ಬ್ರೇಕಿಂಗ್ ನ್ಯೂಸ್
01-02-22 08:58 pm Mangalore Correspondent ಕರಾವಳಿ
Photo credits : Headline Karnataka
ಮಂಗಳೂರು, ಫೆ.1 : ನಗರದ ಬಳ್ಳಾಲ್ ಬಾಗ್ ನಲ್ಲಿರುವ ಶ್ರೀದೇವಿ ಕಾಲೇಜು ಆವರಣದಲ್ಲಿ ಹುಡುಗರ ತಂಡವೊಂದು ಕ್ಯಾಂಪಸ್ ಒಳನುಗ್ಗಿ ತಲವಾರು ಹಿಡಿದು ದಾಂಧಲೆ ನಡೆಸಿದ ಘಟನೆ ನಡೆದಿದ್ದು, ಪ್ರಕರಣ ಬರ್ಕೆ ಠಾಣೆ ಮೆಟ್ಟಿಲೇರಿದೆ.
ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಘಟನೆ ನಡೆದಿದೆ. ಹುಡುಗರ ಗುಂಪೊಂದು ಕಾಲೇಜು ಮುಂಭಾಗದ ರಸ್ತೆಯಲ್ಲಿ ಸ್ಕೂಟರಿನಲ್ಲಿ ಬಂದಿದ್ದು ಈ ವೇಳೆ ಕೇರಳ ಮೂಲದ ವಿದ್ಯಾರ್ಥಿಗಳಿಗೆ ವಾಹನ ತಾಗಿತ್ತು. ಇದರ ಬಗ್ಗೆ ಹುಡುಗರ ಗುಂಪು ಮತ್ತು ಮಲಯಾಳಿ ವಿದ್ಯಾರ್ಥಿಗಳ ನಡುವೆ ಮಾತಿಗೆ ಮಾತು ಬೆಳೆದಿತ್ತು. ಆದರೆ ಎರಡೂ ಕಡೆಯವರಿಗೆ ಭಾಷೆ ತಿಳಿಯದ ಕಾರಣ ಏನೇನೋ ಮಾತಾಡಿಕೊಂಡಿದ್ದರು. ಆನಂತರ ಅದೇ ಕಾಲೇಜಿನಲ್ಲಿ ಮಲಯಾಳಿ ವಿದ್ಯಾರ್ಥಿಗಳ ಸಹಪಾಠಿಯಾಗಿರುವ, ಮಂಗಳೂರಿನ ವಿದ್ಯಾರ್ಥಿಯೊಬ್ಬ ಅಲ್ಲಿಗೆ ಬಂದಿದ್ದು ಎರಡೂ ಗುಂಪಿನವರಿಗೆ ಬುದ್ಧಿಮಾತು ಹೇಳಿದ್ದಾನೆ. ಮಲಯಾಳ ಬಾರದ ಹುಡುಗರನ್ನು ಅಲ್ಲಿಂದ ಹೋಗುವಂತೆ ಹೇಳಿದ್ದ.
ಆದರೆ ಇದನ್ನೇ ನೆಪವಾಗಿರಿಸಿದ ಕಿಡಿಗೇಡಿ ಹುಡುಗರ ಗುಂಪು ಅಲ್ಲಿಂದ ಹಿಂತಿರುಗಿದ್ದು ಸ್ವಲ್ಪ ಹೊತ್ತಿನಲ್ಲಿ ಸ್ಥಳಕ್ಕೆ ತಲವಾರು ಹಿಡಿದು ಬಂದಿತ್ತು. ಐದಾರು ಮಂದಿ ಕಾಲೇಜು ಆವರಣಕ್ಕೆ ಬಂದು ಮಲಯಾಳಿಗಳು ಮತ್ತು ಇನ್ನೊಬ್ಬ ವಿದ್ಯಾರ್ಥಿಯನ್ನು ಹುಡುಕಾಟ ನಡೆಸಿದೆ. ತಲವಾರು ಹಿಡಿದು ಅತ್ತಿತ್ತ ಹೋಗಿದ್ದು, ಅಲ್ಲಿ ಮಲಯಾಳಿ ಹುಡುಗರಾಗಲೀ, ಬುದ್ಧಿಮಾತು ಹೇಳಿದ ವಿದ್ಯಾರ್ಥಿಯಾಗಲೀ ಸಿಕ್ಕಿರಲಿಲ್ಲ. ಹುಡುಗರು ಹೊರಗಿನವರಾಗಿದ್ದು, ಕಾಲೇಜಿಗೆ ಸಂಬಂಧಪಟ್ಟವರಲ್ಲ.
ಕಾಲೇಜು ಆವರಣದಲ್ಲಿ ತಲವಾರು ಹಿಡಿದು ಠಳಾಯಿಸಿದ ಹುಡುಗರ ವಿಡಿಯೋವನ್ನು ಕಾಲೇಜಿನ ವಿದ್ಯಾರ್ಥಿಗಳು ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದು, ಅದೀಗ ವೈರಲ್ ಆಗಿದೆ. ಬರ್ಕೆ ಠಾಣೆಯಲ್ಲಿ ಸ್ಥಳೀಯ ವಿದ್ಯಾರ್ಥಿ ದೂರು ನೀಡಿದ್ದು, ತಲವಾರು ಹಿಡಿದು ಬಂದವರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾನೆ. ಎರಡೂ ಕಡೆಯ ಗುಂಪನ್ನು ಠಾಣೆಗೆ ಕರೆಸಿ, ಪೊಲೀಸರು ಮಾತುಕತೆ ನಡೆಸುತ್ತಿದ್ದಾರೆ.
Youths enter with Talwar to college Sridevi campus in Ballabagh, Mangalore. The video of this has gone goes viral on social media.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm