ಬ್ರೇಕಿಂಗ್ ನ್ಯೂಸ್
25-01-22 01:57 pm HK Desk news ಕರಾವಳಿ
ಉಡುಪಿ, ಜ.24 : ಅರವತ್ತೈದರಲ್ಲಿ ಅರುಳು ಮರುಳು, ರಿಟೈರ್ಮೆಂಟ್ ಅಂದ್ರೆ ಮನೆಯಲ್ಲಿ ಬಿದ್ದಿರುವುದು ಅನ್ನೋ ಸಾಮಾನ್ಯರ ನಂಬಿಕೆಯನ್ನೇ ಇಲ್ಲೊಬ್ಬರು ಹುಸಿಗೊಳಿಸಿದ್ದಾರೆ. ರಕ್ಕಸ ಗಾತ್ರದಲ್ಲಿ ನುಗ್ಗಿ ಬರುವ ಸಮುದ್ರದ ಅಲೆಗಳ ನಡುವೆ ಈಜುವುದು ಸಾಮಾನ್ಯರಿಂದ ಸಾಧ್ಯ ಇಲ್ಲ. ಆದರೆ ಉಡುಪಿಯ ಕಡೆಕಾರು ನಿವಾಸಿಯೊಬ್ಬರು ತಮ್ಮ 65ರ ವಯಸ್ಸಿನಲ್ಲಿ ಕೈಗೆ ಕೋಳ, ಕಾಲಿಗೆ ಸರಪಳಿ ಬಿಗಿದು ಸಮುದ್ರದಲ್ಲಿ ನಿರಂತರ 5 ಗಂಟೆ ಈಜಿ ವಿಶ್ವ ದಾಖಲೆ ಮಾಡಿದ್ದಾರೆ.
ಉಡುಪಿಯ ಕಡೆಕಾರು ನಿವಾಸಿ ಗಂಗಾಧರ್ ಅವರು ನಿರಂತರ 5.30 ಗಂಟೆಗಳ ಕಾಲ ಮೂರೂವರೆ ಕಿಮೀ ಉದ್ದಕ್ಕೂ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲು ಮಾಡಿದ್ದಾರೆ. ಪಡುಕೆರೆಯ ತೀರದಲ್ಲಿ ಗಂಗಾಧರ್ ಕಡೆಕಾರು ಈ ಸಾಧನೆ ಮಾಡಿದ್ದು ತೀರದಿಂದ ಮೂರೂವರೆ ಕಿಮೀ ದೂದರಲ್ಲಿ ಸಮುದ್ರ ಮಧ್ಯೆ ಕೈಯನ್ನು ಹಿಂದಕ್ಕೆ ಕಟ್ಟಿ, ಕಾಲುಗಳನ್ನು ಸರಪಳಿಯಿಂದ ಬಿಗಿದುಕೊಂಡು ಬೆಳಗ್ಗೆ ಎಂಟು ಗಂಟೆ ಮೊದಲೇ ನೀರಿಗೆ ಧುಮುಕಿದ್ದರು. ಸಮುದ್ರದಲ್ಲಿ ಮೂರುವರೆ ಕಿಲೋಮೀಟರು ದೂರ ಈಜಿ ದಾಖಲೆ ಮಾಡುವುದು ಗಂಗಾಧರ್ ಮುಂದಿದ್ದ ಗುರಿಯಾಗಿತ್ತು. ಕಡಲಿನ ಏರಿಳಿತಗಳ ನಡುವೆ ಈಜುತ್ತಲೇ ಬಂದ ಗಂಗಾಧರ್ ದಡ ತಲುಪಿದ್ದು ಮಧ್ಯಾಹ್ನ ಸುಡು ಬಿಸಿಲು 1.20 ಕ್ಕೆ. ಬರೋಬ್ಬರಿ ಐದೂವರೆ ಗಂಟೆಗಳ ಕಾಲ ಈಜಿ ಗಂಗಾಧರ್ ದಾಖಲೆ ಮಾಡಿದ್ದಾರೆ.
ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಮುಖ್ಯಸ್ಥ ಮನೀಷ್ ಬಿಷ್ಣೋಯ್, ಗಂಗಾಧರ್ ಅವರು ಸಮುದ್ರದಲ್ಲಿ ಈಜುತ್ತಿದ್ದಾಗಲೇ ದೋಣಿಯಲ್ಲಿ ಜೊತೆಗೇ ಬಂದು ಈಜಿನತ್ತ ಗಮನ ಇಟ್ಟಿದ್ದರು. ಕೊನೆಗೆ ಅಪೂರ್ವ ದಾಖಲೆ ಸಾಧಿಸಿದ್ದನ್ನು ಕಂಡು ಗಿನ್ನಿಸ್ ಬುಕ್ ಅಧಿಕಾರಿಗಳು ಥ್ರಿಲ್ ಆಗಿದ್ದಾರೆ. ಸ್ಥಳದಲ್ಲೇ ಗಂಗಾಧರ್ ಅವರಿಗೆ ರೆಕಾರ್ಡ್ ಗಿಟ್ಟಿಸಿದ ಸರ್ಟಿಫಿಕೇಟ್ ಅನ್ನೂ ನೀಡಿದ್ದಾರೆ. ಗಂಗಾಧರ್ ಮಹತ್ವದ ಸಾಧನೆ ಮಾಡಿದ್ದಾರೆ. ರಿಟೈರ್ ಆಗುವ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದು ಅಚ್ಚರಿ ಮೂಡಿಸಿದೆ. ಅದರಲ್ಲೂ ಕೈ, ಕಾಲುಗಳನ್ನು ಕಟ್ಟಿಕೊಂಡು ಈಜುವುದು ಸುಲಭ ಅಲ್ಲ. ಇದು ನನಗೂ ಅವಿಸ್ಮರಣೀಯ ಕ್ಷಣ ಎಂದು ಬಿಷ್ಣೋಯ್ ಹೇಳಿದ್ದಾರೆ.
ಈಜುಗಾರ ಗಂಗಾಧರ ತಮ್ಮ 50ನೇ ವಯಸ್ಸಿನಲ್ಲಿ ಸಮುದ್ರದಲ್ಲಿ ಈಜುವುದನ್ನು ಕರಗತ ಮಾಡಿದ್ದರು. ಐದೇ ವರ್ಷಕ್ಕೆ ಎರಡು ರಾಷ್ಟ್ರೀಯ, ಅಂತರಾಷ್ಟ್ರೀಯ ದಾಖಲೆ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಜನಕ್ಕೆ ಈಗಾಗಲೇ ಈಜು ತರಬೇತಿಯನ್ನು ನೀಡಿದ್ದಾರೆ. ಸಾಧನೆಗೆ ವಯಸ್ಸಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮಲ್ಪೆ ಗೋಪಾಲ ಮೆಂಡನ್ - ಸುಂದರಿ ಮೆಂಡನ್ ಅವರ ಪುತ್ರನಾಗಿರುವ ಗಂಗಾಧರ್, ಕಳೆದ ವರ್ಷ ಕಾಲನ್ನು ಪದ್ಮಾಸನ ಭಂಗಿಯಲ್ಲಿ ಕಟ್ಟಿ ಸಮುದ್ರದಲ್ಲಿ ಈಜುವ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಮಾಡಿದ್ದರು. 2006ರಲ್ಲಿ ಸಮುದ್ರದಲ್ಲಿ ವಿವಿಧ ಭಂಗಿಗಳಲ್ಲಿ ಈಜುವುದನ್ನು ಕಲಿತಿದ್ದ ಗಂಗಾಧರ್, ಬಳಿಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. 31 ಚಿನ್ನದ ಪದಕ, 16 ಬೆಳ್ಳಿ, ಒಂಬತ್ತು ಕಂಚಿನ ಪದಕ ಪಡೆದಿದ್ದಾರೆ. ಕಳೆದ ವರ್ಷ ಮಲ್ಪೆಯ ಸೈಂಟ್ ಮೇರೀಸ್ ದ್ವೀಪದಲ್ಲಿ 41 ವಿದ್ಯಾರ್ಥಿಗಳ ಜೊತೆಗೆ ತೀರದಿಂದ ಈಜಾಡಿ ದ್ವೀಪ ಸೇರುವ ಮೂಲಕ ದಾಖಲೆ ನಿರ್ಮಿಸಿದ್ದರು.
A sexagenarian from Kadekar has created a Golden Book of World Records on Monday, January 24 by swimming 3550 meters for five hours in the sea and that too with his hands and legs chained. He swam for five and a half hours without a break! He dived into the sea from Udupi’s Padukere beach shore at 7.50 AM and reached the destination at 1.20 PM. The representative from the Golden Book of World Records who watched the feat issued a provisional certificate on the spot soon after Gangadhar reached the shore.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 07:33 pm
Mangalore Correspondent
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm