue
29-04-25 04:28 pm
HK News Desk
Praveen Nettaru, Mohsin Shukur, Karwar Police...
29-04-25 01:04 pm
Siddaramaiah Angry, Belagavi, Police: ಸಿಎಂ ಭಾ...
28-04-25 10:15 pm
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 05:45 pm
Mangalore Correspondent
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
29-04-25 02:53 pm
Mangalore Correspondent
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm