ಬ್ರೇಕಿಂಗ್ ನ್ಯೂಸ್
31-01-22 08:35 pm Mangalore Correspondent ಕರಾವಳಿ
ಮಂಗಳೂರು, ಜ.31 : ಅತ್ತ ಹಿರಿಯ ನಾಯಕ ಸಿಎಂ ಇಬ್ರಾಹಿಂ ಪಕ್ಷದಿಂದ ಹೊರ ನಡೆಯುವ ಸುಳಿವು ನೀಡಿರುವಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪ ನಾಯಕರಾಗಿ ನೇಮಕ ಆಗಿರುವ ಯುಟಿ.ಖಾದರ್, ತಮಗೆ ನೀಡಿರುವ ಹೊಸ ಜವಾಬ್ದಾರಿಗಾಗಿ ಹಿರಿಯ ನಾಯಕರಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ, ಈ ಸ್ಥಾನ ತಾನು ಅಲ್ಪಸಂಖ್ಯಾತ ಅಥವಾ ಇಬ್ರಾಹಿಂ ಸ್ಥಾನ ತುಂಬುವುದಕ್ಕಾಗಿ ನೀಡಿದ್ದಲ್ಲ. ಅವರು ರಾಷ್ಟ್ರ ಮಟ್ಟದ ನಾಯಕರು. ಅವರಿಗೂ ನನಗೂ ಹೋಲಿಕೆ ಮಾಡಲಾಗದು. ಎಲ್ಲರಿಗೂ ಸಮಾನತೆ ಅನ್ನುವ ನೆಲೆಯಲ್ಲಿ ಖಾಲಿ ಇದ್ದ ಸ್ಥಾನಕ್ಕೆ ನನಗೆ ಅವಕಾಶ ಕೊಟ್ಟಿದ್ದಾರೆ ಎಂದು ಖಾದರ್ ಹೇಳಿದ್ದಾರೆ.
ಸಿಎಂ ಇಬ್ರಾಹಿಂ ನಮ್ಮ ಪಕ್ಷದಲ್ಲೇ ಇದ್ದಾರೆ. ಕೆಲವೊಂದು ಅಸಮಾಧಾನ ಇದೆಯೆಂದು ಮಾತುಗಳನ್ನು ಹೇಳಿದ್ದಾರೆ. ಅದನ್ನು ನಮ್ಮ ಹೈಕಮಾಂಡ್ ಮಟ್ಟದ ನಾಯಕರು ನೋಡಿಕೊಳ್ಳುತ್ತಾರೆ. ನಾನು ಕೂಡ ಅವರ ಜೊತೆ ಮಾತನಾಡಿದ್ದೇನೆ. ನನ್ನಲ್ಲಿ ಏನೂ ಬೇರೆ ಪಕ್ಷಕ್ಕೆ ಹೋಗುವ ಬಗ್ಗೆ ಹೇಳಿಲ್ಲ. ಆಲಿಂಗ, ಅಹಿಂದ, ಅಗೌಡ ಹೀಗೆ ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುವ ಇಂಥ ಚಳವಳಿ, ತತ್ವಗಳು ಕಾಂಗ್ರೆಸ್ ಒಳಗೇ ಇರುವಂಥದ್ದು. ಇಬ್ರಾಹಿಂ ಅವರ ಎಲ್ಲ ಯೋಚನೆಗಳು ಕಾಂಗ್ರೆಸ್ ಪಕ್ಷದ ವ್ಯಾಪ್ತಿಯಲ್ಲೇ ಇದೆ. ಅವರು ಪಕ್ಷ ಬಿಟ್ಟು ಹೋಗುವುದಿಲ್ಲ. ಪಕ್ಷದಲ್ಲೇ ಇರಲಿದ್ದಾರೆ.
ಕಾಂಗ್ರೆಸ್ ಎಲ್ಲರಿಗೂ ತಾರತಮ್ಯ ಇಲ್ಲದೆ ಅವಕಾಶಗಳನ್ನು ಕೊಟ್ಟಿದೆ. ಕಳೆದ ಬಾರಿ ಸಿದ್ದರಾಮಯ್ಯ ಸರಕಾರ ಇದ್ದಾಗ, ಅದಕ್ಕೂ ಹಿಂದೆ ಎಸ್ಸೆಂ ಕೃಷ್ಣ ಸರಕಾರ ಇದ್ದಾಗ ಏಳು ಮಂದಿ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನದ ಅವಕಾಶ ಕೊಟ್ಟಿದ್ದರು. ಅಲ್ಪಸಂಖ್ಯಾತರಿಗೆ ಹೆಚ್ಚು ಅವಕಾಶ ಕೊಟ್ಟಿದ್ದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಪಕ್ಷ ಮುಂದೆಯೂ ಅವಕಾಶಗಳನ್ನು ಕೊಡಲಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಚರ್ಚಿಸಿ, ನನಗೆ ಈ ಸ್ಥಾನ ಕೊಡಿಸಿದ್ದಾರೆ. ಇದರ ಬಗ್ಗೆ ಯಾವುದೇ ಇತರ ಮುಖಂಡರಿಗೆ ಅಸಮಾಧಾನ ಇಲ್ಲ ಎಂದು ಖಾದರ್ ಹೇಳಿದರು.
ಇದು ಸ್ಥಾನಮಾನ ಅಂದ್ಕೊಳಲ್ಲ. ನನಗೆ ನೀಡಿರುವ ಜವಾಬ್ದಾರಿ ಅಂದುಕೊಳ್ಳುತ್ತೇನೆ. ಮಹತ್ತರ ಜವಾಬ್ದಾರಿಯನ್ನು ನನಗೆ ಪಕ್ಷ ಕೊಟ್ಟಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಖಾದರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಶುಭೋದಯ ಆಳ್ವಾ, ಲುಕ್ಮಾನ್ ಬಂಟ್ವಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Mangaluru MLA UT Khader on Monday claimed that his elevation to the post of deputy leader of opposition in the Karnataka assembly has nothing to do with the MLC CM Ibrahim issue.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm