ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳ ; ಓಮಿಕ್ರಾನ್ ಪ್ರಕರಣಗಳೇ ಜಾಸ್ತಿಯಂತೆ !

04-01-22 11:00 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಪೈಕಿ ಓಮಿಕ್ರಾನ್ ಪ್ರಕರಣಗಳೇ ಹೆಚ್ಚು ಅನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆಯ ಮೂಲಗಳು ದೃಢಪಡಿಸಿವೆ.

ಮಂಗಳೂರು, ಜ.4 : ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಪೈಕಿ ಓಮಿಕ್ರಾನ್ ಪ್ರಕರಣಗಳೇ ಹೆಚ್ಚು ಅನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆಯ ಮೂಲಗಳು ದೃಢಪಡಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 75 ಮಂದಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ದಿನಕ್ಕೆ ಸರಾಸರಿ ಆರು ಸಾವಿರ ಮಂದಿಯ ಟೆಸ್ಟಿಂಗ್ ಆಗುತ್ತಿದೆ. ಒಂದು ದಿನದ ಅಂತರದಲ್ಲಿ ಆರೂವರೆ ಸಾವಿರ ಮಂದಿಗೆ ಹೆಚ್ಚುವರಿಯಾಗಿ ಟೆಸ್ಟಿಂಗ್ ಆಗಿದ್ದು, ಈ ಪೈಕಿ 75 ಮಂದಿ ಪಾಸಿಟಿವ್ ಆಗಿದ್ದಾರೆ.

ಸೋಮವಾರದ ವರದಿಯಲ್ಲಿ 52 ಮಂದಿ ಪಾಸಿಟಿವ್ ಆಗಿದ್ದರು. ಸರಾಸರಿ 5 ಸಾವಿರ ಮಂದಿಯ ಟೆಸ್ಟಿಂಗ್ ಆಗಿತ್ತು. ಪಾಸಿಟಿವ್ ಕಂಡುಬಂದ ಶಾಲೆ, ಹಾಸ್ಟೆಲ್ ಗಳನ್ನು ಗುರಿಯಾಗಿಸಿ ಅಲ್ಲಿರುವ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಆದರೆ ಈಗ ಪಾಸಿಟಿವ್ ಆಗುತ್ತಿರುವ ಹೆಚ್ಚಿನ ಮಂದಿ ಓಮಿಕ್ರಾನ್ ಸೋಂಕಿತರೇ ಆಗಿದ್ದಾರೆ ಅನ್ನುವ ಮಾಹಿತಿಗಳಿವೆ. ಈ ಬಗ್ಗೆ ಜಿಲ್ಲಾಡಳಿತದಿಂದ ಪ್ರತಿ ದಿನವೂ ಪಾಸಿಟಿವ್ ಆದವರನ್ನು ಜಿನೋಮ್ ಸೀಕ್ವೆನ್ಸ್ ಟೆಸ್ಟ್ ಮಾಡಲಾಗುತ್ತಿದೆ. ಇದರ ವರದಿಯನ್ನು ಜಿಲ್ಲಾಡಳಿತ ಬಹಿರಂಗ ಪಡಿಸುತ್ತಿಲ್ಲ. ಹೆಚ್ಚಿನವರು ಓಮಿಕ್ರಾನ್ ಪಾಸಿಟಿವ್ ಆಗುತ್ತಿದ್ದಾರೆ ಅನ್ನುವ ಮಾಹಿತಿ ಆರೋಗ್ಯ ಇಲಾಖೆಯಿಂದ ತಿಳಿದುಬಂದಿದೆ. ಶೀತ, ನೆಗಡಿ ಪ್ರಕರಣಗಳಲ್ಲಿ ಹೆಚ್ಚಿನ ಮಂದಿ ಪರೀಕ್ಷೆಗೆ ಒಳಪಡುತ್ತಿಲ್ಲ. ಇಂಥವರು ಕೂಡ ಕೊರೊನಾ ಪಾಸಿಟಿವ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ರಾಜ್ಯದಲ್ಲಿ ಮಂಗಳವಾರದ ವರದಿಯಲ್ಲಿ 2400ಕ್ಕೂ ಹೆಚ್ಚು ಮಂದಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ಹೀಗಾಗಿ ಸೋಂಕು ಹರಡುವುದನ್ನು ತಪ್ಪಿಸಲು ಲಾಕ್ಡೌನ್ ಮಾದರಿಯ ನಿರ್ಬಂಧ ಹೇರಲು ರಾಜ್ಯ ಸರಕಾರ ಮುಂದಾಗಿದೆ. ಓಮಿಕ್ರಾನ್ ಸೋಂಕು ವೇಗವಾಗಿ ಹರಡುವುದರಿಂದ ಕೊರೊನಾ ಮತ್ತೆ ಹೆಚ್ಚುತ್ತಿದೆ ಎನ್ನಲಾಗುತ್ತಿದೆ.

Spike in Covid cases in Mangalore day by day most tested with Omicron says Helath department officials.