ಬ್ರೇಕಿಂಗ್ ನ್ಯೂಸ್
11-02-22 11:00 pm HK Desk news ಕರಾವಳಿ
ಉಡುಪಿ, ಫೆ.11 : ಕರಾವಳಿಯಲ್ಲಿ ಹಿಜಾಬ್ ಸಂಘರ್ಷ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಉಡುಪಿ ಮತ್ತು ಮಂಗಳೂರು ನಗರದಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದ್ದಾರೆ.
ಉಡುಪಿ ನಗರದ ಪ್ರಮುಖ ಭಾಗಗಳಲ್ಲಿ ಪೊಲೀಸರು ಮತ್ತು ಹೆಚ್ಚುವರಿ ರಿಸರ್ವ್ ಪಡೆಗಳು ಪಥ ಸಂಚಲನ ನಡೆಸಿದೆ. ಸಾರ್ವಜನಿಕರಲ್ಲಿ ಧೈರ್ಯ ಮತ್ತು ವಿದ್ರೋಹಿಗಳಿಗೆ ಭಯ ಮೂಡಿಸಲು ಪಥ ಸಂಚಲನ ನಡೆಸಿದ್ದು ಜಾಗೃತಿ ಮೂಡಿಸುವ ಯತ್ನ ನಡೆದಿದೆ.
ಉಡುಪಿ ತಾಲೂಕಿನ ವಿವಿಧ ಠಾಣೆಯ 238ಕ್ಕೂ ಹೆಚ್ಚು ಪೊಲೀಸರು ರೂಟ್ ಮಾರ್ಚ್ ನಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ, 50 ಮಂದಿ ಪೊಲೀಸ್ ಅಧಿಕಾರಿಗಳು ಕೂಡ ಭಾಗಿಯಾಗಿದ್ದರು. ಸೋಮವಾರದಿಂದ ಹತ್ತನೇ ತರಗತಿ ವರೆಗೆ ಶಾಲೆ ನಡೆಯಲಿದ್ದು ಯಾವುದೇ ಕಾರಣಕ್ಕೂ ಕೇಸರಿ ಅಥವಾ ಹಿಜಾಬ್ ಕಾಣಿಸದಂತೆ ರಾಜ್ಯ ಸರಕಾರ ಮುನ್ಸೂಚನೆ ನೀಡಿದೆ. ಇದಕ್ಕಾಗಿ ಶಾಲೆಯ ಆವರಣದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ.
ಮಂಗಳೂರು ನಗರ ಹೊರವಲಯದ ಸುರತ್ಕಲ್, ಕಾಟಿಪಳ್ಳದಲ್ಲಿಯೂ ಶುಕ್ರವಾರ ಸಂಜೆ ಪೊಲೀಸರು ಮತ್ತು ಆರ್ ಎಎಫ್ ಪಡೆ ಪಥ ಸಂಚಲನ ನಡೆಸಿದ್ದು ಆಮೂಲಕ ಸೂಕ್ಷ್ಮ ಪ್ರದೇಶಗಳಲ್ಲಿ ವಿದ್ರೋಹಿಗಳಿಗೆ ಎಚ್ಚರಿಕೆ ರವಾನಿಸಿದೆ.
ಒಂದು ಬೆಟಾಲಿಯನ್ ಆರ್ ಎಎಫ್ ಪಡೆ ಆಗಮನ
ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಆರ್ ಎಎಫ್ ಒಂದು ಬೆಟಾಲಿಯನನ್ನು ಕರೆಸಿಕೊಳ್ಳಲಾಗಿದೆ. ಸದ್ಯಕ್ಕೆ 70 ಮಂದಿ ಮಂಗಳೂರಿಗೆ ಆಗಮಿಸಿದ್ದು ಅವರನ್ನು ಪಣಂಬೂರಿನಲ್ಲಿ ಇರಿಸಲಾಗುವುದು. ಇನ್ನೂ 60 ಮಂದಿ ಶನಿವಾರ ಬರಲಿದ್ದಾರೆ. ಅಹಿತಕರ ಘಟನಾ ಸ್ಥಳಕ್ಕೆ ಇಲ್ಲಿಂದಲೇ ತೆರಳಲಿದ್ದಾರೆ ಎಂದು ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
Security forces are holding a flag march in Udupi, the epicentre of pro and anti-hijab protests in the state. This comes after violent protests and stone-pelting over a government decision barring Muslim students from attending classes wearing hijab. Karnataka Police and paramilitary forces are holding the march as tense calm prevails throughout the state. Chief Minister Bommai had earlier appealed to all stakeholders involved to maintain calm.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 09:24 pm
HK News Desk
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm