ಬ್ರೇಕಿಂಗ್ ನ್ಯೂಸ್
03-02-22 12:48 pm HK Desk news ಕರಾವಳಿ
ಕುಂದಾಪುರ, ಫೆ.2 : ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆಂಬ ಕಾರಣಕ್ಕೆ ಬಾಗಿಲು ಮುಚ್ಚಲಾಗಿದೆ. ಕಾಲೇಜು ಆವರಣದ ಗೇಟ್ ಹೊರಭಾಗದಲ್ಲಿ ನಿಂತು ವಿದ್ಯಾರ್ಥಿನಿಯರು ಅತ್ತು ಕರೆದು ತಮ್ಮ ಭವಿಷ್ಯ ಹಾಳು ಮಾಡದಂತೆ ಬೇಡಿಕೊಂಡಿದ್ದಾರೆ.
ಕಾಲೇಜಿನ ಶಿಕ್ಷಕರು ಗೇಟ್ ಬಳಿ ಬಂದು, ಸರಕಾರದ ಆದೇಶ ಇದೆ. ಹಿಜಾಬ್ ಧರಿಸಿ ಬರುವವರಿಗೆ ಅವಕಾಶ ನೀಡಬಾರದೆಂದು ಶಾಸಕರು ಸೂಚನೆ ನೀಡಿದ್ದಾರೆ. ಅದನ್ನು ನಾವು ಪಾಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಗೇಟ್ ಬಳಿ ಪೊಲೀಸರನ್ನು ನಿಯೋಜಿಸಿದ್ದು, ವಿದ್ಯಾರ್ಥಿನಿಯರು ಏನೂ ತೋಚದಂತಾಗಿದ್ದಾರೆ. ಗೇಟ್ ಬಳಿ ನಿಂತು, ನೀವು ಶೈಕ್ಷಣಿಕ ಸಾಲಿನ ಮಧ್ಯದಲ್ಲಿ ಈ ರೀತಿಯ ನಿಮಯ ತಂದರೆ ಹೇಗೆ..? ಆರಂಭದಲ್ಲಿ ಇಂತಹ ಯಾವುದೇ ರೂಲ್ಸ್ ನೀವು ಹೇಳಿರಲಿಲ್ಲ. ಈಗ ಕಾಲೇಜು ಎರಡು ತಿಂಗಳು ಇರುವಾಗ ಇಂಥ ರೂಲ್ಸ್ ತಂದು ನಮ್ಮನ್ನು ಬೀದಿಗೆ ಹಾಕುತ್ತಿದ್ದೀರಿ ಎಂದು ಅಳಲು ತೋಡಿಕೊಂಡರು.

ಆದರೆ, ವಿದ್ಯಾರ್ಥಿನಿಯರ ಪ್ರಶ್ನೆಗೆ ಕಾಲೇಜು ಸಿಬಂದಿ ಬಳಿ ಸೂಕ್ತ ಉತ್ತರ ಇರಲಿಲ್ಲ. ಉಡುಪಿ ಕಾಲೇಜಿಗೆ ನೀಡಿರುವ ಆದೇಶ ಎಲ್ಲ ಕಡೆಗೂ ಅನ್ವಯಿಸುತ್ತದೆ. ಸರಕಾರ ರಾಜ್ಯದ ಎಲ್ಲ ಕಾಲೇಜುಗಳಿಗೂ ಈ ಆದೇಶ ನೀಡಿದೆ, ಇದರ ಬಗ್ಗೆ ಎರಡು ದಿನ ಮೊದಲೇ ನಿಮಗೆ ಮಾಹಿತಿ ನೀಡಿದ್ದೇವೆ ಎಂದು ಉತ್ತರ ನೀಡಿದ್ದಾರೆ. ಅರ್ಧದಲ್ಲಿ ನೀವು ಕಾಲೇಜಿಗೆ ಬರಬಾರದು ಅಂದ್ರೆ ಹೇಗೆ ಎಂಬ ಪ್ರಶ್ನೆಗೆ, ಉತ್ತರ ನೀಡದೆ ನುಣುಚಿಕೊಂಡಿದ್ದಾರೆ. ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ಸಮವಸ್ತ್ರದ ನೆಪದಲ್ಲಿ ಹಿಜಾಬ್ ನಿರ್ಬಂಧ ಇರಲಿಲ್ಲ. ಈವರೆಗೂ ಹಿಜಾಬ್ ಧರಿಸಿಯೇ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬರುತ್ತಿದ್ದರು. ಆದರೆ ಉಡುಪಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಏರ್ಪಟ್ಟು ಚರ್ಚೆಗೀಡಾಗುತ್ತಿದ್ದಂತೆ, ಅದೇ ಗೀಳು ಕುಂದಾಪುರದಲ್ಲೂ ಕಾಣಿಸಿಕೊಂಡಿದೆ.

ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದರೆ, ನಾವು ಕೇಸರಿ ಶಾಲು ಹಾಕ್ಕೊಂಡು ಬರುತ್ತೇವೆ ಎಂದು ಹೇಳಿ ಈ ವಿವಾದಕ್ಕೆ ತುಪ್ಪ ಸುರಿದಿದ್ದು ಹಿಂದು ಸಂಘಟನೆಯ ಮಂದಿ. ಬುಧವಾರ ದಿಢೀರ್ ಆಗಿ ಹಿಂದು ವಿದ್ಯಾರ್ಥಿಗಳು ಒಂದಷ್ಟು ಮಂದಿ ಕೇಸರಿ ಶಾಲು ಹಾಕ್ಕೊಂಡು ಬಂದು ಹಿಜಾಬ್ ನಿಷೇಧ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಶಾಸಕ ಶ್ರೀನಿವಾಸ ಶೆಟ್ಟಿ ಮತ್ತು ಕಾಲೇಜಿನ ಸಿಬಂದಿಗಳು ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರನ್ನು ಕರೆದು ಮನವೊಲಿಕೆ ಮಾಡಿದ್ದಾರೆ. ಆದರೆ ಪೋಷಕರು ಹಿಜಾಬ್ ಧರಿಸದೇ ಬರಲು ಒಪ್ಪಿಗೆ ನೀಡಲಿಲ್ಲ.

ನಮ್ಮ ಧಾರ್ಮಿಕ ಸಂಕೇತ ಆಗಿರುವುದರಿಂದ ಇದನ್ನು ನಿರಾಕರಣೆ ಮಾಡುವಂತಿಲ್ಲ. ಧಾರ್ಮಿಕ ಸ್ವಾತಂತ್ರ್ಯವೂ ಇದೆ. ಅಲ್ಲದೆ, ಇಂಥ ನಿಯಮವನ್ನು ನೀವು ಶೈಕ್ಷಣಿಕ ಸಾಲಿನ ಮಧ್ಯದಲ್ಲಿ ಜಾರಿಗೆ ತರುವುದು ತಪ್ಪೆಂದು ವಾದಿಸಿದ್ದಾರೆ. ಸಮವಸ್ತ್ರ ಧರಿಸುವುದರ ಜೊತೆಗೆ ಹಿಜಾಬ್ ಧರಿಸಿಕೊಂಡು ತರಗತಿಗೆ ಬರುತ್ತಿದ್ದರು. ಇಷ್ಟು ದಿನ ಇಲ್ಲದ ನಿಯಮ ಈಗ ಯಾಕೆ ದಿಢೀರ್ ಆಗಿ ಬಂತು ಎಂದು ಪ್ರಶ್ನೆ ಮಾಡಿದ್ದಾರೆ. ಇಂದು ಬೆಳಗ್ಗೆ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಕೂಡ ಇದೇ ಪ್ರಶ್ನೆ ಮಾಡಿದ್ದು, ಕಾಲೇಜಿನ ಆಡಳಿತಕ್ಕೆ ಅಹವಾಲು ಮುಂದಿಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಶೈಕ್ಷಣಿಕ ಸಾಲಿನ ಮಧ್ಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು. ಈ ಬಗ್ಗೆ ಜಿಲ್ಲಾಡಳಿತದ ಜೊತೆಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರುತ್ತೇವೆ. ಏಕರೂಪದ ನಿಯಮದ ಬಗ್ಗೆ ರಾಜ್ಯ ಸರಕಾರ ಕಾನೂನು ರೂಪಿಸಬೇಕಾಗಿದೆ ಎಂದು ಹೇಳಿದ್ದಾರೆ.
Muslim girl students of government college who arrived to the institute wearing Hijabs were stopped at the gate by the principal and denied entry into the campus on Thursday February 3. The principal asked the concerned students not to attend classes with Hijab. He asked the students to remove the Hijab and attend classes.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm