ಬ್ರೇಕಿಂಗ್ ನ್ಯೂಸ್
14-02-22 11:22 am Mangalore Correspondent ಕರಾವಳಿ
ಮಂಗಳೂರು, ಫೆ.13 : ಮೂರು ಕಾಸಿನ ಬೆಲೆಯಿಲ್ಲದವರು ನನಗೆ ಬುದ್ಧಿ ಹೇಳಲು ಬರುವುದು ಬೇಡ. ಬೇರೆ ಧರ್ಮೀಯರ ಕಾರ್ಯಕ್ರಮಕ್ಕೆ ಹೋಗುವುದನ್ನು ತಪ್ಪೆಂದು ಕೆಲವರು ಟೀಕಿಸುತ್ತಾರೆ. ಅದು ತಪ್ಪಾದಲ್ಲಿ ತಿದ್ದಲು ಧರ್ಮಗುರುಗಳು ಇದ್ದಾರೆ. ಅವರು ಸಲಹೆ, ಸೂಚನೆ ಕೊಟ್ಟರೆ ಒಪ್ಪಲು ನಾನು ತಯಾರಿದ್ದೇನೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಕಿಡಿಕಾರಿದ್ದಾರೆ.
ಖಾದರ್ ವಿಧಾನಸಭೆಯ ವಿಪಕ್ಷ ಉಪ ನಾಯಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಉಳ್ಳಾಲದ ಮಂಜನಾಡಿ ಕಾಂಗ್ರೆಸ್ ಗ್ರಾಮ ಸಮಿತಿ ಮತ್ತು ವಿವಿಧ ಕಾಂಗ್ರೆಸ್ ಗ್ರಾಮ ಘಟಕಗಳ ಆಶ್ರಯದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೇರೆ ಧರ್ಮದ ಕಾರ್ಯಕ್ರಮಕ್ಕೆ ಹೋದಾಗ ಇಲ್ಲಸಲ್ಲದ ಅಪಪ್ರಚಾರ ಮಾಡುವವರಿದ್ದಾರೆ. ಅಲ್ಲಿ ಏನಾದರೂ ಹೆಚ್ಚು ಕಮ್ಮಿಯಾದಲ್ಲಿ ಅದನ್ನು ತಿಳಿಸಲು ಹಿರಿಯರಿದ್ದಾರೆ. ಅವರು ಕೊಡುವ ಸಲಹೆ, ಸೂಚನೆಗಳನ್ನು ಒಪ್ಪಲು ನಾನು ತಯಾರಿದ್ದೇನೆ. ಆದರೆ, ಮೂರುಕಾಸಿನ ಬೆಲೆಯಿಲ್ಲದವರು ನನ್ನ ಬಗ್ಗೆ ಮಾತನಾಡುವ ಅವಶ್ಯಕತೆಯಿಲ್ಲ.
ಕೆಲವರಿಗೆ ಹಸಿರು ಕಂಡರೆ ಆಗುವುದಿಲ್ಲ, ಇನ್ನು ಕೆಲವರಿಗೆ ಕೇಸರಿ ಕಂಡರೆ ಆಗುವುದಿಲ್ಲ. ಮನುಷ್ಯರನ್ನು ಕಂಡರೆ ಆಗದವರು ಮನುಷ್ಯ ನಿರ್ಮಿಸಿದ ಬಣ್ಣಕ್ಕೆ ಬೆಲೆ ಕೊಡುತ್ತಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ಆಗುವ ಅಪಪ್ರಚಾರಗಳ ಕುರಿತು ಕಾರ್ಯಕರ್ತರು ಸೂಕ್ತ ಉತ್ತರ ಕೊಡಬೇಕಿದೆ ಎಂದರು.
ಕಾಂಗ್ರೆಸ್ ಪಕ್ಷದ ಸಿದ್ಧಾಂತ ಉಪಕಾರ ಮಾಡುವುದೇ ಹೊರತು ಉಪದ್ರ ಮಾಡುವುದಲ್ಲ. ಉಳ್ಳಾಲ ಉರೂಸ್ಗೆ ಸರ್ಕಾರ ಕೋಟ್ಯಂತರ ಅನುದಾನವನ್ನು ಒದಗಿಸಿದೆ. ಸಂಭ್ರಮದಿಂದ ಕಾರ್ಯಕ್ರಮ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ತೊಕ್ಕೊಟ್ಟು ಕೊರಗಜ್ಜನ ಕಟ್ಟೆಯಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಸೌಹಾರ್ದತೆಯ ಕೊಂಡಿಯಾಗಿ ಕಾಂಗ್ರೆಸ್ ಕಾರ್ಯಾಚರಿಸುತ್ತಿದೆ ಎಂದರು.
Mangalore I don't need any advice from people who don't have value for themselves.
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
07-09-26 01:22 pm
HK News Staffer
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
07-09-26 02:06 pm
HK News Staffer
ಪರವಾನಗಿ ಇಲ್ಲದೆ ಔಷಧಿ ದಾಸ್ತಾನು ; ಬೆಂಗಳೂರಿನ ಅಮೆಜ...
06-09-26 10:28 pm
ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಆರೋಪ ; ಹೈಕೋರ್ಟಿಗೆ...
06-09-26 06:11 pm
ತಾನು ಐಎಎಸ್ ಅಧಿಕಾರಿ, ಪ್ರವಾಸೋದ್ಯಮ ಇಲಾಖೆಯ ಹೊಟೇಲ...
05-09-26 08:58 pm
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm