ಬ್ರೇಕಿಂಗ್ ನ್ಯೂಸ್
05-02-22 02:14 pm HK Desk news ಕರಾವಳಿ
ಪುತ್ತೂರು, ಫೆ.5 : ಹಿರಿಯ ಪತ್ರಕರ್ತ, ಪುತ್ತೂರಿನಲ್ಲಿ ಉದಯವಾಣಿ ಪತ್ರಿಕೆಯನ್ನು ಜನಪ್ರಿಯರಾಗಿಸಿದ್ದ ಬಿ.ಟಿ ರಂಜನ್ (60) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಎರಡು – ಮೂರು ದಿನಗಳಿಂದ ಶೀತ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ರಂಜನ್ ಅವರಿಗೆ ಗುರುವಾರ ರಾತ್ರಿ ಆರೋಗ್ಯದಲ್ಲಿ ಏರುಪೇರು ಕಾಣಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯಾಹ್ನದ ವೇಳೆ ಆರೋಗ್ಯ ಇನ್ನಷ್ಟು ವಿಷಮಿಸಿದ ಕಾರಣ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಐದು ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ.
ಕಳೆದ 36 ವರ್ಷಗಳಿಂದ ಪುತ್ತೂರಿನಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಅವರು ಕರಾವಳಿಯ ವಿವಿಧ ಪತ್ರಿಕೆಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದರು. ಮುಂಗಾರು ಪತ್ರಿಕೆಯಿಂದ ಕೆಲಸ ಆರಂಭಿಸಿ, ಬಳಿಕ ಹೊಸದಿಗಂತ, ಆನಂತರ ಉದಯವಾಣಿ ಸೇರಿದ್ದ ಉಪ್ಪಿನಂಗಡಿ ರಥಬೀದಿ ನಿವಾಸಿ ಬಿ.ಟಿ.ರಂಜನ್, ಅದರಲ್ಲಿ ಸುದೀರ್ಘ 26 ವರ್ಷ ಕಾಲ ದುಡಿದಿದ್ದರು. ಪುತ್ತೂರು ಸುದಿನ ಪುಟದ ಮೂಲಕ ಜನಮಾನಸಕ್ಕೆ ಹತ್ತಿರವಾಗಿದ್ದರು. ಉದಯವಾಣಿ ಪುತ್ತೂರಿನಲ್ಲಿ ಪ್ರಸಾರ ಹೆಚ್ಚಿಸಲು ಮತ್ತು ಜನಮನ ಮುಟ್ಟುವಲ್ಲಿ ರಂಜನ್ ಬರಹಗಳು ಕಾರಣವಾಗಿದ್ದವು.
2017ರಲ್ಲಿ ಉದಯವಾಣಿಯಿಂದ ನಿವೃತ್ತರಾಗಿದ್ದ ರಂಜನ್, ಆಬಳಿಕ ಹೊಸದಿಗಂತ ಪತ್ರಿಕೆಗೆ ವರದಿಗಾರರಾಗಿದ್ದರು. ಪುತ್ತೂರು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ರಂಜನ್ ಕಾರ್ಯ ನಿರ್ವಹಿಸಿದ್ದರು. ಮೂರು ದಶಕಕ್ಕೂ ಹೆಚ್ಚಿನ ಪತ್ರಿಕಾ ಸೇವೆಗಾಗಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಪ್ರಶಸ್ತಿ ಸನ್ಮಾನಗಳು ಸಂದಿವೆ.
Puttur Senior Journalist B T Ranjan passes away at 60. Since two to there days he was suffering from Cold and Cough but he breathed his last at Puttur Hospital.
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
07-09-26 01:22 pm
HK News Staffer
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
07-09-26 02:06 pm
HK News Staffer
ಪರವಾನಗಿ ಇಲ್ಲದೆ ಔಷಧಿ ದಾಸ್ತಾನು ; ಬೆಂಗಳೂರಿನ ಅಮೆಜ...
06-09-26 10:28 pm
ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಆರೋಪ ; ಹೈಕೋರ್ಟಿಗೆ...
06-09-26 06:11 pm
ತಾನು ಐಎಎಸ್ ಅಧಿಕಾರಿ, ಪ್ರವಾಸೋದ್ಯಮ ಇಲಾಖೆಯ ಹೊಟೇಲ...
05-09-26 08:58 pm
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm