ಬ್ರೇಕಿಂಗ್ ನ್ಯೂಸ್
08-02-22 11:44 am HK Desk news ಕರಾವಳಿ
ಉಡುಪಿ, ಫೆ.8 : ಉಡುಪಿ ಎಂಜಿಎಂ ಕಾಲೇಜು ಆವರಣದಲ್ಲಿ ಕೇಸರಿ ಮತ್ತು ಹಿಜಾಬ್ ಕಿಚ್ಚು ತೀವ್ರಗೊಂಡಿದ್ದು ವಿದ್ಯಾರ್ಥಿಗಳು ಹೈಡ್ರಾಮಾ ನಡೆಸಿದ್ದಾರೆ. ನೂರಾರು ವಿದ್ಯಾರ್ಥಿಗಳು ಕೇಸರಿ ತೊಟ್ಟು ಕಾಲೇಜು ಒಳಗೆ ಲಗ್ಗೆ ಇಟ್ಟಿದ್ದು ಮುಸ್ಲಿಂ ವಿದ್ಯಾರ್ಥಿನಿಯರ ಮುಂದೆಯೇ ಹಿಜಾಬ್ ತೆಗೆಯುವಂತೆ ಪಟ್ಟು ಹಿಡಿದಿದ್ದಾರೆ.
ಎರಡೂ ಕಡೆಯಿಂದ ವಿದ್ಯಾರ್ಥಿಗಳು ಗುಂಪು ಸೇರಿದ್ದು ಪರಸ್ಪರ ಮಾತಿನ ಚಕಮಕಿ ನಡೆಸಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರು, ತಮಗೆ ಹಿಜಾಬ್ ಬೇಕೆಂದು ಘೋಷಣೆ ಕೂಗಿದರೆ, ಹಿಂದು ವಿದ್ಯಾರ್ಥಿಗಳು ವಿರೋಧಿ ಘೋಷಣೆ ಕೂಗಿದ್ದಾರೆ. ವಿದ್ಯಾರ್ಥಿಗಳು ಕೇಸರಿ ಪೇಟ, ಕೇಸರಿ ಶಾಲು ಹಾಕಿಕೊಂಡು ಕಾಲೇಜು ಒಳನುಗ್ಗಿದ್ದು ಕಾಲೇಜು ಆವರಣದಲ್ಲಿ ಕೇಸರಿ ಕಲರವ ಎದ್ದಿದೆ. ವಿದ್ಯಾರ್ಥಿಗಳು ತಮ್ಮ ಕೇಸರಿ ಶಾಲನ್ನು ಬೀಸಿಕೊಂಡು ಓಡಾಡುತ್ತಿದ್ದು ಕ್ಯಾಂಪಸ್ ಒಳಗೆ ಗಲಾಟೆ ಎದ್ದಿದೆ. ಕಾಲೇಜಿನ ಪ್ರಾಂಶುಪಾಲ ದೇವಿದಾಸ್ ನಾಯಕ್ ಮತ್ತು ಇತರ ಸಿಬಂದಿ ಸೇರಿ ವಿದ್ಯಾರ್ಥಿಗಳ ಮನವೊಲಿಕೆ ಮಾಡುತ್ತಿದ್ದಾರೆ.


ಇದೇ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು, ನಾವು ಕಳೆದ ಐದು ವರ್ಷದಿಂದಲೂ ಹಿಜಾಬ್ ಹಾಕಿಯೇ ಬರುತ್ತಿದ್ದೆವು. ಈವರೆಗೂ ಹಿಜಾಬ್ ಹಾಕಬಾರದು ಎಂದು ಕಾಲೇಜಿನಲ್ಲಿ ಯಾರೂ ಹೇಳಿಲ್ಲ. ಇತರ ವಿದ್ಯಾರ್ಥಿಗಳು ಕೂಡ ಹೇಳಿಲ್ಲ. ಈಗ ಸಡನ್ನಾಗಿ ಇಂಥ ವಾತಾವರಣ ಉಂಟು ಮಾಡಿದ್ದಾರೆ. ನಾವು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.



ಉಳಿದಂತೆ ಕಳೆದ ವಾರ ಹಿಜಾಬ್ ಗಲಾಟೆ ನಡೆದಿದ್ದ ಉಡುಪಿ, ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ಇಂದು ಬಿಸಿ ಸ್ವಲ್ಪ ತಣ್ಣಗಾಗಿದೆ. ಕುಂದಾಪುರದ ಕಾಲೇಜಿನಲ್ಲಿ ಎರಡು ದಿನಗಳ ಹಿಂದೆ ರಂಪ ಮಾಡಿದ್ದ ವಿದ್ಯಾರ್ಥಿನಿಯರು ಕಾಲೇಜಿಗೆ ರಜೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಹೈಕೋರ್ಟಿನಲ್ಲಿ ವಿಚಾರಣೆ ಇರುವುದರಿಂದ ಕಾಲೇಜು ಪ್ರಾಂಶುಪಾಲರೇ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಬರದಂತೆ ಸೂಚಿಸಿದ್ದಾರೆಂಬ ಮಾಹಿತಿಯೂ ಇದೆ.
The Muslim girl students of MGM College here have kept the Hijab controversy alive by refusing to obey the instructions of the principal. The girl students wearing burqas and Hijab entered the college located at Manipal here on Monday February 8. They held a protest inside the college premises and raised slogans asserting that wearing of Hijabs is within their rights.
01-04-26 12:28 pm
HK News Staffer
ಕೇರಳದಲ್ಲಿ ಮಹಿಳೆಗೆ ಸಿಎಂ ಸ್ಥಾನ, ಉಚಿತ ಸಾರಿಗೆ ಪ್ರ...
31-03-26 10:13 am
ತಮಿಳುನಾಡಿನಲ್ಲಿ ಬಿಜೆಪಿ ಸೀಟು ಹಂಚಿಕೆಯಲ್ಲಿ ಲೋಪ ;...
29-03-26 10:19 am
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
01-04-26 12:46 pm
HK News Staffer
ಯುದ್ಧ ವಿರಾಮ ಉಲ್ಲಂಘಿಸಿ ಇರಾನ್ ಅಣು ಸ್ಥಾವರಕ್ಕೆ ಬಾ...
31-03-26 11:00 pm
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
ಗಲ್ಫ್ ಯುದ್ಧ ಎಫೆಕ್ಟ್ ; ಡಾಲರ್ ಮುಂದೆ ರುಪಾಯಿ ಮಹಾಪ...
30-03-26 10:31 pm
31-03-26 10:06 pm
HK News Desk
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಿಂದ ಹೊರಬಿದ್...
31-03-26 03:01 pm
ಮಂಗಳೂರು ಬಂದರಿಗೆ ಬರಲಿದೆ ಮತ್ತೆರಡು ಎಲ್ಪಿಜಿ ಹೊತ್ತ...
30-03-26 11:13 pm
01-04-26 02:54 pm
HK News Staffer
ಕುಂಜತ್ ಬೈಲಿನಲ್ಲಿ ಫಲ್ಗುಣಿ ನದಿಗೆ ಬಿದ್ದು ಇಬ್ಬರು...
01-04-26 02:16 pm
ಜೈಲಿನಲ್ಲಿದ್ದ ಪತಿಯ ನೋಡಲು ಖಾಸಗಿ ಅಂಗದಲ್ಲಿ ಡ್ರಗ್ಸ...
31-03-26 11:11 am
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm