ಬ್ರೇಕಿಂಗ್ ನ್ಯೂಸ್
17-02-22 07:05 pm Mangalore Correspondent ಕರಾವಳಿ
ಮಂಗಳೂರು, ಫೆ.17 : ರಾಜ್ಯದಲ್ಲಿ ಹಿಂದು ದೇಗುಲಗಳನ್ನು ಸರಕಾರದ ಆಡಳಿತದಿಂದ ಮುಕ್ತಗೊಳಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುತುವರ್ಜಿಯನ್ನು ಸ್ವಾಗತಿಸುತ್ತೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ಹಿಂದು ದೇವಾಲಯಗಳನ್ನು ಸರಕಾರದ ಆಡಳಿತದಿಂದ ಮುಕ್ತಗೊಳಿಸುವಂತೆ ಮತ್ತು ಎ ಗ್ರೇಡ್ ದೇವಾಲಯಗಳ ಅಧೀನದಲ್ಲಿ ಗೋಶಾಲೆಗಳನ್ನು ತೆರೆಯಲು ಆದೇಶ ಹೊರಡಿಸುವಂತೆ ಮನವಿ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಹಿಂದು ದೇವಾಲಯಗಳನ್ನು ಸರ್ಕಾರದ ಆಡಳಿತದಿಂದ ಮುಕ್ತಗೊಳಿಸುವ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಈ ಪ್ರಕ್ರಿಯೆ ಜರುಗಿಸುವ ಸಂದರ್ಭದಲ್ಲಿ ಎ ಗ್ರೇಡ್ ದೇವಸ್ಥಾನಗಳ ಅನುದಾನದಿಂದ ಪ್ರತ್ಯೇಕ ಗೋಶಾಲೆ ತೆರೆಯಲು ಅವಕಾಶ ಮಾಡಿಕೊಡಬೇಕು. ರಾಜ್ಯದ ಎ ಗ್ರೇಡ್ ದೇವಸ್ಥಾನದ ಆಡಳಿತ ಮಂಡಳಿಗಳ ವತಿಯಿಂದಲೇ ಗೋ ಶಾಲೆಗಳನ್ನು ನಿರ್ವಹಿಸಲು ಆದೇಶದಲ್ಲಿ ಉಲ್ಲೇಖಿಸಬೇಕು. ಹೀಗೆ ಮಾಡಿದಲ್ಲಿ ಗೋವುಗಳ ಕಳ್ಳತನ, ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಬೀಳಲಿದೆ.
ಇದರಿಂದ ಗೋಮಾತೆಗೂ ರಕ್ಷಣೆ ಕೊಟ್ಟಂತಾಗುತ್ತದೆ. ಇದಲ್ಲದೆ, ಗೋವಿನ ಸಂತತಿಯೂ ಹೆಚ್ಚಲಿದ್ದು , ಆಯಾ ಜಿಲ್ಲೆಯಲ್ಲಿ ಗೋವುಗಳನ್ನು ಸಾಕಲು ಸಾಧ್ಯವಾಗದವರು ಕಟುಕರಿಗೆ ಕೊಡುವ ಬದಲು ಇಂತಹ ಎ ಗ್ರೇಡ್ ದೇವಸ್ಥಾನಗಳ ಗೋಶಾಲೆಗಳಿಗೆ ನೀಡಲು ಸಾಧ್ಯವಾಗುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಎ ಗ್ರೇಡ್ ದೇವಸ್ಥಾನದಲ್ಲಿ ಗೋಶಾಲೆ ತೆರೆಯಲು ಷರತ್ತು ವಿಧಿಸಬೇಕು. ಈ ಬಗ್ಗೆ ದೇವಸ್ಥಾನ ಮುಕ್ತಗೊಳಿಸುವ ಆದೇಶದಲ್ಲಿ ಉಲ್ಲೇಖ ಮಾಡುವಂತೆ ಮನವಿ ಮೂಲಕ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.
Mangalore MLA Vedavyas Kamath requests cm to open Goshala in temple funds. He issued a memorandum to Chief Minister Bommai stating to build Goshala using each temple funds all over.
20-01-25 07:00 pm
HK News Desk
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
ಮುಡಾ ಸೈಟ್ ಹಗರಣ ; 300 ಕೋಟಿ ಮೌಲ್ಯದ 142 ಆಸ್ತಿಗಳನ...
18-01-25 05:05 pm
ಗದಗ ; ಪ್ರೀತಿಸಲು ಪೀಡಿಸುತ್ತಿದ್ದ ಇಬ್ಬರು ಯುವಕರು,...
16-01-25 05:30 pm
19-01-25 08:17 pm
HK News Desk
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
Actor Saif Ali Khan attack stabbed: ಬಾಲಿವುಡ್...
16-01-25 04:24 pm
21-01-25 12:21 pm
Mangaluru Correspondent
Kotekar Bank Robbery, Mangalore Meeting: ಬ್ಯಾ...
20-01-25 11:05 pm
Mangalore, Ivan dsouza, CM Siddaramaiah: ಬಹು...
20-01-25 06:00 pm
International Kite Festival 2025, Thannirbhav...
18-01-25 09:27 pm
Mangalore Dinesh Gundu Rao, belthandy: ತಾಲೂಕು...
18-01-25 06:16 pm
20-01-25 10:18 pm
HK News Desk
Mangalore Kotekar Bank Robbery, Three Arreste...
20-01-25 07:19 pm
Mangalore Kotekar Robbery, Davanagere: ಮಂಗಳೂರ...
20-01-25 05:20 pm
Mysuru Robbery, Bidar Mangalore, Crime; ಬೀದರ್...
20-01-25 01:25 pm
Bidar Bank Robbery, bihar gang, Update: ಬೀದರ್...
19-01-25 07:52 pm