ಬ್ರೇಕಿಂಗ್ ನ್ಯೂಸ್
22-01-22 01:43 pm Mangaluru Correspondent ಕರಾವಳಿ
ಮಂಗಳೂರು, ಜ.22: ಮಗು ಹೊಟ್ಟೆಯಲ್ಲಿ ಸತ್ತಿದೆ ಎಂದು ಹೇಳಿಯೂ ಇಡೀ ದಿನ ಗರ್ಭಿಣಿ ಮಹಿಳೆಯನ್ನು ಸತಾಯಿಸಿ, ಕೊನೆಗೆ ಆಕೆಯ ಸಾವಿಗೆ ಕಾರಣವಾದ ಘಟನೆ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಡೆದಿದ್ದು ವೈದ್ಯರ ನಿರ್ಲಕ್ಷ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ವಿಟ್ಲ ಸಮೀಪದ ಕುಂಡಡ್ಕ ಎಂಬಲ್ಲಿನ ನಿವಾಸಿ ಗಣೇಶ್ ರೈ ಎಂಬವರ ಪತ್ನಿ ಸವಿತಾ ರೈ(27) ಮೃತ ಮಹಿಳೆ. ಅವರನ್ನು ಶುಕ್ರವಾರ ಬೆಳಗ್ಗೆ ಪುತ್ತೂರಿನ ಸಿಟಿ ಆಸ್ಪತ್ರೆಗೆ ಒಯ್ದಿದ್ದು, ಅಲ್ಲಿಂದ ತುರ್ತಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆತರಲಾಗಿತ್ತು. ಬೆಳಗ್ಗೆ 9 ಗಂಟೆಗೆ ಆಸ್ಪತ್ರೆಗೆ ತಲುಪಿದ್ದರು. ಸ್ಕ್ಯಾನಿಂಗ್ ಪರೀಕ್ಷೆ ನಡೆಸಿದ ವೈದ್ಯರು, ಮಗುವಿನ ಉಸಿರಾಟ ನಿಂತಿರುವ ಬಗ್ಗೆ ಹೇಳಿದ್ದಾರೆ. ಹೀಗಾಗಿ ಕೂಡಲೇ ಆಪರೇಶನ್ ಮಾಡಬೇಕು ಎಂದೂ ಹೇಳಿದ್ದಾರೆ.
ಇದರಿಂದ ಕುಟುಂಬಕ್ಕೆ ಗಾಬರಿಯಾಗಿದ್ದು, ಬೇರೆ ಕಡೆಗೆ ಒಯ್ಯಬೇಕಾ ಎಂದು ಕೇಳಿದ್ದಕ್ಕೆ, ಬೇಡ ಇಲ್ಲಿಯೇ ಆಪರೇಶನ್ ಮಾಡುತ್ತೇವೆ. ಬೇರೆ ಕಡೆ ಒಯ್ದರೆ ಮಹಿಳೆಯ ಆರೋಗ್ಯಕ್ಕೆ ತೊಂದರೆ ಇದೆ ಎಂದಿದ್ದರು. ಹೀಗಾಗಿ ಆಪರೇಶನ್ ನಡೆಸಲು ತಯಾರಿಯನ್ನೂ ವೈದ್ಯರು ಮಾಡಿದ್ದರು. ಆದರೆ, ಈ ಮಾತು ಬೆಳಗ್ಗೆ ಹತ್ತು ಗಂಟೆಗೆ ಹೇಳಿದ್ದರೂ, ಮಧ್ಯಾಹ್ನ 2 ಗಂಟೆ ವರೆಗೂ ಆಸ್ಪತ್ರೆ ವೈದ್ಯರು ಆಪರೇಶನ್ ನಡೆಸಿಲ್ಲ. ಮನೆಮಂದಿ ಕೇಳಿದ್ದಕ್ಕೆ, ನಾರ್ಮಲ್ ಡೆಲಿವರಿಗೆ ನೋಡುತ್ತಿದ್ದೇವೆ, ತೊಂದರೆ ಇಲ್ಲ ಎಂದು ಸಮಜಾಯಿಷಿ ಹೇಳುತ್ತಿದ್ದರು ಎಂದು ಸವಿತಾ ರೈ ಸೋದರ ಯತೀಶ್ ರೈ ಹೇಳಿದ್ದಾರೆ.
ಮಗು ಸತ್ತಿದ್ದರೂ, ನಾರ್ಮಲ್ ಡೆಲಿವರಿಗೆ ಪ್ರಯತ್ನಿಸುತ್ತಿರುವುದಾಗಿ ವೈದ್ಯರು ಹೇಳುತ್ತಿದ್ದರು ಅನ್ನುವುದೇ ಸಂಶಯಕ್ಕೆ ಕಾರಣವಾಗುತ್ತದೆ. ಹೊಟ್ಟೆಯಲ್ಲಿ ಮಗು ಸತ್ತಿದ್ದರೆ, ಆದಷ್ಟು ಬೇಗ ಅರ್ಧ ಗಂಟೆಯಲ್ಲಿ ಮಗುವನ್ನು ಹೊರ ತೆಗೆಯಬೇಕು. ಇಲ್ಲದಿದ್ದರೆ ಮಗುವಿನ ತಾಯಿಗೆ ರಿಯಾಕ್ಷನ್ ಆಗುತ್ತದೆ. ಹೀಗಿದ್ದರೂ, ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಲ್ಲದೆ, ಇಡೀ ದಿನ ಸತಾಯಿಸಿದ್ದು ಸಂಶಯಕ್ಕೆ ಕಾರಣವಾಗಿದೆ. ಸಂಜೆ ನಾಲ್ಕು ಗಂಟೆ ವರೆಗೂ ಸವಿತಾ ಹುಷಾರಿದ್ದು, ತನ್ನ ಅಕ್ಕನ ಜೊತೆ ಮಾತನಾಡುತ್ತಿದ್ದರು. ಕುಡಿಯಲು ನೀರು ಕೊಡುವಂತೆ ಕೇಳಿದ್ದರು. ಹಾಗಾಗಿ ತಾಯಿ ಆರೋಗ್ಯದಲ್ಲಿ ಇದ್ದರೂ, ವೈದ್ಯರು ನಿರ್ಲಕ್ಷ್ಯ ವಹಿಸಿದ್ದು ಯಾಕೆ.. ವೈದ್ಯರ ನಿರ್ಲಕ್ಷ್ಯದಿಂದಲೇ ಈ ಸಾವು ಆಗಿದೆ. ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಯತೀಶ್ ರೈ ಆಗ್ರಹ ಮಾಡಿದ್ದಾರೆ.
ಮಹಿಳೆಯನ್ನು ರಾತ್ರಿ 7.30ರ ವೇಳೆಗೆ ವೈದ್ಯರು ಸಿಸೇರಿಯನ್ ನಡೆಸಿದ್ದು, ಅಷ್ಟು ಹೊತ್ತಿಗೆ ಮಹಿಳೆ ಸಾವು ಕಂಡಿದ್ದರು. ಆನಂತರ, ಕುಟುಂಬಸ್ಥರಿಗೆ ಮಹಿಳೆಗೆ ಫಿಟ್ಸ್ ಬಂದಿತ್ತು. ಹಾರ್ಟ್ ಅಟ್ಯಾಕ್ ಆಗಿದೆ ಎಂದು ನೆಪ ಹೇಳಿದ್ದಾರೆ. ಸತ್ತ ಮಗುವನ್ನು ಹೊಟ್ಟೆಯಲ್ಲಿ ಇಡೀ ದಿನ ಇಟ್ಟುಕೊಂಡು ನಿರ್ಲಕ್ಷ್ಯ ವಹಿಸಿದ್ದೇ ಘಟನೆಗೆ ಕಾರಣ ಅನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಈ ಬಗ್ಗೆ ಮಂಗಳೂರಿನ ಬಜರಂಗದಳದ ನಾಯಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಈ ರೀತಿಯ ನಿರ್ಲಕ್ಷ್ಯ ಪದೇ ಪದೇ ಆಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಎಚ್ಓ ಕಿಶೋರ್ ಕುಮಾರ್ ಅವರನ್ನು ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಮಗು ಮತ್ತು ಮಹಿಳೆಯ ಪೋಸ್ಟ್ ಮಾರ್ಟಂ ನಡೆಸಿದ್ದು, ಈ ವೇಳೆ ಬಜರಂಗದಳ ನಾಯಕರು ಭೇಟಿ ನೀಡಿದ್ದಾರೆ. ಡಿಎಚ್ಓ ಕಿಶೋರ್ ಕುಮಾರ್, ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ಸಂತ್ರಸ್ತ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಡಿಎಚ್ಓ, ಆಸ್ಪತ್ರೆ ಬಳಿಯಿಂದ ಮಾಹಿತಿ ಕೇಳಿದ್ದೇವೆ. ಮಗು ಸತ್ತಿದ್ದರೂ, ಆಪರೇಶನ್ ನಡೆಸುವುದಕ್ಕೆ ಯಾಕಾಗಿ ವಿಳಂಬ ಮಾಡಿದರು ಎಂದು ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ವೈದ್ಯರ ನಿರ್ಲಕ್ಷ್ಯ ಮತ್ತು ತಾಯಿ ಸಾವಿನ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangalore Mother and Unborn baby dies by Father Muller Hospital doctors negligence alleges family. 27-year-old Savita Rai from Puttur who was rushed to the hospital for delivery is said to be dead with a baby unborn.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm