ಬ್ರೇಕಿಂಗ್ ನ್ಯೂಸ್
06-02-22 11:10 pm Giridhar Shetty, Mangaluru Correspondent (Video: Santosh) ಕರಾವಳಿ
Photo credits : Headline Karnataka
ಮಂಗಳೂರು, ಫೆ.6 : ಪಂಜಿಮೊಗರಿನ ಉರುಂದಾಡಿಯ ಖುರ್ಸುಗುಡ್ಡೆಯಲ್ಲಿ ಪ್ರಾರ್ಥನಾ ಕೇಂದ್ರ ಒಡೆದಿರುವ ಬಗ್ಗೆ ತಕರಾರು ಎದ್ದಿದೆ. ಕ್ರಿಸ್ತಿಯನ್ನರ ಪ್ರಕಾರ, ಅಲ್ಲಿ 40 ವರ್ಷಗಳಿಂದಲೂ ಹೋಲಿ ಕ್ರಾಸ್ ಇದೆಯಂತೆ. ಸ್ಥಳೀಯ ಕಟ್ಟಡದಲ್ಲಿ ಪ್ರಾರ್ಥನೆ ನಡೆಸುತ್ತಿದ್ದರಂತೆ. ಈಗಲೂ ಹಳೆಯ ಹೋಲಿ ಕ್ರಾಸ್ ಸ್ಥಳದಲ್ಲಿದೆ. ಆದರೆ, ಈಗ ವಿವಾದಕ್ಕೆ ಕಾರಣವಾಗಿದ್ದು ಅಲ್ಲಿದ್ದ ಹಳೆಯ ಕಟ್ಟಡ ಒಂದನ್ನು ಏಕಾಏಕಿ ಕೆಡವಿ ಹಾಕಿದ್ದು. ಈ ಬಗ್ಗೆ ಸ್ಥಳೀಯರಲ್ಲಿ ಕೇಳಿದರೆ ಬೇರೆಯದ್ದೇ ಮಾತು ಹೇಳುತ್ತಾರೆ.
ಉರುಂದಾಡಿಯಲ್ಲಿ ಹಿಂದಿನಿಂದಲೂ ಅಂಗನವಾಡಿ ಇತ್ತಂತೆ. ಸರಕಾರಿ ಜಾಗದಲ್ಲಿ ಅಂಗನವಾಡಿ ಕಟ್ಟಡ ಇದ್ದರೂ, ಅದನ್ನು ಕ್ರಿಸ್ತಿಯನ್ನರೇ ನೋಡಿಕೊಂಡಿದ್ದರು. ಕಟ್ಟಡದ ಒಂದು ಬದಿಯಲ್ಲಿ ಅಂಗನವಾಡಿ, ಮತ್ತೊಂದು ಬದಿಯಲ್ಲಿ ಪ್ರಾರ್ಥನೆಗೆಂದು ಕೊಠಡಿ ಇತ್ತಂತೆ. ಆದರೆ ಕಟ್ಟಡವು ಶಿಥಿಲವಾಗಿದ್ದರಿಂದ ಹೊಸತಾಗಿ ಕಟ್ಟಲು ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಇತ್ತೀಚೆಗೆ ಸರ್ವೆ ನಡೆಸಲಾಗಿತ್ತು. ಸರಕಾರಿ ಜಾಗದಲ್ಲೇ ಅಂಗನವಾಡಿ ಕಟ್ಟಡ ಇರುವುದರಿಂದ ಹೊಸತಾಗಿ ಕಟ್ಟಡ ನಿರ್ಮಾಣಕ್ಕೆ 16 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಅದಕ್ಕಾಗಿ ಟೆಂಡರ್ ಕೂಡ ಆಗಿತ್ತು ಎನ್ನಲಾಗುತ್ತಿದೆ.
ಅದರಂತೆ, ಶನಿವಾರ ಮಧ್ಯಾಹ್ನ ಟೆಂಡರ್ ಪಡೆದ ಗುತ್ತಿಗೆದಾರ ಜೆಸಿಬಿ ತಂದು ಹಳೆ ಕಟ್ಟಡವನ್ನು ಕೆಡವಿ ಹಾಕಿದ್ದಾರೆ. ಆದರೆ ಯಾರು ಕೆಡವಿ ಹಾಕಿದ್ದೆಂದು ನಮಗೆ ಗೊತ್ತಿಲ್ಲ ಎನ್ನುತ್ತಾರೆ, ಸ್ಥಳೀಯರು. ಏಕಾಏಕಿ ಬಂದು ಕಟ್ಟಡವನ್ನು ಕೆಡವಿದ್ದು ಸ್ಥಳೀಯ ಕ್ರಿಸ್ತಿಯನ್ನರನ್ನು ಕೆರಳಿಸಿದೆ. ಕಟ್ಟಡದ ಒಳಗೆ ಶಿಲುಬೆ ಕ್ರಾಸ್ ಇತ್ತು. ಪವಿತ್ರ ಬೈಬಲ್ ಇತ್ತು. ಅದನ್ನು ತೆರವು ಮಾಡದೇ ಏಕಾಏಕಿ ಕೆಡವಿ ಹಾಕಿದ್ದಾರೆ. ನಾವು ಏನು ಪಾಪ ಮಾಡಿದ್ದೇವೆ ಎಂದು ಸ್ಥಳೀಯ ಕ್ರಿಸ್ತಿಯನ್ನರು ಆತಂಕ ತೋಡಿಕೊಂಡಿದ್ದಾರೆ.
ಸ್ಥಳೀಯ ಹಿಂದುಗಳು ಮಾತ್ರ, ನಮಗೆ ಅಂಗನವಾಡಿ ಬೇಕೇ ಬೇಕು ಘೋಷಣೆ ಕೂಗಿದ್ದಾರೆ. ಇಲ್ಲಿ ಮಕ್ಕಳಿಗೆ ಅಂಗನವಾಡಿ ಇತ್ತು. 30 ವರ್ಷಕ್ಕಿಂತಲು ಹೆಚ್ಚು ಕಾಲದಿಂದ ಅಂಗನವಾಡಿ ಇತ್ತು. ಇನ್ನೊಂದು ಬದಿಯಲ್ಲಿ ಕೆಲವೊಮ್ಮೆ ವಿಶೇಷ ದಿನಗಳಲ್ಲಿ ಕ್ರಿಸ್ತಿಯನ್ನರು ಪ್ರಾರ್ಥನೆ ಮಾಡುತ್ತಿದ್ದರು. ಅಲ್ಲದೆ, ಸ್ಥಳೀಯರಿಗೆ ಮದುವೆ, ಡಿನ್ನರ್ ಮಾಡುವುದಕ್ಕೆ ಅದೇ ಕಟ್ಟಡವನ್ನು ಬಾಡಿಗೆಗೂ ಕೊಡುತ್ತಿದ್ದರು. ಸ್ಥಳೀಯ ಹಲವರ ಮದುವೆ ಅದೇ ಕಟ್ಟಡದಲ್ಲಿ ನಡೆದಿತ್ತು. ನಾವು ಅವರಿಗೆ ಬಾಡಿಗೆ ಹಣ ಕೊಟ್ಟು ಮದುವೆ, ಇನ್ನಿತರ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು. ಹಗಲಲ್ಲಿ ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಬರುತ್ತಿದ್ದರು. ರಾತ್ರಿ ವೇಳೆ ಇತರೇ ಕಾರ್ಯಕ್ರಮಗಳು ಏರ್ಪಾಡಾಗುತ್ತಿದ್ದವು. ಸ್ಥಳೀಯ ಮನೆಗಳಲ್ಲಿ ಅಂಗಳ ಇರದೇ ಇರುವುದರಿಂದ ಫಂಕ್ಷನ್ ಇಲ್ಲಿಯೇ ಮಾಡುತ್ತಿದ್ದೆವು ಎಂದು ಸ್ಥಳೀಯ ಮಹಿಳೆಯರು ಹೇಳಿದರು.
ಇಲ್ಲಿ ಕ್ರಾಸ್ ಇರುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಹಿಂದಿನಿಂದಲೂ ಇತ್ತು. ಆ ರೀತಿಯ ಭಾವನೆಯಿಂದ ನಾವು ಈ ಕಟ್ಟಡ ಒಡೆದು ಹಾಕಿದ್ದರೆ, ಈ ಕ್ರಾಸ್ ಒಡೆಯುತ್ತಿರಲಿಲ್ಲವೇ.. ನಾವು ಕಟ್ಟಡ ಒಡೆದು ಹಾಕಿಲ್ಲ. ಟೆಂಡರ್ ಪಡೆದವರು ಏಕಾಏಕಿ ಬಂದು ಒಡೆದು ಹಾಕಿದ್ದಾರೆ. ಆನಂತರ, ಕ್ರಿಸ್ತಿಯನ್ ಬಂದು ಅಡ್ಡ ಹಾಕಿದ್ದಾರೆ. ಇಲ್ಲಿ ಅಂಗನವಾಡಿ ಕಟ್ಟಡ ಮೊದಲಿನಂತೇ ಆಗಬೇಕು. ಹೋಲಿ ಕ್ರಾಸ್ ಹಾಗೇ ಇರಲಿ ಎಂದು ಸ್ಥಳೀಯ ಹಿಂದುಗಳು ಹೇಳುತ್ತಾರೆ. ವಿವಾದಿತ ಜಾಗದ ಸುತ್ತಮುತ್ತ ಹಿಂದುಗಳ ಮನೆಯೇ ಇದ್ದು, ನಡುವೆ ಇರುವ ಹೋಲಿ ಕ್ರಾಸ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿಲ್ಲ.
ಅಲ್ಲಿ ಇತ್ತೀಚೆಗೆ ಅಧಿಕಾರಿಗಳು ಬಂದು ಸರ್ವೆ ಮಾಡಿದ್ದು ಕಂಡುಬರುತ್ತಿದೆ. ನಡುವೆ ಮಾರ್ಕ್ ಹಾಕಿದ ಜಾಗ ಇದ್ದು, ಅದು ಕ್ರಿಸ್ತಿಯನ್ನರಿಗೆ ಸೇರಿದ ಮೂರೂವರೆ ಸೆಂಟ್ ವರ್ಗ ಜಾಗವಂತೆ. ಮತ್ತೊಂದು ಕಡೆ ಸಮತಟ್ಟು ಮಾಡಿದ ಜಾಗ ಇದ್ದು, ಅಲ್ಲಿ ಕೋರ್ದಬ್ಬು, ಗುಳಿಗ ದೈವದ ಕಟ್ಟೆ ಇದೆ. ಹಿಂದಿನಿಂದಲೂ ಕಟ್ಟೆ ಇತ್ತು. ಅದನ್ನೀಗ ನವೀಕರಣ ಮಾಡಿದ್ದೇವೆ ಎನ್ನುತ್ತಾರೆ, ಸ್ಥಳೀಯರು. ಪಕ್ಕದ ಇನ್ನೊಂದು ಭಾಗದಲ್ಲಿ ಹೋಲಿ ಕ್ರಾಸ್ ಇದ್ದು, ಅದರ ಎದುರಲ್ಲಿ ನೆಲಸಮ ಆಗಿರುವ ಅಂಗನವಾಡಿ ಕಟ್ಟಡದ ಅವಶೇಷ ಇದೆ. ಪ್ರಾರ್ಥನಾ ಕೇಂದ್ರವೂ ಅದರೊಳಗಿತ್ತಂತೆ.
ಸದ್ಯಕ್ಕೆ ಜಾಗದ ವಿಚಾರದಲ್ಲಿ ಕ್ರಿಸ್ತಿಯನ್ ಮತ್ತು ಹಿಂದುಗಳ ನಡುವೆ ತಕರಾರು ಎದ್ದಿದೆ. ಕಟ್ಟಡ ಕೆಡವಿ ಹಾಕಿದ್ದು ಕ್ರಿಸ್ತಿಯನ್ನರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಹತ್ತಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಶಾಸಕ ಭರತ್ ಶೆಟ್ಟಿ ಬಂದು ಪರಿಶೀಲನೆ ನಡೆಸಿದ್ದಾರೆ. ರಾಜಕೀಯದ ಲೇಪ ಹತ್ತಿಕೊಳ್ಳುವ ಮುನ್ನ ಸ್ಥಳೀಯರ ಅಹವಾಲು ಆಲಿಸಿ, ಸಮಸ್ಯೆ ಬಗೆಹರಿಸುವ ಕೆಲಸ ಆಗಬೇಕಿದೆ.
Mangalore Prayer centre of Antony Church demolished at of Kulur reality check by HK media. A prayer centre building, compound wall and trees surrounding the property was allegedly razed to the ground at Panjimogaru here on Saturday February 5. It is alleged that Shri Satya Korddabbu Seva Samithi, violating the stay order from the court, entered the compound of the prayer center, and demolished the building, compound wall, and trees.
02-10-25 02:28 pm
Bangalore Correspondent
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
01-10-25 09:44 pm
HK News Desk
Cough Syrup Side Effects Suspected, Kidney Fa...
01-10-25 05:32 pm
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
02-10-25 11:43 am
Mangalore Correspondent
Mangalore, Pilinalike 2025: ಪಿಲಿನಲಿಕೆ ಉತ್ಸವಕ್...
01-10-25 11:00 pm
Jayanth, Chinnayya, Dharmasthala Case: ಚಿನ್ನಯ...
01-10-25 04:45 pm
ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ತಂಡದ ಮುಡಿಗೇರಿದ ಕು...
01-10-25 03:35 pm
ಮಂಗಳೂರು ಪೂರ್ತಿ ಝಗಮಗ ; ಕೋಟಿ ಕೋಟಿ ಮಿನಿಚರ್ ಅಳವಡಿ...
30-09-25 10:57 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm