ಬ್ರೇಕಿಂಗ್ ನ್ಯೂಸ್
04-02-22 05:34 pm Mangalore Correspondent ಕರಾವಳಿ
Photo credits : Headline Karnataka
ಉಳ್ಳಾಲ, ಫೆ.4 : ಸೆಕ್ಯುಲರ್ ಸೋಗಲ್ಲಿ ಗೋವಿನ ಬದಲು ಹುಲಿಯನ್ನ ರಾಷ್ಟ್ರ ಪ್ರಾಣಿಯನ್ನಾಗಿಸಿದ್ದು ಗೋವಿನ ದುಸ್ಥಿತಿಗೆ ಕಾರಣ. ಅದರ ಪರಿಣಾಮ ಇಂದು ದೇಶದಲ್ಲಿ ರಕ್ತಪಾತ, ಮತಾಂತರಗಳಂತಹ ದುಷ್ಕೃತ್ಯಗಳು ನಿರಂತರವಾಗಿವೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ , ಆರೆಸ್ಸೆಸ್ ಪ್ರಮುಖ್ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಗುರುವಾರ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯ ವಾರ್ಷಿಕೋತ್ಸವ ಹಾಗೂ ನೂತನ ಗೋಶಾಲೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಹುಲಿಯನ್ನ ರಾಷ್ಟ್ರ ಪ್ರಾಣಿ ಅಂದಾಕ್ಷಣ ಅದನ್ನ ಆರತಿ ಎತ್ತಿ ಪೂಜೆ ಮಾಡಲು ಸಾಧ್ಯವೇ ? ತಾಯಿ ಸಮಾನ ಗೋವಿಗೆ ಮಾತ್ರ ಆ ಪೂಜೆ ಸಲ್ಲಲು ಸಾಧ್ಯ. ಜಾತ್ಯತೀತ ಚಿಂತನೆಯಲ್ಲಿ ಹುಲಿಯನ್ನ ರಾಷ್ಟ್ರ ಪ್ರಾಣಿಯನ್ನಾಗಿ ಘೋಷಿಸಿದ್ದಾರೆಯೇ ಹೊರತು ಅದರ ಮೇಲಿನ ಪ್ರೀತಿಯಿಂದಲ್ಲ. ಭಾರತದ ಜನ ಹೆಚ್ಚು ಪ್ರೀತಿಸಿ ಸಾಕಿದ್ದು ದನವನ್ನು. ಸಾವಿರಾರು ವರ್ಷದಿಂದಲೂ ಗೋವು ನಮ್ಮ ಪೂಜನೀಯ ರಾಷ್ಟ್ರ ಪ್ರಾಣಿಯಾಗಿದೆ ಎಂದರು.
ನಾವಿಂದು ಪುರಾಣದ ಬಕಾಸುರನ ಸಾಮ್ರಾಜ್ಯದ ಹಿಂದೂಗಳಾಗಿದ್ದೇವೆ. ಬಕಾಸುರರ ಆಹಾರಕ್ಕಾಗಿ ನಾವೇ ಖುದ್ದು ನಿತ್ಯ ನಿರಂತರ ಗೋವನ್ನ ಒದಗಿಸುತ್ತಿದ್ದೇವೆ. ನಾವೆಲ್ಲ ವಾಸ್ತವ ಅರಿತು ಎಚ್ಚೆತ್ತುಕೊಂಡು ಗೋವಿನ ರಕ್ಷಣೆಗೆ ಸದೃಢ ಹಿಂದು ಸಮಾಜ ಕಟ್ಟಬೇಕಿದೆ. ಸ್ವದೇಶಿ ಹಸುವಿನ ಹಾಲಿಗಿಂತ ಶ್ರೇಷ್ಠ ಯಾವುದೂ ಇಲ್ಲ. ಅದು ತಾಯಿಯ ಎದೆ ಹಾಲಿನ ಸಮಾನವಾಗಿದ್ದು , ಸ್ವದೇಶಿ ಹಸುಗಳ ವೃದ್ಧಿಗೆ ಶ್ರಮಿಸುತ್ತಿರುವ ಅಮೃತಧಾರ ಗೋಶಾಲೆಯ ಬಗ್ಗೆ ಪ್ರಭಾಕರ ಭಟ್ ಪ್ರಶಂಸೆ ವ್ಯಕ್ತ ಪಡಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಮುಖರಾದ ಪಟ್ಲ ಸತೀಶ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದು, ಸೇವಾ ಮನೋಭಾವ ಬೆಳೆಸಿಕೊಂಡಿರುವ ರಾಜಾರಾಂ ಭಟ್ ಅವರು ಗೋ ಸೇವೆಯ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ದ.ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅಧ್ಯಕ್ಷತೆ ವಹಿಸಿದ್ದರು. ಮಾತಾ ಡೆವಲಪರ್ಸ್ ನ ಮಾಲಕರಾದ ಸಂತೋಷ್ ಶೆಟ್ಟಿ, ಹವ್ಯಕ ಸಂಘದ ಅಧ್ಯಕ್ಷ ನಾಗರಾಜ ಭಟ್ , ಹಿಂದು ಸಂಘಟನೆ ಮುಖಂಡರಾದ ಗಣೇಶ್ ಕೆದಿಲ, ಮಿಥುನ್ ಕಲ್ಲಡ್ಕ, ವಿಜಿತ್ ಶೆಟ್ಟಿ ಉಪಸ್ಥಿತರಿದ್ದರು. ಗೋಶಾಲೆಯ ಸಂಚಾಲಕರಾದ ಟಿ.ಜಿ.ರಾಜಾರಾಮ್ ಭಟ್ ಸ್ವಾಗತಿಸಿ,ಪ್ರಸ್ತಾವಿಸಿದರು.
Mangalore Our cows are slaughtered every day for the meal of Gluttons says Dr Kalladka Prabhakar Bhat speaking at Amruthadara Cow Ashram.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm