ಬ್ರೇಕಿಂಗ್ ನ್ಯೂಸ್
14-01-22 08:22 pm Mangalore Correspondent ಕರಾವಳಿ
Photo credits : Headline Karnataka
ಮಂಗಳೂರು, ಜ.14 : ಪ್ರತಿ ವರ್ಷ ಹಿರಿಯರ ಶ್ರಾದ್ಧ ಕಾರ್ಯಕ್ರಮ ಮಾಡಿದಂತೆ ರಾಜ್ಯ ಸರಕಾರ ಜನರ ಮೇಲೆ ಕರ್ಫ್ಯೂ ಹೇರುತ್ತಿದೆ. ಹೀಗೆ ಅವೈಜ್ಞಾನಿಕ ಕರ್ಫ್ಯೂ, ಲಾಕ್ಡೌನ್ ಹೇರಿದ್ದರಿಂದ ಎಷ್ಟು ಜನರು ಬೀದಿಗೆ ಬಿದ್ದಿದ್ದಾರೆ, ಎಷ್ಟು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಎಷ್ಟು ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಬಗ್ಗೆ ನಿಮ್ಮಲ್ಲಿ ಅಂಕಿ ಅಂಶ ಇದೆಯೇ.. ಈ ಬಗ್ಗೆ ಕೇಂದ್ರ ಅಥವಾ ರಾಜ್ಯ ಸರಕಾರಗಳು ಅಧ್ಯಯನ ನಡೆಸಿದ್ದಾವೆಯೇ.. ಜನರ ಕಷ್ಟ ಆಲಿಸದ ಶಾಸಕರು, ಸಂಸದರಿಗೆ ಜನ ಯಾಕೆ ಓಟು ಹಾಕಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗ್ಡೆ ಪ್ರಶ್ನೆ ಮಾಡಿದ್ದಾರೆ.
ಕರಾವಳಿ ಟೆಕ್ಸ್ ಟೈಲ್ಸ್, ರೆಡಿಮೇಡ್ಸ್, ಫೂಟ್ ವೇರ್, ಕ್ಷೌರಿಕರು, ಮೊಬೈಲ್ ವ್ಯಾಪಾರಸ್ಥರ ಜಂಟೆ ಎಸೋಸಿಯೇಶನ್ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಎಂ.ಜಿ. ಹೆಗ್ಡೆ ಸರಕಾರಕ್ಕೆ ಪ್ರಶ್ನೆ ಹಾಕಿದ್ದಾರೆ. ಲಾಕ್ಡೌನ್ ಮಾಡಬಾರದು ಅಂತ ನಾವು ಹೇಳುವುದಿಲ್ಲ. ಆದರೆ, ಒಂದು ವರ್ಗವನ್ನು ದೂರವಿಟ್ಟು ಮತ್ತೆಲ್ಲವನ್ನೂ ಬಿಟ್ಟುಕೊಂಡು ನೀವು ಲಾಕ್ಡೌನ್ ಮಾಡಿ ಏನು ಲಾಭವಿದೆ. ಈ ರೀತಿಯ ಅವೈಜ್ಞಾನಿಕ ಲಾಕ್ಡೌನ್ ಮಾಡಿ, ಏನಾದ್ರೂ ಕೊರೊನಾ ಕಟ್ಟಿಹಾಕಲು ಸಾಧ್ಯವಾಗಿದೆಯೇ.. ವಿಜ್ಞಾನಿಗಳು ಹೇಳುವ ಪ್ರಕಾರ, ಕೊರೊನಾ ಸೋಂಕು ಶಾಶ್ವತ ಇರುತ್ತದೆ. ಅಂದಮೇಲೆ, ಜನರ ಮೇಲೆ ಲಾಕ್ಡೌನ್ ಹೇರುವುದನ್ನು ಎಷ್ಟು ಸಮಯ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಪ್ರತಿ ಬಾರಿ ಲಾಕ್ಡೌನ್ ಹೇರುವಾಗಲೂ ತಜ್ಞರು ಹೇಳಿ ಮಾಡಿದ್ದು ಎನ್ನುತ್ತಾರೆ. ಈ ತಜ್ಞರು ಎಂದು ಹೇಳುವ ಮಂದಿ ಯಾರು.. ಲಾಕ್ಡೌನಲ್ಲಿ ಆಸ್ಪತ್ರೆ ಇಟ್ಟುಕೊಂಡು ದೋಚಿದವರು ಕೂಡ ನಿಮ್ಮ ತಜ್ಞರ ಸಮಿತಿಯಲ್ಲಿದ್ದಾರೆ. ಆದರೆ, ಜನರ ಮೇಲೆ ಆರ್ಥಿಕ ಪೆಟ್ಟು ನೀಡುವ ಬಗ್ಗೆ ಸಲಹೆ ನೀಡಲು ಆರ್ಥಿಕ ತಜ್ಞರಿಲ್ಲ. ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ ಎಂದು ಯಾವುದೋ ಜಿಲ್ಲೆಯನ್ನು ಬಂದ್ ಮಾಡುವುದು ಎಷ್ಟು ಸರಿ. ಅಷ್ಟಕ್ಕೂ ಬಂದ್ ಮಾಡುವುದಿದ್ದರೆ ಎಲ್ಲವನ್ನೂ ಮಾಡಿ. ಜೀನಸು, ಹೊಟೇಲ್, ಮಾರುಕಟ್ಟೆ ತೆರೆದಿಟ್ಟು ಬಸ್ ಓಡಿಸಿ ನೀವು ಏನು ಸಾಧನೆ ಮಾಡುತ್ತೀರಿ. ಇದರಿಂದ ಕೊರೊನಾ ಸೋಂಕು ಕಡಿಮೆಯಾಗಿದೆ ಅನ್ನುವ ಭರವಸೆ ಇದೆಯೇ.. ಮದುವೆ, ಬ್ರಹ್ಮಕಲಶಕ್ಕೆ ಸಾವಿರಾರು ಜನರು ಸೇರುತ್ತಾರೆ. ಒಂದು ಬಟ್ಟೆ ಅಂಗಡಿ ತೆರೆದಿಟ್ಟರೆ ಕೊರೊನಾ ಬರುತ್ತೆ ಅಂದರೆ, ಅಲ್ಲಿ ದಿನಕ್ಕೆ ಎಷ್ಟು ಜನರು ಸೇರುತ್ತಾರೆ ಎಂದು ಕೇಳಿದರು.
ಲಾಕ್ಡೌನ್ ರೀತಿಯ ನಿಯಮ ಹೇರುವ ಮೊದಲು ಸಮಾಜದ ಎಲ್ಲ ವಿಭಾಗದ ಪ್ರಮುಖರನ್ನು ಕರೆಸಿ ಮಾತುಕತೆ ನಡೆಸಬೇಕು. ಕ್ಷೌರಿಕರು, ಚಪ್ಪಲಿ, ಬಟ್ಟೆ ಇನ್ನಿತರ ವ್ಯಾಪಾರಸ್ಥರು ಹೀಗೆ ಎಲ್ಲರ ಅಭಿಪ್ರಾಯ, ಕಷ್ಟ ಆಲಿಸಬೇಕು. ಯಾಕಂದ್ರೆ, ಶನಿವಾರ, ಭಾನುವಾರ ಮಾತ್ರ ಇವರಿಗೂ ವ್ಯಾಪಾರ ಇರೋದು. ಆ ದಿನಗಳನ್ನೇ ಬಂದ್ ಮಾಡುವ ಬದಲು ವಾರದಲ್ಲಿ ಒಂದೊಂದು ದಿನ ಎಲ್ಲ ವ್ಯಾಪಾರವೂ ಬಂದ್ ಆಗುವಂತೆ ಮಾಡಿ. ವಾರಾಂತ್ಯದ ಕರ್ಫ್ಯೂ ಇದ್ರೂ ಆನ್ಲೈನ್ ವ್ಯವಹಾರಕ್ಕೆ ಅಡ್ಡಿ ಇಲ್ಲ. ಅವರಲ್ಲಿ ಕೇಳಿದರೆ, ಇತರೇ ದಿನ 300 ಆರ್ಡರ್ ಇದ್ದರೆ, ಕರ್ಫ್ಯೂ ಇರುವ ದಿವಸ ಎಂಟು ಸಾವಿರ ಆರ್ಡರ್ ಇರುವುದಂತೆ. ಹಾಗಾದರೆ, ಅದರಲ್ಲಿ ಕೊರೊನಾ ಬರುವುದಿಲ್ಲವೇ.. ಇದರಿಂದ ಪರೋಕ್ಷವಾಗಿ ಸಾಮಾನ್ಯ ವ್ಯಾಪಾರಿಗಳ ಹೊಟ್ಟೆಗೆ ಹೊಡೆದಂತೆ ಆಗುವುದಿಲ್ಲವೇ..?
ದ.ಕ. ಜಿಲ್ಲೆಯಲ್ಲಿ ಎಂಟು ಶಾಸಕರು, ಸಂಸದರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಇದ್ದಾರೆ. ಜನಪ್ರತಿನಿಧಿಗಳು ಎನಿಸಿಕೊಂಡವರು ಜನರ ಕಷ್ಟ ಆಲಿಸಿದ್ದಾರೆಯೇ.. ಎರಡು ವರ್ಷಗಳಿಂದ ಎಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮನೆಯ ಸ್ಥಿತಿ ಹೇಗಿದೆ ಅನ್ನುವ ಪರಿಜ್ಞಾನ ಇದೆಯೇ.. ನಿಮಗೆಲ್ಲ ಓಟು ಬರುವಾಗ ಮಾತ್ರ ಜನರ ನೆನಪು ಬರುತ್ತದೆ. ಜನರಿಗೆ ಆರ್ಥಿಕತೆಯೇ ನಿಜವಾದ ಇಮ್ಯುನಿಟಿ. ಅದು ಬಿಟ್ಟರೆ ಬೇರೆ ಯಾವ ಇಮ್ಯುನಿಟಿಯೂ ವರ್ಕೌಟ್ ಆಗುವುದಿಲ್ಲ. ಹಣ ಇದ್ದರೆ, ಕೊರೊನಾ ಬಂದರೂ ಚಿಕಿತ್ಸೆ ಪಡೆದು ಸುಧಾರಿಸಿಯೇನು ಎಂಬ ಭರವಸೆ ಇರುತ್ತದೆ. ಅದಿಲ್ಲದಿದ್ದರೆ ಮಾನಸಿಕವಾಗಿ ಕೊರಗಿ ಸಾಯುವ ಸ್ಥಿತಿ. ಎಲ್ಲ ರೋಗಕ್ಕೂ ಮನಸ್ಸೇ ಮೂಲ ಎನ್ನುವಂತೆ, ಸಾಲ ಮಾಡಿ ಉದ್ಯಮ, ವ್ಯಾಪಾರ ಮಾಡಿದವರು ಮಾನಸಿಕವಾಗಿ ಬಳಲುತ್ತಿದ್ದಾರೆ. ಅದಕ್ಕಿಂದ ದೊಡ್ಡ ಕೊರೊನಾ ಇಲ್ಲ ಎಂದು ಹೇಳಿದರು.
ಟೆಕ್ಸ್ ಟೈಲ್ಸ್ ಅಂಗಡಿಯ ಮಾಲಕ ಸಂತೋಷ್ ಕಾಮತ್ ಮಾತನಾಡಿ, ವಾರದ ಕೊನೆಯ ಎರಡು ದಿನ ವ್ಯಾಪಾರ ಇರುವುದು. ಆ ದಿನಗಳೇ ಬಂದ್ ಆದರೆ, ನಾವು ಕೆಲಸದವರಿಗೆ ಸಂಬಳ ಕೊಡಬೇಕು. ಲೋನ್ ಇದ್ದರೆ ಅದನ್ನು ಕಟ್ಟಬೇಕು, ಅಂಗಡಿ ಬಾಡಿಗೆ ಕಟ್ಟಬೇಕು. ಅದ್ಯಾವುದೂ ಕಡಿತ ಆಗುವುದಿಲ್ಲ. ನಮ್ಮಂತೆ ಕಷ್ಟ ಪಟ್ಟವರು ನೂರಾರು ಮಂದಿಯಿದ್ದು, ಅವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳಬೇಕಾ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರವೀಣ್ ವಾಲ್ಕೆ, ಗುರುದತ್ ಪ್ರಭು, ಬ್ಯೂಟಿಷಿಯನ್ ಶಾಪ್ ಸಂಘದ ಸದಸ್ಯರು, ಮೊಬೈಲ್ ವ್ಯಾಪಾರಸ್ಥರು ಉಪಸ್ಥಿತರಿದ್ದರು.
Mangalore Social activist MG Hedge slams government and leaders over Curfew and lock down. Asks government if they know how many have died due to lockdown through financial crises.
02-09-25 11:04 pm
Bangalore Correspondent
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 10:26 pm
Mangalore Correspondent
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm