ಬ್ರೇಕಿಂಗ್ ನ್ಯೂಸ್
12-02-22 10:02 pm Mangalore Correspondent ಕರಾವಳಿ
Photo credits : Headline Karnataka
ಮಂಗಳೂರು, ಫೆ.12 : ದೇಶದಲ್ಲಿ ಯಾವುದೇ ಪಕ್ಷ ಒಂದು ರಾಜ್ಯದಲ್ಲಿ ಸ್ವಂತ ನೆಲೆಯಲ್ಲಿ ಅಧಿಕಾರ ನಡೆಸುತ್ತೇನೆ ಎಂದು ಹೇಳುವಷ್ಟು ಪ್ರಭಾವ ಹೊಂದಿಲ್ಲ. ಬಿಜೆಪಿಯಲ್ಲಿ ಮೋದಿಯನ್ನು ಬಿಟ್ಟರೆ ಬೇರೆ ವ್ಯಕ್ತಿ ಕಾಣುವುದಿಲ್ಲ. ಕಾಂಗ್ರೆಸ್ ಸ್ಥಿತಿ ಬಹಳ ಕಷ್ಟದಲ್ಲಿದೆ. ಯಾವುದೇ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಬಿಟ್ಟು ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೇರಲು ಸಾಧ್ಯವಿಲ್ಲದ ಸ್ಥಿತಿಯಿದೆ. ಕರ್ನಾಟಕದಲ್ಲಿಯೂ ಮುಂದಿನ ಬಾರಿ ಸಮ್ಮಿಶ್ರ ಸರಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ್ದ ದೇವೇಗೌಡರು ಮಂಗಳೂರಿನ ಕಲ್ಲಾಪಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಂಗಳೂರಿಗೆ ಆಗಮಿಸಿದ್ದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಪಂಜಾಬ್ ನಲ್ಲಿ ಏನಾಗ್ತಿದೆ, ಪಶ್ಚಿಮ ಬಂಗಾಳ, ಗೋವಾ, ಮಹಾರಾಷ್ಟ್ರ, ಉತ್ತರಾಂಚಲದಲ್ಲಿ ಏನಾಗಿದೆ ಎನ್ನೋದು ನಿಮಗೆಲ್ಲ ಗೊತ್ತಿದೆ. ಉತ್ತರ ಪ್ರದೇಶದಲ್ಲಿ ಮೋದಿಯವರು ಸ್ವಲ್ಪ ಮುಂದೆ ಹೋಗಿದ್ದಾರೆ. ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಬಹಳ ಕಷ್ಟದಲ್ಲಿದೆ. ಬಿಜೆಪಿ ಭಾರೀ ಸ್ಪಿರಿಟ್ ನಲ್ಲಿದೆ. ಮುಂದಿನ ಬಾರಿಯೂ ಮೋದಿ ಗೆಲ್ಲಬೇಕೆಂದು ಬಹಳ ಪ್ರಯತ್ನ ಪಡುತ್ತಿದ್ದಾರೆ. 73 ವರ್ಷದ ಮೋದಿಯವರು ಪಕ್ಷಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಏನಾಗುತ್ತದೆ ಕಾದು ನೋಡಬೇಕು. ಪಂಚ ರಾಜ್ಯಗಳ ಚುನಾವಣೆಯಲ್ಲಿ ಏನಾಗುತ್ತೆ ಅನ್ನೋದ್ರಲ್ಲಿ ಸೂಚನೆ ಸಿಗಲಿದೆ ಎಂದು ಹೇಳಿದ್ದಾರೆ.
ರೀಜನಲ್ ಪಾರ್ಟಿ ಬಿಟ್ಟು ದೇಶ ಆಳೋದು ಕಷ್ಟ !
ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಬಂದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತೀರಿ ಎಂಬ ಪ್ರಶ್ನೆಗೆ, ಜಾತ್ಯತೀತ ಅಂಶವನ್ನು ಆಧರಿಸಿ ನಾವು ಆಯ್ಕೆ ಮಾಡುತ್ತೇವೆ. ನಾವು ಯಾರ ಜೊತೆಗೂ ದ್ವೇಷ ಕಟ್ಟಿಕೊಂಡು ಬಂದಿಲ್ಲ. ನಮ್ಮ ಆಯ್ಕೆ ಸ್ವತಂತ್ರ ಆಗಿರುತ್ತದೆ. ನಮ್ಮದು ಸಣ್ಣ ರಾಜಕೀಯ ಪಕ್ಷ, ಆದರೆ ಒಂದು ಮಾತು ಹೇಳುತ್ತೇನೆ. ಈ ರಾಜ್ಯದಲ್ಲಿ ಇಲ್ಲಿನ ರಾಜಕೀಯ ಸ್ಥಿತಿಗತಿ ನೋಡಿದರೆ ರೀಜನಲ್ ಪಾರ್ಟಿ ಬಿಟ್ಟು ದೇಶ ಆಳೋದು ಕಷ್ಟ ಎಂದು ದೇವೇಗೌಡ ಹೇಳಿದ್ದಾರೆ.
ಕರಾವಳಿಯಲ್ಲಿ ಸಮಸ್ಯೆ ಸೃಷ್ಟಿಸುವ ಶಕ್ತಿಗಳಿವೆ
ರಾಜ್ಯದಲ್ಲಿ ಹಿಜಾಬ್ ವಿವಾದ ಯಾವಾಗ, ಎಲ್ಲಿಂದ, ಯಾಕೆ ಪ್ರಾರಂಭವಾಯಿತು ಹೇಳಲು ಕಷ್ಟ. ಆದರೆ ಎರಡೂ ರಾಜಕೀಯ ಪಕ್ಷಗಳು ಆರೋಪ- ಪ್ರತ್ಯಾರೋಪ ಮಾಡುವುದರಲ್ಲಿ ಕಾಲ ಕಳೆಯುತ್ತಿದೆ. ಕರಾವಳಿ ಭಾಗದಲ್ಲಿ ಒಂದಲ್ಲ ರೀತಿ ಒಂದು ಸಮಸ್ಯೆ ಸೃಷ್ಟಿಸುವ ಶಕ್ತಿಗಳಿವೆ. ಪರಸ್ಪರ ಉದ್ರೇಕದಲ್ಲಿ ಮಾತನಾಡಿ, ಒಂದು ಕಡೆಯವರನ್ನು ಎತ್ತಿ ಕಟ್ಟುತ್ತಾರೆ. ಸಮಸ್ಯೆ ಸೃಷ್ಟಿಸಿ ಶಾಂತಿ ಕದಡುವುದರ ಹಿಂದೆ ಕೆಲವು ಶಕ್ತಿಗಳಿವೆ. ಇದರಿಂದ ಕೆಲವರಿಗೆ ರಾಜಕೀಯ ಲಾಭವಿದೆ ಎಂದು ಗೌಡರು ಹೇಳಿದರು.
ತಮಿಳುನಾಡಿನ ಒಗ್ಗಟ್ಟು ನಮ್ಮಲ್ಲಿ ಇಲ್ಲ
ತಮಿಳುನಾಡಿಗೆ ಯಾವೆಲ್ಲ ನೀರಾವರಿ ಯೋಜನೆಗಳಿಗೆ ಹಣ ಕೊಡಲಾಗಿದೆ, ನಮಗೇನು ಕೊಟ್ಟಿಲ್ಲ ಎಂದು ತಿಳಿದಿದೆ. ನಮ್ಮಲ್ಲಿ ಹಿಂದೆ ಬಿದ್ದಿದ್ದೇವೆ. ತಮಿಳುನಾಡಿನಲ್ಲಿ 48 ಎಂಪಿಗಳಿದ್ದಾರೆ, ನೀರಿನ ವಿಚಾರ ಬಂದರೆ ಎಲ್ಲರೂ ಒಗ್ಗಟ್ಟಾಗುತ್ತಾರೆ. ನಮ್ಮಲ್ಲಿ ಆ ರೀತಿಯ ಒಗ್ಗಟ್ಟು ಇಲ್ಲ. ಅದರಿಂದ ನಷ್ಟ ಆಗುತ್ತಿದೆ. ಇಂತಹ ವಿಷಯಗಳನ್ನು ಮುಂದಿಟ್ಟು ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಹೋರಾಟ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು ಎಚ್ಡಿಡಿ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧಿಸ್ತಾರೆಯೇ ಎಂಬ ಪ್ರಶ್ನೆಗೆ, ಅಲ್ಲಿ ಸಿದ್ದರಾಮಯ್ಯ, ಮಹದೇವಪ್ಪ ಎಲ್ಲ ಇದ್ದಾರೆ. ಅಲ್ಲಿಗೆ ಯಾಕೆ ಹೋಗಬೇಕು. ಚನ್ನಪಟ್ಟಣ, ರಾಮನಗರ ಬಿಟ್ಟು ಹೋಗಲ್ಲ ಕುಮಾರಣ್ಣ. ಅವರನ್ನು ನಮ್ಮಲ್ಲೇ ನಿಲ್ಲಬೇಕೆಂದು ಆಯಾ ಭಾಗದ ಸ್ಥಳೀಯ ಮುಖಂಡರು ಕೇಳುತ್ತಾರೆ. ಅದು ಸಹಜ ಎಂದರು. ಸಿಎಂ ಇಬ್ರಾಹಿಂ ಅವರನ್ನು ಒಂದು ಕಾಲದಲ್ಲಿ ಭದ್ರಾವತಿಯಿಂದ ಮೇಲೆ ತಂದಿದ್ದೇ ನಾನು. ಆನಂತರ ಗುಂಡೂರಾವ್, ಸಿದ್ರಾಮಯ್ಯ ಜೊತೆಗೆ ಹೋದರು. ರಾಜಕೀಯದಲ್ಲಿ ಏರುಪೇರು ಆಗುತ್ತದೆ. ನಮ್ಮ ಪಾರ್ಟಿಗೆ ಅಧ್ಯಕ್ಷ ಮಾಡಿದ್ದೆ. ಕುಮಾರಸ್ವಾಮಿ ಸರಕಾರದಲ್ಲಿ ನಾಲ್ಕು ಮಂದಿ ಮೈನಾರಿಟಿಗೆ ಮಿನಿಸ್ಟರ್ ಕೊಟ್ಟಿದ್ದೆ. ಈಗ ಇಬ್ರಾಹಿಂ ಮನಸ್ಸಲ್ಲಿ ಏನಿದೆ, ಗೊತ್ತಿಲ್ಲ. ಬಂದರೆ ನಿರಾಕರಣೆ ಮಾಡಲ್ಲ ಎಂದರು.
It is very tough to explain how and from where this controversy erupted,” said former prime minister H D Deve Gowda speaking on Hijab-saffron shawl in Mangalore here on Saturday February 12.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm