ಬ್ರೇಕಿಂಗ್ ನ್ಯೂಸ್
03-02-22 07:14 pm HK Desk news ಕರಾವಳಿ
ಉಡುಪಿ, ಫೆ.3 : ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಟ್ರಾವೆಲ್ ಬ್ಯಾಗ್ ನಲ್ಲಿ ತುಂಬಿಕೊಂಡು ಹಾಸ್ಟೆಲ್ ಒಳಗೆ ಒಯ್ಯಲು ಯತ್ನಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಮಣಿಪಾಲ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಿಗೆ ಕುಖ್ಯಾತಿ ಇರುವ ಪ್ರದೇಶ. ಅಲ್ಲಿನ ಎಂಐಟಿ ಕ್ಯಾಂಪಸ್ ಅಂದ್ರೆ ಹುಡುಗ- ಹುಡುಗಿಯರಿಗೆ ಭೇದವೇ ಇಲ್ಲದಷ್ಟು ನಂಟು, ತಾದಾತ್ಮ್ಯ ಬೆಳೆದಿದೆ. ಅಂಥ ಕ್ಯಾಂಪಸ್ ಒಳಗಿನಿಂದ ಸಿಸಿಟಿವಿ ದೃಶ್ಯಾವಳಿಯೊಂದು ಹೊರಬಂದಿದ್ದು ಅಲ್ಲಿನ ಹುಡುಗ- ಹುಡುಗಿಯರ ಸ್ಥಿತಿಗೆ ಕನ್ನಡಿ ಹಿಡಿಯುವಂತಿದೆ.
ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಹುಡುಗರ ಹಾಸ್ಟೆಲ್ ಒಳಗೆ ದೊಡ್ಡ ಟ್ರಾವೆಲ್ ಬ್ಯಾಗ್ ನಲ್ಲಿ ತುಂಬಿಕೊಂಡು ಒಯ್ಯಲು ಯತ್ನಿಸಿದ್ದಾನೆ. ಗೇಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಗಳು ಚೆಕ್ ಮಾಡುತ್ತಿದ್ದರು. ಈ ಸಂದರ್ಭ ಟ್ರಾವೆಲ್ ಬ್ಯಾಗ್ ಎತ್ತಿಕೊಂಡು ಮುಂದೆ ಹೋಗಲು ಯುವಕ ಪ್ರಯತ್ನಿಸಿದ್ದು ಅತಿ ಭಾರದಿಂದ ನಲುಗಿದ್ದಾನೆ. ಬ್ಯಾಗ್ ಇಷ್ಟೊಂದು ಭಾರ ಇರುವ ಬಗ್ಗೆ ಸಂಶಯ ಬಂದು ಸೆಕ್ಯುರಿಟಿ ಸಿಬಂದಿ ಸೂಟ್ ಕೇಸ್ ತೆಗೆದು ನೋಡಿದ್ದಾರೆ.
ಸೂಟ್ ಕೇಸ್ ನೋಡಿದರೆ ಸೆಕ್ಯುರಿಟಿ ಸಿಬಂದಿ ತಮ್ಮ ಕಣ್ಣುಗಳನ್ನೇ ನಂಬದಾಗಿದ್ದಾರೆ. ಅದರ ಒಳಗಿಂದ ಯುವತಿ ಎದ್ದು ಬಂದಿದ್ದು ಅಲ್ಲಿಯೇ ಎದ್ದು ನಿಂತಿದ್ದಾಳೆ. ಜೊತೆಗಿದ್ದ ಹುಡುಗ ಗಾಬರಿಯಿಂದ ನಿಂತಲ್ಲೇ ನಿಂತು ಬಿಟ್ಟಿದ್ದ.
ಈ ಬಗ್ಗೆ ಮಣಿಪಾಲ ಪೊಲೀಸರಿಗೆ ಕೇಳಿದರೆ, ನಮಗೇನು ಈ ವಿಚಾರ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಓಡಾಡುತ್ತಿದ್ದು ಅಲ್ಲಿನ ಸಿಬಂದಿಯೇ ವಿದ್ಯಾರ್ಥಿಗಳ ಚಮತ್ಕಾರವನ್ನು ಸಿಸಿಟಿವಿಯಿಂದ ತೆಗೆದು ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.
ಆದರೆ ಈ ವಿಡಿಯೋವನ್ನು ಮಣಿಪಾಲದ ಭದ್ರತಾ ಸಿಬಂದಿ ನಿರಾಕರಿಸಿದ್ದಾರೆ. ಇದು ಮಣಿಪಾಲದ್ದಲ್ಲ. ಬೇರೆಲ್ಲಿಯದೋ ಹಳೆಯ ವಿಡಿಯೋ ಎಂದು ಹೇಳಿದ್ದಾರೆ. ಕೆಲವರ ಪ್ರಕಾರ, ಮಣಿಪಾಲದ ಹಳೇ ವಿಡಿಯೋ ಎನ್ನುತ್ತಿದ್ದಾರೆ.
Udupi Engineering student carries his girlfriend in suitcase enters hostel gets caught by security guard. The video of this has gone viral social media.
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
07-09-26 01:22 pm
HK News Staffer
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
07-09-26 03:42 pm
HK News Staffer
ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬ...
07-09-26 02:06 pm
ಪರವಾನಗಿ ಇಲ್ಲದೆ ಔಷಧಿ ದಾಸ್ತಾನು ; ಬೆಂಗಳೂರಿನ ಅಮೆಜ...
06-09-26 10:28 pm
ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಆರೋಪ ; ಹೈಕೋರ್ಟಿಗೆ...
06-09-26 06:11 pm
ತಾನು ಐಎಎಸ್ ಅಧಿಕಾರಿ, ಪ್ರವಾಸೋದ್ಯಮ ಇಲಾಖೆಯ ಹೊಟೇಲ...
05-09-26 08:58 pm