ಬ್ರೇಕಿಂಗ್ ನ್ಯೂಸ್
20-01-22 12:23 pm Mangalore Correspondent ಕರಾವಳಿ
Photo credits : Headline Karnataka
ಮಂಗಳೂರು, ಜ.20 : ಹಿರಿಯಡ್ಕ ಯಕ್ಷಾಗನ ಮೇಳದ ಪ್ರಧಾನ ಪಾತ್ರಧಾರಿ, ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹಿರಿಯ ಕಲಾವಿದ ವೇಣೂರು ವಾಮನ ಕುಮಾರ್ (47) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಬುಧವಾರ ರಾತ್ರಿ ಕುಂದಾಪುರದ ಕೊಂಕಿ ಎಂಬಲ್ಲಿ ಹಿರಿಯಡ್ಕ ಮೇಳದ ಯಕ್ಷಗಾನ ಮುಗಿಸಿ, ಬೆಳಗ್ಗೆ 6 ಗಂಟೆ ಸುಮಾರಿಗೆ ಬೈಕಿನಲ್ಲಿ ವೇಣೂರಿನ ಮನೆಗೆ ಹಿಂತಿರುಗುತ್ತಿದ್ದರು. ಮೂಡುಬಿದ್ರೆ ಬಳಿಯ ಗಂಟಾಲ್ಕಟ್ಟೆ ರಸ್ತೆ ತಿರುವಿನಲ್ಲಿ ಬೈಕಿನಲ್ಲಿ ತೆರಳುತ್ತಿದ್ದಾಗ ಓಮ್ನಿ ವ್ಯಾನ್ ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ರಸ್ತೆಗೆ ಬಿದ್ದ ವಾಮನ ಕುಮಾರ್ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಅವರು ಪತ್ನಿ, ಓರ್ವ ಪುತ್ರಿ. ಪುತ್ರ ಹಾಗೂ ಅಪಾರ ಯಕ್ಷಾಭಿಮಾನಿಗಳನ್ನು ಅಗಲಿದ್ದಾರೆ.
ತುಳು, ಕನ್ನಡ ಯಕ್ಷಗಾನಗಳಲ್ಲಿ ಹೆಸರು ಮಾಡಿದ್ದ ವಾಮನ ಕುಮಾರ್, ಸ್ತ್ರೀವೇಷ ಹಾಗೂ ಪುಂಡು ವೇಷಗಳಿಗೆ ಜೀವ ತುಂಬಿದ್ದ ಕಲಾವಿದ. ಸುದೀರ್ಘ 30 ವರ್ಷಗಳಿಂದ ಯಕ್ಷಗಾನ ಕಲಾ ಸೇವೆ ಮಾಡಿರುವ ಅವರು, ಕಳೆದ ಎಂಟು ವರ್ಷಗಳಿಂದ ಹಿರಿಯಡ್ಕ ಮೇಳದಲ್ಲಿ ಪ್ರಧಾನ ಪಾತ್ರಧಾರಿಯಾಗಿದ್ದರು. ಜೊತೆಗೆ ಮೇಳದ ಮ್ಯಾನೇಜರ್ ಆಗಿಯೂ ಕೆಲಸ ನಿರ್ವಹಿಸಿದ್ದರು.
ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಓರಗೆಯ ಸಹಪಾಠಿಗಳ ಜೊತೆ ಯಕ್ಷಗಾನ ಕಲಿತಿದ್ದ ವಾಮನ ಕುಮಾರ್, ಮೊದಲಿಗೆ ಧರ್ಮಸ್ಥಳ ಮೇಳ ಸೇರಿದ್ದರು. ಎರಡು ವರ್ಷ ಅಲ್ಲಿ ತಿರುಗಾಟ ನಡೆಸಿದ ಬಳಿಕ ಕದ್ರಿ, ಮಂಗಳಾದೇವಿ ಮೇಳಗಳ ಉತ್ತುಂಗದ ಕಾಲದಲ್ಲಿ ಅದರ ಜೊತೆ ಸೇರಿದ್ದರು. ಡಿ.ಮನೋಹರ ಕುಮಾರ್ ಜೊತೆ ಗೆಜ್ಜೆಪೂಜೆ, ಇನ್ನಿತರ ತುಳು ಯಕ್ಷಗಾನಗಳಲ್ಲಿ ಪುಂಡು ವೇಷಗಳ ಪಾತ್ರ ಮಾಡಿ ಜನ ಮೆಚ್ಚುಗೆ ಪಡೆದಿದ್ದರು. ಆನಂತರ ಪುತ್ತೂರು ಶ್ರೀಧರ ಭಂಡಾರಿಯವರ ಹವ್ಯಾಸಿ ಮೇಳದಲ್ಲಿ ಹತ್ತು ವರ್ಷ ತಿರುಗಾಟ ನಡೆಸಿ, ಪುರಾಣ ಪಾತ್ರಗಳಲ್ಲಿ ಮಿಂಚಿದ್ದರು. ಕೃಷ್ಣ, ವಿಷ್ಣುವಿನ ಪಾತ್ರಗಳಿಗೆ ಹೇಳಿ ಮಾಡಿಸಿದ ಬಣ್ಣಗಾರಿಕೆ, ವಾಕ್ಪಟುತ್ವ ಅವರಲ್ಲಿತ್ತು. ಬಹುತೇಕ ಎಲ್ಲ ರೀತಿಯ ಪಾತ್ರಗಳನ್ನೂ ನಿರ್ವಹಿಸುತ್ತಿದ್ದ ವಾಮನಕುಮಾರ್ ಯಕ್ಷಗಾನದ ಮಟ್ಟಿಗೆ ಸವ್ಯಸಾಚಿ ಎನ್ನುವ ರೀತಿಯ ಕಲಾವಿದರಾಗಿದ್ದರು.
In a tragic road accident which happened on Thursday January 20 morning at Gantalkatte within the municipal limits here, accomplished Yakshagana artiste lost his life. The deceased is identified as Vaman Kumar (47), a Yakshagana artiste living near Venoor.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm