ಬ್ರೇಕಿಂಗ್ ನ್ಯೂಸ್
16-01-22 11:17 pm Mangalore Correspondent ಕರಾವಳಿ
Photo credits : Headline Karnataka
ಮಂಗಳೂರು, ಜ.16 : ಪ್ರಧಾನಿ ನರೇಂದ್ರ ಮೋದಿ ಆಯುಷ್ಯ ವೃದ್ಧಿಗಾಗಿ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಯಾಗ ಆರಂಭಗೊಂಡಿದೆ. ದೇವಸ್ಥಾನದ ಮುಂಭಾಗದ ಅಮೃತ ವರ್ಷಿಣಿ ಸಭಾಂಗಣದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ವಿಶೇಷ ರೀತಿಯ ಯಾಗ ನಡೆಸಲಾಗಿದೆ.
ಯಾಗ ಕರ್ತೃಗಳಾಗಿ ಸ್ವತಃ ಶಾಸಕ ಹರೀಶ್ ಪೂಂಜಾ ದಂಪತಿ ಕುಳಿತುಕೊಂಡಿದ್ದು, ಸಂಜೆ 4.30ಕ್ಕೆ ಯಾಗ ಪೂರ್ವ ವಿಧಿ ಕರ್ಮಗಳು ಆರಂಭಗೊಂಡಿದೆ. 80 ಜನ ಅರ್ಚಕರು ಏಕಕಂಠದಲ್ಲಿ ರುದ್ರ ಪಾರಾಯಣ ನಡೆಸಿದ್ದಾರೆ. ಪ್ರಧಾನಿ ಮೋದಿ ಹೆಸರಲ್ಲಿ ವಿವಿಧ ವಿಧಿಗಳನ್ನು ನಡೆಸಲಾಗಿದೆ. ಈ ವೇಳೆ, ಒಂದು ಲಕ್ಷ ಮೃತ್ಯುಂಜಯ ಜಪ ಪಾರಾಯಣ ಮಾಡಲಾಗಿದೆ. ಸಂಜೆ 4ರಿಂದ ಆರಂಭಗೊಂಡ ಯಾಗ ಕರ್ಮಾದಿಗಳು ರಾತ್ರಿ 9 ಗಂಟೆ ವರೆಗೆ ನಡೆದಿದ್ದು, ಪೂರ್ಣಾಹುತಿ ನಡೆದಿದೆ. ಭಾನುವಾರದ ಯಾಗ ಕಾರ್ಯದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾಗವಹಿಸಿದ್ದಾರೆ.


ಮೃತ್ಯುಂಜಯ ಯಾಗದ ಪ್ರಧಾನ ಯಜ್ಞಾದಿ ಕರ್ಮಗಳು ಸೋಮವಾರ ಬೆಳಗ್ಗೆ ನಡೆಯಲಿದೆ. ಬೆಳಗ್ಗೆ ಏಳು ಗಂಟೆಯಿಂದ ಚತುರ್ವೇದ ಪಾರಾಯಣ, ಗೋಪೂಜೆ, ಮಹಾಗಣಪತಿ ಹೋಮದ ಬಳಿಕ ಸಪ್ತ ಕುಂಡಗಳಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಯಲಿದೆ. ಏಳು ಕುಂಡಗಳಿಗೆ ಏಳು ಹೆಸರಿಡಲಾಗಿದ್ದು, ಸದ್ಯೋಜಾತ ಕುಂಡ, ವಾಮದೇವ ಕುಂಡ, ಅಘೋರ ಕುಂಡ, ತತ್ಪುರುಷ ಕುಂಡ, ಈಶಾನ ಕುಂಡ, ತ್ರಯಂಬಕ ಕುಂಡ, ಮೃತ್ಯುಂಜಯ ಕುಂಡದಲ್ಲಿ ಯಾಗ ಹೋಮ ನಡೆಯಲಿದೆ.


ಕೆ.ಸಿ.ನಾಗೇಂದ್ರ ಭಾರದ್ವಾಜ್ ಮಾರ್ಗದರ್ಶನದಲ್ಲಿ ಯಾಗಾದಿ ಕಾರ್ಯಗಳು ನಡೆಯಲಿದ್ದು, ಎಲ್ಲವನ್ನೂ ಪ್ರಧಾನಿ ಮೋದಿ ಹೆಸರಲ್ಲಿ ಮಾಡಲಾಗುತ್ತಿದೆ. ಸೋಮವಾರದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಚಿವ ಕೆ.ಎಸ್.ಈಶ್ವರಪ್ಪ, ಸಿಸಿ ಪಾಟೀಲ್, ಶಶಿಕಲಾ ಜೊಲ್ಲೆ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಕೂಡ ಪಾಲ್ಗೊಳ್ಳುವುದು ಖಾತ್ರಿಯಾಗಿತ್ತು. ಅವರಿಗೆ ಕೊರೊನಾ ಆಗಿರುವುದರಿಂದ ಪಾಲ್ಗೊಳ್ಳುತ್ತಿಲ್ಲ ಎಂದು ಬೆಳ್ತಂಗಡಿ ಬಿಜೆಪಿ ಪ್ರಮುಖರು ತಿಳಿಸಿದ್ದಾರೆ.
Special Yaga for increase in life span of Modi held at Dharmasthala temple by Harish Poonja.
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
07-09-26 01:22 pm
HK News Staffer
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
07-09-26 04:09 pm
HK News Staffer
ಹೂ ಕಟಾವಿಗೆ ಹೊರಟಿದ್ದ ಕೂಲಿ ಕಾರ್ಮಿಕರ ದುರಂತ ಅಂತ್ಯ...
07-09-26 03:42 pm
ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬ...
07-09-26 02:06 pm
ಪರವಾನಗಿ ಇಲ್ಲದೆ ಔಷಧಿ ದಾಸ್ತಾನು ; ಬೆಂಗಳೂರಿನ ಅಮೆಜ...
06-09-26 10:28 pm
ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಆರೋಪ ; ಹೈಕೋರ್ಟಿಗೆ...
06-09-26 06:11 pm