ಬ್ರೇಕಿಂಗ್ ನ್ಯೂಸ್
11-02-22 05:10 pm HK Desk news ಕರಾವಳಿ
ಪಡುಬಿದ್ರಿ, ಫೆ.11 : ಸಾಫ್ಟ್ ವೇರ್ ಕಂಪನಿಯಲ್ಲಿ ಟೆಕ್ಕಿಯಾಗಿ ಉದ್ಯೋಗದಲ್ಲಿದ್ದ 22 ವರ್ಷದ ಯುವತಿಯೊಬ್ಬಳು ತನ್ನ ಮನೆಯಲ್ಲಿ ಸೀರೆಯನ್ನೇ ಕುತ್ತಿಗೆಗೆ ಕುಣಿಕೆಯಾಗಿಸಿ ಸಾವಿಗೆ ಶರಣಾಗಿರುವ ಘಟನೆ ಪಡುಬಿದ್ರಿಯ ಬ್ರಹ್ಮಸ್ಥಾನದ ಬಳಿ ನಡೆದಿದೆ.
ಬ್ರಹ್ಮಸ್ಥಾನದ ಬಳಿ ಮನೆಯನ್ನು ಹೊಂದಿರುವ ಸೌಜನ್ಯಾ (22) ಮೃತ ಯುವತಿ. ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಕೆಲಸಕ್ಕಿದ್ದ ಯುವತಿ ಕೊರೊನಾ ಲಾಕ್ಡೌನ್ ಕಾರಣದಿಂದ ಕಳೆದ ಹತ್ತು ತಿಂಗಳಿನಿಂದ ಮನೆಯಲ್ಲೇ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಳು. ಮನೆಯ ಕೊಠಡಿಯಲ್ಲೇ ಹೆಚ್ಚು ಕಾಲ ಇರುತ್ತಿದ್ದ ಯುವತಿ, ಅಲ್ಲಿಂದಲೇ ತನ್ನ ಕಂಪನಿಯ ಕೆಲಸವನ್ನು ಮಾಡುತ್ತಿದ್ದಳು.
ಗುರುವಾರ ಮಧ್ಯಾಹ್ನ ತಂದೆ, ತಾಯಿ ಸುರತ್ಕಲ್ಲಿನ ನೆಂಟರ ಮನೆಗೆಂದು ತೆರಳಿದ್ದು, ಸಂಜೆ ವೇಳೆಗೆ ಹಿಂತಿರುಗಿ ಬಂದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿದೆ. ಸೀರೆಯನ್ನು ಫ್ಯಾನಿಗೆ ಕಟ್ಟಿ ಅದನ್ನೇ ಕುತ್ತಿಗೆಗೆ ಬಿಗಿದುಕೊಂಡು ಸಾವಿಗೆ ಶರಣಾಗಿದ್ದಳು. ಈ ವೇಳೆ, ಮನೆಯಲ್ಲಿ ಅಜ್ಜಿ ಒಬ್ಬರಿದ್ದು, ಅವರಿಗೆ ವಿಷಯವೇ ಗೊತ್ತಿರಲಿಲ್ಲ. ಎಂದಿನಂತೆ ಸೌಜನ್ಯಾ ರೂಮ್ ಒಳಗೆ ಕೆಲಸ ಮಾಡುತ್ತಿದ್ದಾಳೆ ಎಂದುಕೊಂಡಿದ್ದರು. ಹೆತ್ತವರು ಬಂದು ಬಾಗಿಲು ಬಡಿದಾಗಲೇ ಆತ್ಮಹತ್ಯೆ ವಿಚಾರ ತಿಳಿದುಬಂದಿತ್ತು.
ಘಟನೆಗೆ ಕಾರಣವೇನು, ಆಕೆಗೆ ಏನಾದ್ರೂ ಸಂಬಂಧ ಇತ್ತೇ, ಯಾವ ಕಾರಣದಿಂದ ಸಾವಿಗೆ ಶರಣಾಗಿದ್ದಾಳೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Sowjanya (22), residing near Brahmasthana Road, Padubidri in the taluk, ended her life on Thursday February 10 by hanging herself. She hanged from a noose she made by using a sari, the other end of which was tied to a metal hook in the roof ceiling.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm