ಮಣಿಪಾಲ ಸ್ಕ್ಯಾಂಡಲ್ ವಿಡಿಯೋ ಅಸಲಿಯತ್ತೇನು ? ಡೆಹ್ರಾಡೂನ್ ಕಾಲೇಜಿನ ಹಳೆ ವಿಡಿಯೋ ವೈರಲ್ !

03-02-22 08:32 pm       HK Desk news   ಕರಾವಳಿ

ಯುವಕನೊಬ್ಬ ಯುವತಿಯನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ಹಾಸ್ಟೆಲ್ ಒಳನುಗ್ಗಲು ಯತ್ನಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಉಡುಪಿ, ಫೆ.3 : ಯುವಕನೊಬ್ಬ ಯುವತಿಯನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ಹಾಸ್ಟೆಲ್ ಒಳನುಗ್ಗಲು ಯತ್ನಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಹೆಚ್ಚಿನವರು ಮಣಿಪಾಲದ ಎಂಐಟಿ ಇಂಜಿನಿಯರಿಂಗ್ ಕಾಲೇಜಿನ ವಿಡಿಯೋ ಎಂದು ಹೇಳಿ ಟ್ವಿಟರ್, ಫೇಸ್ಬುಕ್ ನಲ್ಲಿ ಹರಿಯಬಿಟ್ಟಿದ್ದಾರೆ. ಆದರೆ ಈ ವಿಡಿಯೋ ದೇಶಾದ್ಯಂತ ತೀವ್ರ ಸದ್ದು ಮಾಡಿದ ಬೆನ್ನಲ್ಲೇ ರಾಷ್ಟ್ರೀಯ ವಾಹಿನಿಗಳು ಇದರ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿವೆ.

ರಿಪಬ್ಲಿಕ್ ಟಿವಿಯ ವೆಬ್ ಟೀಮ್ ಈ ಬಗ್ಗೆ ಫ್ಯಾಕ್ಟ್ ಚೆಕ್ ಹೆಸರಲ್ಲಿ ವರದಿ ಪ್ರಕಟಿಸಿದ್ದು, ಮೂರು ವರ್ಷಗಳ ಹಳೆಯ ವಿಡಿಯೋ ಎಂದು ಹೇಳಿದೆ. ಅಲ್ಲದೆ, ಈ ವಿಡಿಯೋ ಮಣಿಪಾಲದ್ದಲ್ಲ. ಡೆಹ್ರಾಡೂನ್ ಕಾಲೇಜೊಂದರ ವಿಡಿಯೋ ಎಂದು ಸುದ್ದಿ ಪ್ರಕಟಿಸಿದೆ. ಟ್ವಿಟರ್ ನಲ್ಲಿ ಮಣಿಪಾಲ್ ಸ್ಕ್ಯಾಂಡಲ್, ಮಣಿಪಾಲ್ ವೈರಲ್ ವಿಡಿಯೋ ಹೆಸರಲ್ಲಿ ವಿಡಿಯೋ ಎಂದು ಭಾರೀ ಸದ್ದು ಮಾಡಿತ್ತು. ಮಣಿಪಾಲದಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ಈ ಬಗ್ಗೆ ಭಿನ್ನ ಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದರು.

ರಿಪಬ್ಲಿಕ್ ಟಿವಿ ವರದಿ ಪ್ರಕಾರ, ಇದು 2019ರಲ್ಲಿ ವೈರಲ್ ಆಗಿದ್ದ ವಿಡಿಯೋ. ಡೆಹ್ರಾಡೂನಿನ ಯೂನಿವರ್ಸಿಟಿ ಆಫ್ ಪೆಟ್ರೋಲಿಯಂ ಅಂಡ್ ಎನರ್ಜಿ ಸ್ಟಡೀಸ್(ಯುಪಿಇಎಸ್) ಎಂಬ ಖಾಸಗಿ ಯೂನಿವರ್ಸಿಟಿಯ ಹಾಸ್ಟೆಲ್ ನಲ್ಲಿ 2019ಕ್ಕೂ ಹಿಂದೆ ನಡೆದಿರುವ ಘಟನೆಯಾಗಿತ್ತು ಎಂದು ಹೇಳಿದೆ. ಮೂರು ವರ್ಷಗಳ ಹಿಂದೆ ಇದೇ ರೀತಿ ವೈರಲ್ ಆಗಿದ್ದ ವಿಡಿಯೋ ಮತ್ತೆ ಎಂಐಟಿ ಹೆಸರಲ್ಲಿ ವೈರಲ್ ಆಗಿದೆ ಎಂದು ಹೇಳಿದೆ. ಈ ಬಗ್ಗೆ Intrigin Mag ಎನ್ನುವ ವೈರಲ್ ಫ್ಯಾಕ್ಟ್ ಚೆಕ್ ತಂಡ ಹಳೆಯ ವಿಡಿಯೋ ಬಗ್ಗೆ ವರದಿ ಮಾಡಿರುವುದನ್ನು ಉಲ್ಲೇಖ ಮಾಡಿದೆ.

ಡೆಹ್ರಾಡೂನಿನ ಯುಪಿಇಎಸ್ ಯೂನಿವರ್ಸಿಟಿಯಲ್ಲಿ ಘಟನೆ ನಡೆದಿತ್ತು. ಯುವತಿ ಅದೇ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಸಹಪಾಠಿಯ ಜೊತೆಗೆ ಸೂಟ್ ಕೇಸ್ ನಲ್ಲಿ ತೂರಿಕೊಂಡು ಬಂದಿದ್ದಳು. ಆದರೆ ಹಾಸ್ಟೆಲ್ ಗೇಟ್ ನಲ್ಲಿ ಭದ್ರತಾ ಸಿಬಂದಿ ತಡೆದಿದ್ದು, ಸಂಶಯ ಬಂದು ತಪಾಸಣೆ ನಡೆಸಿದಾಗ ಸೂಟ್ ಕೇಸ್ ನಲ್ಲಿ ಹುಡುಗಿ ಪತ್ತೆಯಾಗಿದ್ದಳು. ಇದರ ಸಿಸಿಟಿವಿ ವಿಡಿಯೋ ವೈರಲ್ ಆಗಿತ್ತು ಎಂದು ಮ್ಯಾಗ್ ತಂಡ ಮಾಡಿದ್ದ ವರದಿಯನ್ನು ರಿಪಬ್ಲಿಕ್ ಟಿವಿಯ ಫ್ಯಾಕ್ಟ್ ಚೆಕ್ ವರದಿಯಲ್ಲಿ ಉಲ್ಲೇಖಿಸಿದೆ. 

On February 2, a CCTV recording began doing the rounds on social media alleging that an engineering student from Manipal Institute of Technology (MIT) in Manipal tried to sneak his girlfriend inside a huge travel bag into the MIT hostels. The viral incident was purportedly caught on CCTV, where the student was seen trying to enter the campus premises with a suitcase. The security guard stopped him near the compound after seeing the huge bag. When the student was asked to open the bag, he tried to escape from the spot. Ultimately, the security guard opened the bag, and a girl came out of the bag.