ಅಲೋಶಿಯಸ್ ಕಾಲೇಜಿನಲ್ಲಿ ಹಿಜಾಬ್ ಗಲಾಟೆಯೆಂದು ಬಿಂಬಿಸಿ ವಿಡಿಯೋ ವೈರಲ್ ; ಕಮಿಷನರ್ ಸ್ಪಷ್ಟನೆ 

14-02-22 06:21 pm       Mangalore Correspondent   ಕರಾವಳಿ

ಹಳೆಯ ವಿಡಿಯೋವನ್ನು ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಹಿಜಾಬ್ ಗಲಾಟೆ ಆಗಿದೆಯೆಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದ್ದು ಈ ಬಗ್ಗೆ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. ‌

ಮಂಗಳೂರು, ಫೆ.14 : ಹಳೆಯ ವಿಡಿಯೋವನ್ನು ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಹಿಜಾಬ್ ಗಲಾಟೆ ಆಗಿದೆಯೆಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದ್ದು ಈ ಬಗ್ಗೆ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. ‌

ಹಿಜಾಬ್ - ಕೇಸರಿ ಗಲಾಟೆಗೆ ಥಳುಕು ಹಾಕುವ ರೀತಿ ವಿಡಿಯೋವನ್ನು ವೈರಲ್ ಮಾಡಲಾಗಿದ್ದು ವಿಡಿಯೋದಲ್ಲಿ ಎರಡು ತಂಡಗಳು ಅಲ್ಲಾ ಹು ಅಕ್ಬರ್ ಮತ್ತು ಜೈ ಶ್ರೀರಾಮ್ ಘೋಷಣೆ ಕೂಗುತ್ತಿರುವುದು ಕೇಳಿಬರುತ್ತದೆ. ಅಲೋಶಿಯಸ್ ಕಾಲೇಜು ಆವರಣದ ರೀತಿ ವಿಡಿಯೋದಲ್ಲಿ ಕಂಡುಬರುತ್ತಿದೆ. ಆದರೆ ಈ ವಿಡಿಯೋ ಹಳೆಯದಾಗಿದ್ದು ಮಂಗಳೂರಿನ ಅಲೋಶಿಯಸ್ ಕಾಲೇಜಿನದ್ದಲ್ಲ ಎಂದು ಕಮಿಷನರ್ ತಿಳಿಸಿದ್ದಾರೆ. 

ಹಿಜಾಬ್ ಗಲಾಟೆಯ ಹಿನ್ನೆಲೆಯಲ್ಲಿ ಇಂದು ಅಲೋಶಿಯಸ್ ನಲ್ಲಿ ನಡೆದಿರುವ ಗಲಾಟೆ ಎಂದು ಬಿಂಬಿಸಿ ವಿಡಿಯೋ ವೈರಲ್ ಮಾಡಲಾಗುತ್ತಿದೆ.‌ ಆದರೆ ಮಂಗಳೂರಿನಲ್ಲಿ ಯಾವುದೇ ರೀತಿಯ ಗಲಾಟೆ ನಡೆದಿಲ್ಲ. ಎಲ್ಲರೂ ಶಾಂತಿಯುತ ಸಹಕರಿಸಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.

Mangalore Miscreants circulate hijab kesari row old video mentioning as Alysious college video, Commissioner Shashi Kumar clarifies stating that the video is not of Mangalore.