ಕೊಚ್ಚಿ ಏರ್ಪೋರ್ಟ್ ನಿಂದ ವಿದೇಶಕ್ಕೆ ಪರಾರಿಯಾಗಲು ಯತ್ನ ; ಕೊರಗಜ್ಜನಿಗೆ ಅವಮಾನಿಸಿದ ಮದುಮಗ ಬಂಧನ 

04-02-22 10:13 pm       HK Desk news   ಕರಾವಳಿ

ಇತ್ತೀಚೆಗೆ ಮದುವೆ ಸಂಭ್ರಮದ ಮಧ್ಯೆ ಕೊರಗಜ್ಜನ ವೇಷ ಹೋಲುವಂತೆ ಬಟ್ಟೆ ತೊಟ್ಟು ವಿವಾದಕ್ಕೆ ಕಾರಣವಾಗಿದ್ದ ಮದುಮಗ ಉಪ್ಪಳ ನಿವಾಸಿ ಉಮರುಲ್ ಬಾಷಿತ್ ವಿದೇಶಕ್ಕೆ ಪಲಾಯನ ಮಾಡುವುದನ್ನು ತಿಳಿದು ಕೊಚ್ಚಿ ಏರ್ಪೋರ್ಟ್ ಬಳಿ ವಿಟ್ಲ ಪೊಲೀಸರು ಬಂಧಿಸಿದ್ದಾರೆ. 

ಬಂಟ್ವಾಳ, ಫೆ.4 : ಇತ್ತೀಚೆಗೆ ಮದುವೆ ಸಂಭ್ರಮದ ಮಧ್ಯೆ ಕೊರಗಜ್ಜನ ವೇಷ ಹೋಲುವಂತೆ ಬಟ್ಟೆ ತೊಟ್ಟು ವಿವಾದಕ್ಕೆ ಕಾರಣವಾಗಿದ್ದ ಮದುಮಗ ಉಪ್ಪಳ ನಿವಾಸಿ ಉಮರುಲ್ ಬಾಷಿತ್ ವಿದೇಶಕ್ಕೆ ಪಲಾಯನ ಮಾಡುವುದನ್ನು ತಿಳಿದು ಕೊಚ್ಚಿ ಏರ್ಪೋರ್ಟ್ ಬಳಿ ವಿಟ್ಲ ಪೊಲೀಸರು ಬಂಧಿಸಿದ್ದಾರೆ. 

ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಬೇಕೂರು ನಿವಾಸಿಯಾಗಿರುವ ಉಮರುಲ್, ಜ.6 ರಂದು ಮದುವೆಯ ದಿನ ಸಾಲೆತ್ತೂರಿನ ವಧುವಿನ ಮನೆಗೆ ಬಂದಿದ್ದ ವೇಳೆ ಕೊರಗಜ್ಜನ ರೀತಿ ವೇಷ ತೊಟ್ಟು ಅಣಕಿಸುವಂತೆ ವರ್ತಿಸಿದ್ದ. ಈ ಬಗ್ಗೆ ಹಿಂದು ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ವಿಟ್ಲ ಠಾಣೆಯಲ್ಲಿ ದೂರು ನೀಡಿದ್ದರು. 

ಪ್ರಕರಣ ದಾಖಲಿಸಿದ ಪೊಲೀಸರು ಉಮರುಲ್ ಸ್ನೇಹಿತರಾದ ಅಹಮದ್ ಮುಜಿತಬ್ ಹಾಗೂ ಮೊಹಿಯುದ್ದೀನ್ ಮುನೀಸ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆಬಳಿಕ ಉಮರುಲ್ ಬಂಧನಕ್ಕೆ ಮುಂದಾಗಿದ್ದರು. ಆದರೆ ಉಮರುಲ್ ತಲೆಮರೆಸಿಕೊಂಡಿದ್ದ. ಇದೀಗ ವಿದೇಶಕ್ಕೆ ಪಲಾಯನ ಮಾಡಲು ಯತ್ನಿಸಿ ಕೊಚ್ಚಿನ್ ಏರ್ಪೋರ್ಟ್ ಬಳಿಯ ನೆಡುಂಬಾಶ್ಶೇರಿ ಎಂಬಲ್ಲಿ ಅಡಗಿಕೊಂಡಿದ್ದ. 

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿದ ವಿಟ್ಲ ಪೊಲೀಸರು, ಆರೋಪಿ ಉಮರುಲ್ ನನ್ನು ಬಂಧಿಸಿದ್ದಾರೆ. ‌ಮದುವೆ ಸಂಭ್ರಮದಲ್ಲಿ ಕೊರಗಜ್ಜನ ರೀತಿ ವೇಷ ತೊಟ್ಟು ವಿಕೃತವಾಗಿ ವರ್ತಿಸಿದ್ದ ವಿಡಿಯೋ ಒಂದು ತಿಂಗಳ ಹಿಂದೆ ವೈರಲ್ ಆಗಿತ್ತು.‌

It is learnt that Umarul Bashith, main accused in the case relating to mockery of Tulunadu Daiva Koragajja by a group of youths belonging to other community, is arrested by airport officials of Nadumban Cheri at Kochi in Kerala.