ಪಿಲಾರು ಶಾಲೆಯ ಬಳಿ ಭಾರೀ ಗಾತ್ರದ ಸರ್ಪಗಳ ಹಾವಳಿ ; ಬೃಹತ್ ಸರ್ಪವನ್ನು ಸೆರೆ ಹಿಡಿದ ಸ್ನೇಕ್ ರಂಜಿತ್ 

21-01-22 11:51 am       Mangalore Correspondent   ಕರಾವಳಿ

ಕೆಲವು ದಿವಸಗಳಿಂದ ಸೋಮೇಶ್ವರ ಗ್ರಾಮದ ಪಿಲಾರಿನಲ್ಲಿ ಭಾರೀ ಗಾತ್ರದ ನಾಗರ ಹಾವುಗಳು ಜನನಿಬಿಡ ಪ್ರದೇಶಗಳಲ್ಲದೆ ಪಿಲಾರು ಶಾಲಾ ಆವರಣದೊಳಗೂ ಸೇರಿದ್ದು ಶಾಲೆಯ ಬಳಿಯಲ್ಲಿದ್ದ ಬೃಹತ್ ನಾಗರಹಾವನ್ನು ಸ್ನೇಕ್ ರಂಜಿತ್ ಅವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. 

Photo credits : Headline Karnataka

ಉಳ್ಳಾಲ, ಜ.21 : ಕೆಲವು ದಿವಸಗಳಿಂದ ಸೋಮೇಶ್ವರ ಗ್ರಾಮದ ಪಿಲಾರಿನಲ್ಲಿ ಭಾರೀ ಗಾತ್ರದ ನಾಗರ ಹಾವುಗಳು ಜನನಿಬಿಡ ಪ್ರದೇಶಗಳಲ್ಲದೆ ಪಿಲಾರು ಶಾಲಾ ಆವರಣದೊಳಗೂ ಸೇರಿದ್ದು ಶಾಲೆಯ ಬಳಿಯಲ್ಲಿದ್ದ ಬೃಹತ್ ನಾಗರಹಾವನ್ನು ಸ್ನೇಕ್ ರಂಜಿತ್ ಅವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. 

ಇತ್ತೀಚೆಗೆ ಪಿಲಾರು ಮಹಾಲಕ್ಷ್ಮೀ ಮಂದಿರದ ಬಳಿಯ ದಿವಂಗತ ಪೊಲೀಸ್ ತ್ಯಾಂಪಣ್ಣ ಶೆಟ್ಟಿ ಅವರ ಜಮೀನಿನ ಅತ್ಯಂತ ಹಳೆಯ ಪೊದೆ ಮತ್ತು ಗುಡ್ಡ ಪ್ರದೇಶವನ್ನ ಜೆಸಿಬಿ ಯಂತ್ರದಿಂದ ಸಮತಟ್ಟುಗೊಳಿಸಲಾಗಿತ್ತು. ನಂತರ ಈ ಪ್ರದೇಶದಲ್ಲಿ ನಿತ್ಯವೂ ಬೃಹದಾಕಾರದ ಸರ್ಪಗಳು ದಿಕ್ಕಿಲ್ಲದೆ ಓಡಾಡುತ್ತಿವೆ. ಕಳೆದ ವಾರ ಪಿಲಾರಿನ ಮಾಜಿ ಯೋಧ ಸದಾನಂದ ಗಟ್ಟಿ(ಬಾಬು ಗಟ್ಟಿ) ಅವರ ಮನೆಗೂ ಬೃಹತ್ ಸರ್ಪ ನುಗ್ಗಿತ್ತು. ಗಟ್ಟಿ ಅವರು ಸರ್ಪವನ್ನ ಹಿಡಿದು ಗೋಣಿ ಚೀಲದಲ್ಲಿ ತುಂಬುತ್ತಿದ್ದಾಗ ಸರ್ಪವು ಗಟ್ಟಿಯವರ ಕೈ ಬೆರಳಿಗೆ ಕಚ್ಚಿ ಗಾಯಗೊಳಿಸಿತ್ತು. ಸಕಾಲದಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದರು. 

ಬುಧವಾರ ಸಂಜೆ ಪಿಲಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದೊಳಗಡೆ ಬೃಹದಾಕಾರದ ಎರಡು ಸರ್ಪಗಳು ಸುತ್ತಾಡುತ್ತಿರುವುದನ್ನ ಸ್ಥಳೀಯರು ನೋಡಿದ್ದು ವೀಡಿಯೋ ಮಾಡಿ ಜನರು ಜಾಗರೂಕರಾಗಿರಬೇಕೆಂದು ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದರು. ಮರುದಿನ ಬೆಳಗ್ಗೆ ಶಾಲಾ ಆವರಣದೊಳಗೆ ಮತ್ತೆ ಬೃಹತ್ ಸರ್ಪವು ಹರಿದಾಡುವುದು ಕಂಡುಬಂದಿದೆ. \

ಸಂಜೆ ವೇಳೆ ಶಾಲಾ ಗೇಟಿನ‌ ಎದುರುಗಡೆ ಬೃಹತ್ ಸರ್ಪ ಠಳಾಯಿಸುತ್ತಿದ್ದುದನ್ನ ಕಂಡ ಸ್ಥಳೀಯರು ತೊಕ್ಕೊಟ್ಟಿನ ರಿಕ್ಷಾ ಚಾಲಕ ಸ್ನೇಕ್ ರಂಜಿತ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ರಂಜಿತ್ ಅವರು ಬೃಹತ್ ಗಾತ್ರದ ನಾಗರವನ್ನ ಬೆನ್ನಟ್ಟಿ ಕಾರ್ಯಾಚರಣೆ ಶುರು ಮಾಡಿದ್ದಾರೆ. ಈ ವೇಳೆ ನಾಗರ ಹಾವು ಶಾಲೆಯ ಮುಂಭಾಗದ ಮನೆಯ ಆವರಣದೊಳಗೆ ನುಗ್ಗಿದ್ದು ರಂಜಿತ್ ಅವರು ಚಾಣಾಕ್ಷತನದಿಂದ ಅದನ್ನ ಹಿಡಿದು ಹಿಂದು ನಂಬಿಕೆ ಪ್ರಕಾರ ಅರಶಿಣ ಮಿಶ್ರಿತ ನೀರು ಚಿಮುಕಿಸಿ ಗೋಣಿ ಚೀಲದೊಳಗೆ ತುಂಬಿ ದೂರದ ಕಾಡಿಗೆ ಕೊಂಡೊಯ್ದು ಬಿಟ್ಟಿದ್ದಾರೆ.

Mangalore Huge venomous snakes spotted near school in Pillar.