ಹಿಜಾಬ್ ಕಿಚ್ಚಿನ ಬೆನ್ನಲ್ಲೇ ಸರಕಾರಿ ಶಾಲೆಯಲ್ಲಿ ನಮಾಜ್ ! ಕಡಬದ ವಿದ್ಯಾರ್ಥಿಗಳ ನಮಾಜ್ ವಿಡಿಯೋ ವೈರಲ್ ! 

11-02-22 07:48 pm       Mangalore Correspondent   ಕರಾವಳಿ

ಒಂದ್ಕಡೆ ಹಿಜಾಬ್ ವಿಚಾರ ಕಿಚ್ಚು ಹಬ್ಬಿಸಿರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಶಾಲೆಯ ಒಳಗೇ ನಮಾಜ್ ಮಾಡಿರುವ ಘಟನೆಯ ವಿಡಿಯೋ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ. ‌

ಮಂಗಳೂರು, ಫೆ.11 : ಒಂದ್ಕಡೆ ಹಿಜಾಬ್ ವಿಚಾರ ಕಿಚ್ಚು ಹಬ್ಬಿಸಿರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಶಾಲೆಯ ಒಳಗೇ ನಮಾಜ್ ಮಾಡಿರುವ ಘಟನೆಯ ವಿಡಿಯೋ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ. ‌

ಕಡಬ ತಾಲೂಕಿನ ಅಂಕತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ಕಳೆದ‌ ಮೂರು ವಾರಗಳಿಂದ ಶುಕ್ರವಾರ ದಿನ ಮಧ್ಯಾಹ್ನ ಶಾಲೆಯ ಕೊಠಡಿಯಲ್ಲೇ ನಮಾಜ್ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಹೇಳಲಾಗುತ್ತಿದೆ. 

ಐದು ಮಂದಿ ಮಕ್ಕಳು ನಮಾಜ್ ಮಾಡುತ್ತಿರುವುದನ್ನು ಮೊಬೈಲಿನಲ್ಲಿ ಸೆರೆ ಹಿಡಿಯಲಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿದ್ಯಾರ್ಥಿಗಳು ಶಾಲೆಯ ಒಳಗಡೆ ನಮಾಜ್ ಮಾಡಿದ್ದಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿದೆ.

ಮೂರು ವಾರಗಳಿಂದ ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿ ಗಳು ನಮಾಜ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದ್ದು , ಶಾಲಾ ಸಿಬ್ಬಂದಿ ಮೌನ ವಹಿಸಿರುವುದು ಶಂಕೆಗೆ ಕಾರಣವಾಗಿದೆ. ‌ಉಡುಪಿಯಲ್ಲಿ ಹಿಜಾಬ್ ಕುರಿತು ಸಂಘರ್ಷ ಏರ್ಪಟ್ಟ ಸಂದರ್ಭದಲ್ಲೇ ಇತ್ತ ಗ್ರಾಮಾಂತರ ಪ್ರದೇಶ ಕಡಬದ ಸರಕಾರಿ ಶಾಲೆಯೊಂದರಲ್ಲಿ ಈ ರೀತಿ ನಡೆದುಕೊಂಡಿದ್ದು ಪೂರ್ವಯೋಜಿತ ಮತ್ತು ಗಲಭೆ ಎಬ್ಬಿಸುವ ಹುನ್ನಾರ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಸರಕಾರಿ ಶಾಲೆಯಲ್ಲಿ ನಮಾಜ್ ನಡೆಸಲು ಅವಕಾಶ ಇಲ್ಲ. ಹಿಜಾಬ್ ಅವಕಾಶ ಕೊಡಬೇಕು ಎಂದು ಗುಲ್ಲು ಎಬ್ಬಿಸಿರುವಾಗಲೇ ಮುಂದೆ ನಮಾಜ್ ಮಾಡುವುದಕ್ಕೂ ಅನುಮತಿ ಕೇಳುತ್ತಾರೆ ಎನ್ನುವ ಮಾತು ಕೇಳಿಬಂದಿತ್ತು. ಈಗ ನಮಾಜ್ ಮಾಡುವುದನ್ನೇ ರೂಢಿ ಮಾಡಿರುವುದು ಕಡಬದಲ್ಲಿ ಬೆಳಕಿಗೆ ಬಂದಿದೆ.

Students found doing Namaz inside class room in Mangalore amid Hijab row in Karnataka, video goes viral. In the video five students are seen doing namaz.