ಬ್ರೇಕಿಂಗ್ ನ್ಯೂಸ್
08-02-22 04:47 pm Mangalore Correspondent ಕರಾವಳಿ
ಉಳ್ಳಾಲ, ಫೆ.8 : ದುಬಾಯಿಗೆ ತೆರಳುತ್ತೇನೆಂದು ಸ್ನೇಹಿತರು ಮತ್ತು ಮನೆಯವರಲ್ಲಿ ಹೇಳಿ ಹೊರಟಿದ್ದ ತೊಕ್ಕೊಟ್ಟಿನ ಖ್ಯಾತ ಸಿವಿಲ್ ಆರ್ಕಿಟೆಕ್ಟ್ ಸುರೇಶ್ ಸಾಲ್ಯಾನ್(48) ಸೋಮೇಶ್ವರದ ಕಡಲಿಗೆ ಹಾರಿ ಆತ್ಮಹತ್ಯೆಗೈದಿದ್ದಾರೆ.
ಸುರೇಶ್ ಅವರು ಸೋಮವಾರ ರಾತ್ರಿ ದುಬೈಗೆ ತೆರಳುತ್ತೇನೆಂದು ಹೇಳಿ ಕೊಲ್ಯದ ತನ್ನ ಮನೆಯಿಂದ ಹೊರಟವರು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆಯ ಕೆಳಗಡೆ ಅವರು ಧರಿಸುತ್ತಿದ್ದ ಚಪ್ಪಲಿ ಪತ್ತೆಯಾಗಿತ್ತು. ಮಧ್ಯಾಹ್ನದ ವೇಳೆ ಸುರೇಶ್ ಮೃತದೇಹ ರುದ್ರಪಾದೆಯ ಸಮೀಪ ಕಡಲ ತೀರಕ್ಕೆ ಅಪ್ಪಳಿಸಿದ್ದು ಕರಾವಳಿ ಕಾವಲು ಪಡೆಯ ಈಜು ರಕ್ಷಕರಾದ ಅಶೋಕ್ ಸೋಮೇಶ್ವರ, ಕಿರಣ್ ಆಂಟನಿ ಸೇರಿ ಮೃತದೇಹವನ್ನ ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ಕಳೇಬರವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮೂಲತಃ ಕುತ್ತಾರು ತೇವುಳ ನಿವಾಸಿಯಾಗಿದ್ದ ಸುರೇಶ್ ಅವರು ಬಡ ಕುಟುಂಬದವರಾಗಿದ್ದು ಸಿವಿಲ್ ಆರ್ಕಿಟೆಕ್ಟ್ ಆಗಿ ಹಂತ ಹಂತವಾಗಿ ಬೆಳೆದು ತೊಕ್ಕೊಟ್ಟು, ಉಳ್ಳಾಲ ಪರಿಸರದಲ್ಲಿ ಖ್ಯಾತಿಯನ್ನ ಪಡೆದಿದ್ದಲ್ಲದೆ ಸಾಕಷ್ಟು ಸಿರಿವಂತಿಕೆ ಗಳಿಸಿದ್ದರು. ಸಿವಿಲ್ ಕಟ್ಟಡ ಕಾಮಗಾರಿ ಗುತ್ತಿಗೆಯನ್ನೂ ನಿರ್ವಹಿಸುತ್ತಿದ್ದ ಅವರು ಇತ್ತೀಚೆಗೆ ಕೊಲ್ಯದಲ್ಲಿ ನೂತನ ಐಷಾರಾಮಿ ಮನೆಯನ್ನೂ ಕಟ್ಟಿದ್ದರು.
ಅಕ್ರಮ ಸಂಬಂಧಕ್ಕೆ ದುರಂತ ಅಂತ್ಯ...?
ಸುರೇಶ್ ಅವರಿಗೆ ಪತ್ನಿ , ಮಗಳು, ಮಗ ಇದ್ದಾರೆ. ಸುರೇಶ್ ಅವರ ದಾಂಪತ್ಯದಲ್ಲಿ ವಿರಹ ಮೂಡಿದ್ದು ವಿಚ್ಚೇದನಕ್ಕಾಗಿ ಸುರೇಶ್ ಅವರೇ ಕೋರ್ಟ್ ಮೆಟ್ಟಿಲೇರಿದ್ದರು. ಈ ನಡುವೆ ಕೆಲವರ ಮಧ್ಯಸ್ಥಿಕೆಯಿಂದ ಪತಿ- ಪತ್ನಿ ಮತ್ತೆ ಒಂದಾಗಿ ಬಾಳುವ ನಿರ್ಧಾರಕ್ಕೆ ಬಂದಿದ್ದರು. ಇವರದ್ದು ಲವ್ ಮ್ಯಾರೇಜ್ ಆಗಿದ್ದರೂ, ದಂಪತಿ ನಡುವೆ ಕಲಹಕ್ಕೆ ಕಾರಣವಾಗಿದ್ದು ಸುರೇಶ್ ಸಾಲ್ಯಾನ್ ಅಕ್ರಮ ಸಂಬಂಧ. ಎರಡು ಮಕ್ಕಳ ತಾಯಿಯಾಗಿರುವ ಮಹಿಳೆಯ ಜೊತೆ ಕೊಣಾಜೆಯ ಗ್ರಾಮ ಚಾವಡಿ ಎಂಬಲ್ಲಿ ಸುರೇಶ್ ಅಕ್ರಮ ಸಂಬಂಧ ಹೊಂದಿರುವುದು ಪತ್ನಿಗೆ ತಿಳಿದು ಗಲಾಟೆ ಆಗಿತ್ತು.

ಆನಂತರ ಸುರೇಶ್ ವಿಪರೀತ ಖಿನ್ನತೆಗೆ ಒಳಗಾಗಿ ಆರೋಗ್ಯದಲ್ಲೂ ಸೊರಗಿ ಹೋಗಿದ್ದರು. ಸೋಮವಾರ ತೊಕ್ಕೊಟ್ಟಿನ ತನ್ನ ಪ್ಲ್ಯಾನಿಂಗ್ ಪ್ಯಾಲೇಸ್ ಕಚೇರಿಯಲ್ಲಿ ಸ್ನೇಹಿತರು ಮತ್ತು ಪಾಲುದಾರರಲ್ಲಿ ಮಾತನಾಡುತ್ತಿದ್ದ ವೇಳೆ ಮೂರು ತಿಂಗಳ ಮಟ್ಟಿಗೆ ದುಬೈಗೆ ತೆರಳುವುದಾಗಿ ಹೇಳಿದ್ದರು. ರಾತ್ರಿ ತನ್ನ ಕಾರನ್ನ ಕೊಲ್ಯದ ಮನೆಯಲ್ಲಿಟ್ಟು ಪತ್ನಿ ಮತ್ತು ಮಕ್ಕಳಲ್ಲೂ ದುಬೈಗೆ ತೆರಳುತ್ತಿರುವುದಾಗಿ ಹೇಳಿದ್ದರು. ಮಕ್ಕಳು ಕೂಡ ಅಪ್ಪನ ದುಬೈ ತೆರಳುವ ನಿರ್ಧಾರ ಕೇಳಿ ವಿಚಲಿತರಾಗಿದ್ದರು.

ತನ್ನ ಕಾರು ಮತ್ತು ಮೈಯಲ್ಲಿದ್ದ ಒಡವೆಗಳನ್ನ ಮನೆಯಲ್ಲೇ ಬಿಟ್ಟು ತೆರಳಿದ್ದ ಸುರೇಶ್ ಅವರು ಸೋಮವಾರ ರಾತ್ರಿ 12 ರ ನಂತರ ಯಾರ ಸಂಪರ್ಕಕ್ಕೂ ದೊರಕದೆ ನಾಪತ್ತೆಯಾಗಿದ್ದರು. ಇದೀಗ ಶವ ಪತ್ತೆಯಾಗಿದ್ದು ಖ್ಯಾತ ಆರ್ಕಿಟೆಕ್ಟ್ ಆಗಿ ಸಾಕಷ್ಟು ಸಿರಿವಂತಿಕೆಯಿಂದ ಬಾಳಿದ್ದ ಸುರೇಶ್ ದುಬೈ ಹೋಗುವ ನೆಪದಲ್ಲಿ ಕಡಲಿಗೆ ಹಾರಿ ಪ್ರಾಣ ಆಹುತಿ ತೆಗೆದುಕೊಂಡಿದ್ದು ತೊಕ್ಕೊಟ್ಟಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
Mangalore 48-year-old Man body found in Someshwar beach, suicide suspected. The deceased has been identified as Suresh Salian who is a resident of Kuthar and a Architect by profession. He had informed his family members that he was leaving to Dubai.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm