ಬ್ರೇಕಿಂಗ್ ನ್ಯೂಸ್
21-02-22 07:45 pm Mangaluru Correspondent ಕರಾವಳಿ
ಮಂಗಳೂರು, ಫೆ.21: ಶಿವಮೊಗ್ಗದಲ್ಲಿ ನಡೆದ ಯುವಕನ ಕೊಲೆ ಘಟನೆಯನ್ನು ಪ್ರಸ್ತಾವಿಸಿ ಮಂಗಳೂರು ಮುಸ್ಲಿಮ್ಸ್ ಎನ್ನುವ ಫೇಸ್ಬುಕ್ ಪೇಜ್ ನಲ್ಲಿ ಅವಹೇಳನಕಾರಿಯಾಗಿ ಬರೆಯಲಾಗಿದ್ದು, ಅದರ ಪೋಸ್ಟ್ ಕರಾವಳಿಯಲ್ಲಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆಯಾಗಿರುವ ಹರ್ಷ ಎಂಬ ಯುವಕನನ್ನು ಶಿವಮೊಗ್ಗದ ಬೀದಿನಾಯಿ ಎಂದು ಉಲ್ಲೇಖಿಸಿದ್ದು, ಆತ 2015ರಲ್ಲಿ ಪ್ರವಾದಿಯನ್ನು ನಿಂದನೆ ಮಾಡಿದ್ದಾನೆ. ಪ್ರವಾದಿ ನಿಂದನೆ ಮಾಡಿದ ಯಾವುದೇ ವ್ಯಕ್ತಿಗಳಾದರೂ ಆಯುಷ್ಯ ಕಡಿಮೆ ಇರುತ್ತದೆ, ಎಷ್ಟೇ ಪ್ರಭಾವಿ ಆದರೂ ಆಯುಷ್ಯ ವೃದ್ಧಿ ಆಗಲಾರದು ಎಂದು ಫೇಸ್ಬುಕ್ ಪೇಜ್ ನಲ್ಲಿ ಬರೆಯಲಾಗಿದೆ. ಇದೇ ರೀತಿ ಪ್ರವಾದಿ ನಿಂದನೆ ಮಾಡಿದ ಅಜಿತ್ ಹನುಮಕ್ಕನವರ್ ಅವರನ್ನೂ ಮಂಗಳೂರು ಮುಸ್ಲಿಮ್ಸ್ ಮರೆತಿಲ್ಲ. ಪೊಲೀಸ್ ಇಲಾಖೆ ಮತ್ತು ಸರಕಾರಕ್ಕೆ ಈ ಮೂಲಕ ಮಂಗಳೂರು ಮುಸ್ಲಿಮ್ಸ್ ಸುಳಿವು ನೀಡುತ್ತಿದೆ. ಕೊಲೆಯ ಸತ್ಯಾಸತ್ಯತೆಯನ್ನು ಅರಿಯಲು ಈಶ್ವರಪ್ಪ ಅವರನ್ನು ಬಂಧಿಸಿ ತನಿಖೆ ನಡೆಸಿ. ಅವರು ಮುಸ್ಲಿಮರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆಯೇ ಎಂದು ಬಾಯಿಬಿಡಿಸಿ ಎಂಬುದಾಗಿ ಬರೆಯಲಾಗಿತ್ತು.
ಈ ರೀತಿ ಬರೆದಿರುವ ಪೋಸ್ಟ್ ಸ್ಕ್ರೀನ್ ಶಾಟ್, ಸೋಮವಾರ ಮಧ್ಯಾಹ್ನ ವಾಟ್ಸಪ್ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಾಗುತ್ತಿದ್ದಂತೆ ಮಂಗಳೂರು ಮುಸ್ಲಿಮ್ಸ್ ಎನ್ನುವ ಪೇಜನ್ನು ಫೇಸ್ಬುಕ್ ನಿಂದ ಡಿಲೀಟ್ ಮಾಡಲಾಗಿತ್ತು. ಈ ಬಗ್ಗೆ ಹಿಂದು ಸಂಘಟನೆಗಳ ಕಡೆಯಿಂದ ಆಕ್ರೋಶವೂ ಕೇಳಿಬಂದಿದ್ದು, ಇದೇ ಪೋಸ್ಟ್ ಅನ್ನು ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಂಡು ಇದರ ಬಗ್ಗೆ ಕ್ರಮಕ್ಕೆ ಆಗ್ರಹಿಸಿದ್ದರು. ಯುವಕನ ಕೊಲೆಯನ್ನು ಸಮರ್ಥಿಸಿದ್ದಲ್ಲದೆ, ಈಶ್ವರಪ್ಪ ಇದರ ಹಿಂದಿದ್ದಾರೆ ಅನ್ನುವ ರೀತಿ ಬಿಂಬಿಸಿ ಬರೆದಿದ್ದ ಬಗ್ಗೆ ಆಕ್ರೋಶ ಹೊರಹಾಕಿದ್ದರು.
ಈ ವೈರಲ್ ಪೋಸ್ಟ್ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಸೂಚನೆಯಂತೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 153 ಎ ಅಡಿ ಮತೀಯ ದ್ವೇಷ ಹರಡುವುದು, ಕೊಲೆ ಬೆದರಿಕೆ, ಒಂದು ಸಮುದಾಯವನ್ನು ಎತ್ತಿ ಕಟ್ಟುವುದು ಇತ್ಯಾದಿ ಆರೋಪದಡಿ ಮತ್ತು ಐಟಿ ಆಕ್ಟ್ ನಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಕಮಿಷನರ್ ಶಶಿಕುಮಾರ್, ನಮ್ಮ ಐಟಿ ಸೆಲ್ ಸಾಮಾಜಿಕ ಜಾಲತಾಣದ ಬಗ್ಗೆ ಗಂಭೀರವಾಗಿದ್ದು ನೂರಕ್ಕೂ ಹೆಚ್ಚು ವಿವಿಧ ಮಾದರಿಯ ಸೋಶಿಯಲ್ ಮೀಡಿಯಾ ಗ್ರೂಪ್, 1064 ವಿವಿಧ ವ್ಯಕ್ತಿಗಳ ಬಗ್ಗೆ ನಿಗಾ ಇಟ್ಟಿದ್ದೇವೆ. ಎರಡು ತಿಂಗಳಿನಿಂದ ಅವರ ಸೋಶಿಯಲ್ ಮೀಡಿಯಾ ತಾಣಗಳನ್ನು ತನಿಖೆ ನಡೆಸುತ್ತಿದ್ದೇವೆ. ಯಾರೇ ಆದರೂ ಕೋಮು ವಿಷಬೀಜ ಬಿತ್ತುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಮಂಗಳೂರು ಮುಸ್ಲಿಮ್ಸ್ ಎನ್ನುವ ಪೇಜಿನ ಸೃಷ್ಟಿಕರ್ತರು ಯಾರಿದ್ದಾರೆ ಅನ್ನುವುದನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಈ ರೀತಿ ದ್ವೇಷ ಹರಡುವ ಪೋಸ್ಟ್ ಗಳನ್ನು ಷೇರ್ ಮಾಡುವುದು, ಲೈಕ್ ಕೊಡುವುದು ಕೂಡ ಅಪರಾಧಕ್ಕೆ ಸಮಾನವಾಗಿದ್ದು, ಅವರನ್ನು ಕೂಡ ಪ್ರಕರಣದಲ್ಲಿ ಸೇರಿಸಲಾಗುವುದು. ಕಾನೂನಿನ ಬಗ್ಗೆ ತಿಳುವಳಿಕೆ ಇಲ್ಲದೆ ಲೈಕ್ ಕೊಟ್ಟೆ ಎಂದು ಹೇಳಿ ಕಾನೂನು ಕುಣಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Derogatory comment on Islam reason for Harsha Murder in Shivamogga, Mangalore Mulsim Facebook page post goes viral. A Facebook post stated that the Derogatory post made on Islam in 2015 by Harsha is the reason for his murder. Mangalore city police commissioner Shashi Kumar said that a sumoto case has been registered in the cyber crime police station all those who have liked and shared the page will be booked.
01-10-25 10:06 pm
HK News Desk
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬ...
30-09-25 01:08 pm
01-10-25 09:44 pm
HK News Desk
Cough Syrup Side Effects Suspected, Kidney Fa...
01-10-25 05:32 pm
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
02-10-25 11:43 am
Mangalore Correspondent
Mangalore, Pilinalike 2025: ಪಿಲಿನಲಿಕೆ ಉತ್ಸವಕ್...
01-10-25 11:00 pm
Jayanth, Chinnayya, Dharmasthala Case: ಚಿನ್ನಯ...
01-10-25 04:45 pm
ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ತಂಡದ ಮುಡಿಗೇರಿದ ಕು...
01-10-25 03:35 pm
ಮಂಗಳೂರು ಪೂರ್ತಿ ಝಗಮಗ ; ಕೋಟಿ ಕೋಟಿ ಮಿನಿಚರ್ ಅಳವಡಿ...
30-09-25 10:57 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm