ಬ್ರೇಕಿಂಗ್ ನ್ಯೂಸ್
16-02-22 10:40 pm Mangalore Correspondent ಕರಾವಳಿ
ಮಂಗಳೂರು, ಫೆ.16 : ಹಿಜಾಬ್ ಅವರವರ ಆಯ್ಕೆ. ಬಲವಂತವಾಗಿ ಹಿಜಾಬ್ ಅನ್ನು ತೆಗೆಸುವುದು ಸರಕಾರಿ ಪ್ರಾಯೋಜಿತ ಕ್ರಿಮಿನಲ್ ಆ್ಯಕ್ಟಿವಿಟಿ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಹೈಕೋರ್ಟಿನ ಮಧ್ಯಂತರ ಆದೇಶ ಸರಕಾರಿ ಪ.ಪೂ. ಕಾಲೇಜುಗಳಲ್ಲಿ ಎಲ್ಲಿ ಸಮವಸ್ತ್ರ ಕಡ್ಡಾಯ ಇದೆಯೋ ಅಲ್ಲಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥೈಸದೆ ರಾಜ್ಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಹಿಜಾಬ್ ಅನ್ನು ಬಲವಂತವಾಗಿ ತೆಗೆಸಲಾಗುತ್ತದೆ. ಹಿಜಾಬ್ ಧರಿಸಿರುವುವವರನ್ನು ಬೆನ್ನಟ್ಟಿ ಕಿರುಕುಳ ನೀಡಲಾಗುತ್ತಿದೆ. ಶಿಕ್ಷಣ ಇಲಾಖೆ, ಗೃಹ ಇಲಾಖೆಗಳು ಕೋರ್ಟ್ ಆದೇಶ ಪಾಲನೆ ಮಾಡಬೇಕು. ಆದೇಶ ಅನ್ವಯವಾಗದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ತೆಗೆಯಲೆತ್ನಿಸದರೆ ಅಂತಹ ಅಧಿಕಾರಿಗಳು ಶಿಕ್ಷಕರ ಮೇಲೆ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ನವರು ತಮ್ಮ ಇಬ್ಬಂದಿ ನೀತಿಯನ್ನು ಸರಿಪಡಿಸಲಿ. ಮುಸ್ಲಿಮರ ಓಟ್ ಬೇಕು, ಅವರ ಜ್ವಲಂತ ಸಮಸ್ಯೆಯ ಬಗ್ಗೆ ಕಾಳಜಿಯಿಲ್ಲ. ಡಿಕೆಶಿ ಯಾವುದೇ ರೀತಿ ಹಿಜಾಬ್ ಬಗ್ಗೆ ಮಾತನಾಡುವುದಿಲ್ಲ. ಅವರು ಸಾಫ್ಟ್ ಹಿಂದುತ್ವ ಅಜೆಂಡಾ ತೆಗೆದುಕೊಂಡು ತಮ್ಮ ಪಕ್ಷದ ಸಮಾಧಿಯನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಭಯದ ವಾತಾವರಣವನ್ನು ತೆಗೆಯುವಂತೆ ಮಾಡಬೇಕು. ಹಿಜಾಬ್ ಮೂಲಭೂತ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ. ಪ್ರತಿಪಕ್ಷ ತಮ್ಮ ಬದ್ಧತೆ ಪ್ರದರ್ಶಿಸಲಿ. ಮೊದಲು ಹಿಜಾಬ್ ಬಗ್ಗೆ ಖಚಿತ ಮಾತು ಹೇಳಲಿ ಎಂದರು ಅಬ್ದುಲ್ ಮಜೀದ್.

ವಿಧಾನ ಸೌಧದದಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲಿ. ಆದ್ದರಿಂದ ಕಾಂಗ್ರೆಸ್ ನ, ಜೆಡಿಎಸ್ ನ ಬದ್ಧತೆಯನ್ನು ಪ್ರಶ್ನಿಸಬೇಕಾಗುತ್ತದೆ. ಇದಕ್ಕೆ ಸೌಹಾರ್ದಯುತ ಪರಿಹಾರವನ್ನು ಪಡೆಯಬೇಕು. ಮಾಧ್ಯಮಗಳು ಸೇರಿದಂತೆ ರಾಜಕೀಯ ಪಕ್ಷಗಳು ತಮ್ಮ ಕರ್ತವ್ಯ ಪಾಲಿಸಬೇಕು ಎಂದು ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಭಾಸ್ಕರ ಪ್ರಸಾದ್ ಹೇಳಿದ್ದಾರೆ.
ಹಿಜಾಬ್ ನಿಷೇಧಿಸಿದ್ದು ಓರ್ವ ಅಜ್ಞಾನಿ ಪ್ರಾಂಶುಪಾಲ. ಯಾವುದೇ ಧಾರ್ಮಿಕ ಗುರುತುಗಳನ್ನು ಧರಿಸಿ ಶಾಲೆಗೆ ಹೋಗಬಾರದು. ಹಾಗಾದರೆ ನಾಮ, ಜನಿವಾರ, ಶಾಲೆಯಲ್ಲಿನ ಗಣೇಶ, ಸರಸ್ವತಿ ಫೋಟೋಗಳಿಗೆ ಅನ್ವಯ ಆಗುದಿಲ್ಲವೇ ಎಂದು ಪ್ರಶ್ನೆ ಮಾಡಿದರು. ಈ ವಿವಾದದ ಹಿಂದೆ ಎಸ್ಡಿಪಿಐ ಇದೆಯೆಂಬ ಆರೋಪದ ಬಗ್ಗೆ, ಎಸ್ ಡಿಪಿಐಗೆ ಆ ರೀತಿಯ ಗತಿಗೇಡು ಬಂದಿಲ್ಲ. ಮಕ್ಕಳನ್ನು ರಾಜಕೀಯ ದಾಳಕ್ಕೆ ಬಳಸುವ ಕೆಲಸ ಯಾವತ್ತೂ ಮಾಡೋದಿಲ್ಲ. ಈ ಬಗ್ಗೆ ಯಾರು ಬೇಕಾದ್ರು ಬಹಿರಂಗ ಚರ್ಚೆಗೆ ಬರಲಿ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಲ್ಲರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು ಭಾಸ್ಕರ್.
On a day when colleges in the state reopened after being shut for over a week amidst the Hijab versus saffron shawl issue, the Social Democratic Party of India (SDPI) alleged that the whole issue was a 'criminal activity sponsored by the BJP government.
11-06-26 08:31 pm
HK News Staffer
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
11-06-26 06:37 pm
HK News Staffer
26 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ ! ಧರ್ಮಸ್ಥಳ...
11-06-26 04:21 pm
ಕರಾವಳಿಯಲ್ಲಿ ಮುಂಗಾರು ಅಬ್ಬರ; ಮಂಗಳೂರಿನ ಬೀಚ್ಗಳಲ...
11-06-26 02:47 pm
ಮಂಗಳೂರು ನಗರದಲ್ಲಿ ಅಕ್ರಮ ಫ್ಲೆಕ್ಸ್ , ಬ್ಯಾನರ್ ತ...
10-06-26 10:03 pm
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
11-06-26 08:44 pm
HK News Staffer
ಮಾಣಿ ; ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು, ಗಾಡಿ ಪಲ್...
11-06-26 11:43 am
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm