ಬ್ರೇಕಿಂಗ್ ನ್ಯೂಸ್
24-02-22 10:38 pm Mangalore Correspondent ಕರಾವಳಿ
Photo credits : Headline Karnataka
ಉಳ್ಳಾಲ, ಫೆ.24 : ಹಿಜಾಬ್ ಕಿಚ್ಚು ಉಳ್ಳಾಲಕ್ಕೂ ಹಬ್ಬಿದ್ದು ಇಂದು ಭಾರತ್ ಪಿಯು ಕಾಲೇಜಿನ ತರಗತಿಯೊಳಗೆ ಆಡಳಿತವು ಹಿಜಾಬ್ ನಿರಾಕರಿಸಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಕಾಲೇಜಿನ ಆಡಳಿತ ಇರುವ ಮೊಗವೀರ ಸಂಘವು ಸರಕಾರದ ಆದೇಶವನ್ನೇ ಯಥಾವತ್ತಾಗಿ ಪಾಲಿಸಲು ನಿರ್ಧರಿಸಿದೆ.
ಹಿಜಾಬ್ ಕಿಚ್ಚು ಉಳ್ಳಾಲಕ್ಕೂ ವ್ಯಾಪಿಸಿದ್ದು ಮಾಸ್ತಿಕಟ್ಟೆಯ ಭಾರತ್ ಪಿಯು ಕಾಲೇಜಲ್ಲೂ ಹಿಜಾಬ್ ವಿವಾದ ಪೀಕಲಾಟ ಆರಂಭವಾಗಿದೆ. ನಿನ್ನೆ ಜಿಲ್ಲಾ ಶಿಕ್ಷಣ ಇಲಾಖೆಯಿಂದ ತರಗತಿ ಒಳಗಡೆ ಹಿಜಾಬ್ ಧರಿಸಬಾರದು ಎಂಬ ಆದೇಶ ಬಂದ ಹಿನ್ನಲೆಯಲ್ಲಿ ಉಳ್ಳಾಲದ ಭಾರತ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ನಿನ್ನೆಯೇ ತರಗತಿ ಒಳಗಡೆ ಹಿಜಾಬ್ ಧರಿಸುವಂತಿಲ್ಲ ಎಂದು ತಿಳಿಸಿದ್ದರು.

ಇಂದು ಬೆಳಗ್ಗೆಯೇ ಮುಸ್ಲಿಂ ವಿದ್ಯಾರ್ಥಿನಿಯರೆಲ್ಲ ಕಾಲೇಜಿಗೆ ಪೋಷಕರ ಜೊತೆಗೆ ಎಂಟ್ರಿ ನೀಡಿದ್ದರಲ್ಲದೆ ತರಗತಿಯನ್ನ ಬಹಿಷ್ಕರಿಸಿದ್ದರು. ಕಾಲೇಜಿನಲ್ಲಿ ಇಂದು ನಡೆದ ಶಾಲಾಡಳಿತ ಮತ್ತು ಪೋಷಕರ ಸಭೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿ ಒಳಗಡೆ ಹಿಜಾಬ್ ಗೆ ಅವಕಾಶ ನೀಡಲು ಒತ್ತಾಯಿಸಿದ್ದು, ತಮಗೆ ಟಿ.ಸಿ ನೀಡಿ ಅಥವಾ ಕೋರ್ಟ್ ಆದೇಶ ಬರುವವರೆಗೂ ರಜೆ ನೀಡಿ ಎಂದು ಅಳವತ್ತು ತೋಡಿದ್ದರು.

ಸಂಸ್ಥೆಯ ಮೇಲುಸ್ತುವಾರಿ ಹೊಂದಿರುವ ಉಳ್ಳಾಲ ಮೊಗವೀರ ಸಂಘ ಮತ್ತು ಪೋಷಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾದ ಮನೋಜ್ ಸಾಲ್ಯಾನ್ ಮತ್ತು ಪದಾಧಿಕಾರಿಗಳು ಇಂದು ಮಾತ್ರ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು ಸಂಜೆ ನಡೆಯುವ ಶಾಲಾಡಳಿತ ಕಮಿಟಿಯ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವುದೆಂದು ಹೇಳಿದ್ದರು.

ಇಂದು ಸಂಜೆ ಉಳ್ಳಾಲ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಸರಕಾರದ ಆದೇಶವನ್ನೇ ಯಥಾವತ್ತಾಗಿ ಪಾಲಿಸೋ ನಿರ್ಧಾರ ಕೈಗೊಳ್ಳಲಾಗಿದೆ. ಸರಕಾರದ ಆದೇಶದಂತೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಕಳಚಿ ತರಗತಿ ಪ್ರವೇಶಿಸಿಸಬೇಕು. ಬುರ್ಖಾ , ಹಿಜಾಬ್ ಕಳಚಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆಯೆಂದು ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಸಾಲ್ಯಾನ್ ಹೇಳಿದ್ದಾರೆ.
Hijab row in Ullal PU college in Mangalore, college authorities which is run by Mogaveera committee has decided to follow government order. Today high drama was created by Muslim students as they threatened the college authorities to issue TC if they aren't allowed inside college with Hijab.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
07-09-26 01:22 pm
HK News Staffer
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
06-09-26 10:28 pm
HK News Staffer
ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಆರೋಪ ; ಹೈಕೋರ್ಟಿಗೆ...
06-09-26 06:11 pm
ತಾನು ಐಎಎಸ್ ಅಧಿಕಾರಿ, ಪ್ರವಾಸೋದ್ಯಮ ಇಲಾಖೆಯ ಹೊಟೇಲ...
05-09-26 08:58 pm
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm